3 ರಾಜ್ಯಗಳ ಚುನಾವಣಾ ಫಲಿತಾಂಶ, ತ್ರಿಪುರ-ನಾಗಾಲ್ಯಾಂಡ್‍ ಬಿಜೆಪಿಗೆ ಅಧಿಕಾರ, ಮೇಘಾಲಯ ಅತಂತ್ರ

Spread the love

Result

ನವದೆಹಲಿ,ಮಾ.3-ತೀವ್ರ ಜಿದ್ದಾಜಿದ್ದಿನಿಂದ ಕೂಡಿದ್ದ ಈಶಾನ್ಯ ರಾಜ್ಯಗಳಾದ ತ್ರಿಪುರ ಹಾಗೂ ನಾಗಾಲ್ಯಾಂಡ್‍ನಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿ ಅಧಿಕಾರ ಸ್ಪಷ್ಟ ಬಹುಮತದೊಂದಿಗೆ ಅಧಿಕಾರ ಹಿಡಿದಿದ್ದರೆ, ಮೇಘಾಲಯದಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿದೆ. ಈಶಾನ್ಯ ಭಾರತದಲ್ಲೂ ಕಮಲ ಅರಳಿಸಬೇಕೆಂಬ ದಶಕಗಳ ಕನಸು ಕೊನೆಗೂ ಈಡೇರಿದೆ. ಸತತ 25 ವರ್ಷಗಳ ಕಾಲ ತ್ರಿಪುರದಲ್ಲಿ ಆಡಳಿತ ನಡೆಸಿದ್ದ ಮಾಣಿಕ್ ಸರ್ಕಾರ್ ನೇತೃತ್ವದ ಎಡಪಕ್ಷವನ್ನು ಪರಾಭವಗೊಳಿಸಿ ಮೊದಲ ಬಾರಿಗೆ ಸ್ವಂತ ಬಲದ ಮೇಲೆ ಬಿಜೆಪಿ ಅಧಿಕಾರದ ಗದ್ದುಗೆ ಹಿಡಿದಿದೆ.

ತ್ರಿಪುರದ ಒಟ್ಟು 60 ವಿಧಾನಸಭಾ ಕ್ಷೇತ್ರಗಳ ಪೈಕಿ ಬಿಜೆಪಿ 41, ಎಡಪಕ್ಷ 18 ಹಾಗೂ ಇತರರು ಒಂದು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದಾರೆ. ಇಲ್ಲಿ ಕಾಂಗ್ರೆಸ್ ಒಂದೇ ಒಂದು ಸ್ಥಾನವನ್ನು ಗಳಿಸದೆ ಹೀನಾಯವಾಗಿ ಸೋಲು ಕಂಡಿದೆ. ವಿಶೇಷವೆಂದರೆ 2013ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಒಂದೇ ಒಂದು ಸ್ಥಾನವನ್ನು ಗೆದ್ದಿರಲಿಲ್ಲ. ಈ ಬಾರಿ 3/2ರಷ್ಟು ಭಾರೀ ಬಹುಮತದೊಂದಿಗೆ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿದೆ.

ಈಶಾನ್ಯ ಭಾರತದ ಮತ್ತೊಂದು ರಾಜ್ಯ ನಾಗಾಲ್ಯಾಂಡ್‍ನಲ್ಲೂ ಕೂಡ ಕಮಲ ಸ್ಪಷ್ಟ ಬಹುಮತದೊಂದಿಗೆ ಅಧಿಕಾರ ಹಿಡಿದಿದೆ. ರಾಜ್ಯದ ಒಟ್ಟು 60 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ 33, ಎನ್‍ಪಿಎಫ್ 22 ಇತರರು 5 ಹಾಗೂ ಕಾಂಗ್ರೆಸ್ ಶೂನ್ಯ ಗಳಿಸಿದೆ. ಮೇಘಾಲಯದಲ್ಲಿ ಕಾಂಗ್ರೆಸ್ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ ಅಧಿಕಾರ ಹಿಡಿಯುವಲ್ಲಿ ವಿಫಲವಾಗಿದೆ. ಒಟ್ಟು 60 ವಿಧಾನಸಭಾ ಕ್ಷೇತ್ರಗಳ ಪೈಕಿ ಕಾಂಗ್ರೆಸ್ 26 ಕ್ಷೇತ್ರಗಳನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದ್ದರೆ, ಎನ್‍ಪಿಪಿ 10, ಬಿಜೆಪಿ 18 ಹಾಗೂ ಇತರರು 14 ಕ್ಷೇತ್ರಗಳಲ್ಲಿ ಗೆಲುವು ಕಂಡಿದ್ದಾರೆ.

