3ನೇ ಟೆಸ್ಟ್ : ಭಾರತಕ್ಕೆ 8 ವಿಕೆಟ್‍ಗಳ ಭರ್ಜರಿ, ಸರಣಿಯಲ್ಲಿ 2-0 ಮುನ್ನಡೆ

Spread the love

3rd-Testy-02

ಮೊಹಾಲಿ.ನ.29. ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆದ ಮೂರನೇ ಟೆಸ್ಟ್ ಪಂದ್ಯದಲ್ಲಿ ಅತಿಥೇಯ ಭಾರತ 8 ವಿಕೆಟ್‍ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಸರಣಿಯಲ್ಲಿ 2-0ಯಿಂದ ಮುನ್ನಡೆ ಸಾಧಿಸಿತು. ಆಂಗ್ಲರು ನೀಡಿದ 103 ರನ್‍ಗಳ ಸಾಧಾರಣ ಗುರಿ ಬೆನ್ನಟ್ಟಿದ್ದ ಭಾರತ 2 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ಭಾರತ ಪರ ಪಾರ್ಥಿವ್ ಪಟೇಲ್ ಅಜೇಯ (67) ಅರ್ಧಶತಕ ಬಾರಿಸಿದರು. ವಿಜಯ್ 0, ಪೂಜಾರ 25, ನಾಯಕ ಕೊಹ್ಲಿ ಅಜೇಯ 6 ರನ್ ದಾಖಲಿಸಿದರು ಇದಕ್ಕೂ ಮುನ್ನ ದಿನದಾಟ ಆರಂಭಿಸಿದ ಆಂಗ್ಲರು ಭಾರತದ ಬೌಲಿಂಗ್ ದಾಳಿಗೆ ನಲುಗಿ ಎರಡನೇ ಇನಿಂಗ್ಸ್‍ನಲ್ಲಿ 236 ರನ್‍ಗಳಿಗೆ ಆಲೌಟ್ ಆಯಿತು. 103 ರನ್‍ಗಳ ಸಾಧಾರಣ ಗುರಿ ನೀಡಿತು.

ಆತಿಥೇಯರು ಈ ಗುರಿನ್ನು ಸುಲಭವಾಗಿ ಬೆನ್ನಟ್ಟಿದರು. ಈ ಪಂದ್ಯದಲ್ಲಿ ಆಕರ್ಷಕ ಬೌಲಿಂಗ್ ಮತ್ತು ಬ್ಯಾಟಿಂಗ್ ಪ್ರದಶ್ನ ನೀಡಿದ ಜಡೇಜಾ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು. 4ನೇ ಟೆಸ್ಟ್ ಪಂದ್ಯವು ಡಿ. 8ರಂದು ಮುಂಬೈನ ವಾಂಖೇಡೆ ಕ್ರೀಡಾಂಗಣದಲ್ಲಿ ನಡೆಯಲಿದೆ.  ಆಂಗ್ಲರು ಮೊದಲ ಇನಿಂಗ್ಸ್‍ನಲ್ಲಿ 283/10, ಭಾರತ 417/10, ಎರಡನೇ ಇನಿಂಗ್ಸ್‍ನಲ್ಲಿ ಇಂಗ್ಲೆಂಡ್ 236/10, ಭಾರತ 104/2

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin