3ಜಿ ಡಾಟಾ ಸಂಪರ್ಕ ಸದ್ಯದಲ್ಲಿ ಕಾರ್ಯಾರಂಭ

BELAGAM-5
ಕುಳಗೇರಿ ಕ್ರಾಸ್,ಆ.31- ಸದ್ಯದಲ್ಲಿ ಬಾದಾಮಿ ತಾಲೂಕಿನ ಬಿಎಸ್‍ಎನ್‍ಎಲ್ ಸಂಪರ್ಕ ಕೇಂದ್ರದಲ್ಲಿ ಇನ್ನು ಮುಂದೆ ಗ್ರಾಹಕರಿಗಾಗಿ 3ಜಿ ಡಾಟಾ ಸಂಪರ್ಕ ಕಾರ್ಯರೂಪಕ್ಕೆ ಬಂದಿದ್ದು ಸದ್ಯದಲ್ಲಿ ಕಾರ್ಯಾರಂಭ ಗೊಳ್ಳಲಿದೆ ಎಂದು ಬಾಗಲಕೋಟ- ಬಿಜಾಪೂರ ಅವಳಿ ಜಿಲ್ಲೆಗೆ ನಿರ್ದೆಶಕರಾಗಿ ಆಯ್ಕೆಗೊಂಡ ಮಮಟಗೇರಿ ಗ್ರಾಮದ ಪಾಂಡಪ್ಪ ಈಳಗೇರ ತಿಳಿಸಿದ್ದಾರೆ. ಐತಿಹಾಸಿಕ ಸ್ಥಳ ಬಾದಾಮಿ ಪ್ರವಾಸಿಗರ ತಾಣವಾಗಿದ್ದು ದಿನಂಪ್ರತಿ ಸಾವಿರಾರು ಪ್ರವಾಸಿಗರು ಬರುತ್ತಿರುವ ಗಮನಿಸಿ ನೂತನವಾಗಿ ಆಯ್ಕೆಗೊಂಡ ಪಾಂಡಪ್ಪ ಈಳಗೇರ ಸಭೈಯಲ್ಲಿ ತಿಳಿಸಿ ಗ್ರಾಹಕರಿಗೆ ಅನಕೂಲವಾಗುವ 3ಜಿ ಸಿಘ್ರದಲ್ಲೆ ಪ್ರಾರಂಭಗೊಳ್ಳಲಿದೆ ಎಂದರು.ರಾಜ್ಯಸಭಾ ಸದಸ್ಯ ಬಿ.ಕೆ. ಹರಿಪ್ರಸಾದ, ಮೂರು ಜಿಲ್ಲಾ ಬಿಎಸ್‍ಎನ್‍ಎಲ್ ಮುಖ್ಯಸ್ಥ ಧೀಪಕ್, ಅವಳಿ ಜಿಲ್ಲೆ ಮುಖ್ಯಸ್ಥ ಮೌಳಿ, ಆರ್.ಎಚ್. ಕಾಯ್, ಬಾದಾಮಿ ಎಚ್.ಸಿ. ತಿಡಗೂಡಿ ಇದ್ದರು.

 

► Follow us on –  Facebook / Twitter  / Google+

Sri Raghav

Admin