ಸರ್ಕಾರ ರಚನೆಗೆ ಯಾವುದೇ ಪಕ್ಷ ಸರಳ ಬಹುಮತವಾಗಿ 31 ಸ್ಥಾನಗಳನ್ನು ಪಡೆಯಬೇಕು. ಕಾಂಗ್ರೆಸ್ 26 ಸ್ಥಾನಗಳನ್ನು ಪಡೆದಿದ್ದರೂ ಬಿಜೆಪಿ ಮೈತ್ರಿಕೂಟವಾದ ಎನ್‍ಪಿಪಿ , ಬಿಜೆಪಿ ಹಾಗೂ ಇತರರು ಸೇರಿಕೊಂಡು ಮೈತ್ರಿ ಸರ್ಕಾರ ರಚಿಸಲು ಮುಂದಾಗಿದ್ದಾರೆ.  ಆದರೆ ದೊಡ್ಡ ಪಕ್ಷವಾಗಿರುವ ಕಾಂಗ್ರೆಸ್ ಮೇಘಾಲಯದಲ್ಲಿ ಸರ್ಕಾರ ರಚಿಸಲು ಈಗಾಗಲೇ ಅಖಾಡಕ್ಕಿಳಿದಿದೆ. ಇಟಲಿಯಲ್ಲಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಸೂಚನೆ ಮೇರೆಗೆ ರಾಜಧಾನಿ ಶಿಲ್ಲಾಂಗ್‍ಗೆ ಪಕ್ಷದ ಮುಖಂಡರಾದ ಅಹಮ್ಮದ್ ಪಾಟೀಲ್ ಹಾಗೂ ಕಮಲ್‍ನಾಥ್ ಅವರನ್ನು ಉಸ್ತುವಾರಿಗಳನ್ನಾಗಿ ಕಳುಹಿಸಿಕೊಟ್ಟಿದ್ದಾರೆ.  ಸರ್ಕಾರ ರಚನೆಯಲ್ಲಿ ನಿರ್ಣಾಯಕ ಪಾತ್ರ ವಹಿಸಲಿರುವ ಪಕ್ಷೇತರ ಶಾಸಕರ ಬೆಂಬಲ ಪಡೆದು ಸರ್ಕಾರ ರಚನೆಗೆ ಹಕ್ಕು ಮಂಡಿಸಲು ಮುಂದಾಗಬೇಕೆಂದು ಸೂಚನೆ ಕೊಟ್ಟಿದ್ದಾರೆ.

ಅಂತ್ಯಗೊಂಡ ಎಡಪಕ್ಷದ ದರ್ಬಾರ್:
ಈವರೆಗೂ ಒಂದೇ ಒಂದು ಸ್ಥಾನವನ್ನೂ ಗಳಿಸದೆ ಸೊನ್ನೆ ಸುತ್ತಿದ್ದ ತ್ರಿಪುರದಲ್ಲಿ ಬಿಜೆಪಿ ಮೊದಲ ಬಾರಿಗೆ ಐತಿಹಾಸಿಕ ಗೆಲುವು ಸಾಧಿಸಿದೆ. ಚುನಾವಣಾ ಪೂರ್ವ ಸಮೀಕ್ಷೆಯಂತೆ 3/2ನೇ ರಷ್ಟು ಭಾರೀ ಬಹುಮತದೊಂದಿಗೆ ಅಧಿಕಾರ ಹಿಡಿದಿದೆ.  ರಾಜ್ಯ ಬಿಜೆಪಿ ಅಧ್ಯಕ್ಷ ಬಿಪ್ಲಾಬ್,ಕುಮಾರ್ ದೇವ್ ರಾಜ್ಯದ ಮುಂದಿನ ಮುಖ್ಯಮಂತ್ರಿಯಾಗುವುದು ಬಹುತೇಕ ಖಚಿತವಾಗಿದೆ.   ದೇಶದಲ್ಲೇ ಅತ್ಯಂತ ಬಡ ಮುಖ್ಯಮಂತ್ರಿ, ಸರಳ, ಸಜ್ಜನಿಕೆ, ಭ್ರಷ್ಟಾಚಾರ ರಹಿತ ಆಡಳಿತಕ್ಕೆ ಹೆಸರುವಾಸಿಯಾಗಿ ಸತತ ಐದು ಬಾರಿಗೆ ಸಿಪಿಐ(ಎಂ) ಪಕ್ಷವನ್ನು ಅಧಿಕಾರಕ್ಕೆ ತಂದಿದ್ದ ಮುಖ್ಯಮಂತ್ರಿ ಮಾಣಿಕ್ ಸರ್ಕಾರ್ ಬಿಜೆಪಿ ಅಬ್ಬರದ ಮುಂದೆ ತತ್ತರಿಸಿ ಹೋಗಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರ ಅಲೆ, ಅಬ್ಬರದ ಪ್ರಚಾರ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಚಾಣಾಕ್ಯ ತಂತ್ರ, ರಾಜ್ಯದಲ್ಲಿ ಮೊದಲ ಬಾರಿಗೆ ಕಮಲವನ್ನು ಸ್ವಂತ ಬಲದ ಮೇಲೆ ಅಧಿಕಾರಕ್ಕೆ ತಂದಿದೆ.  2013ರಲ್ಲಿ ಒಟ್ಟು 60 ವಿಧಾನಸಭಾ ಕ್ಷೇತ್ರಗಳ ಪೈಕಿ 50 ಸ್ಥಾನ ಗೆದ್ದು ದಾಖಲೆ ನಿರ್ಮಿಸಿದ್ದ ಎಡಪಕ್ಷ ಈ ಬಾರಿ 18 ಕ್ಷೇತ್ರಗಳಿಗೆ ಮಾತ್ರ ಸೀಮಿತವಾಗಿದೆ.   ಚುನಾವಣೆಗೂ ಮುನ್ನ ಬಿಜೆಪಿ ನಡೆಸಿದ ರಣತಂತ್ರ ಕೇಂದ್ರಮತ್ತು ರಾಜ್ಯದಲ್ಲಿ ಒಂದೇ ಪಕ್ಷ ಅಧಿಕಾರದಲ್ಲಿದ್ದರೆ ಹೆಚ್ಚಿನ ಅನುಕೂಲವಾಗುತ್ತದೆ ಎಂಬ ಆರ್‍ಎಸ್‍ಎಸ್ ನಾಯಕರು ನಡೆಸಿದ ಪ್ರಚಾರದಿಂದ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಯಶಸ್ವಿಯಾಗಿದೆ.

ಇನ್ನು ನಾಗಾಲ್ಯಾಂಡ್‍ನಲ್ಲಿ ಈ ಬಾರಿ ಆಡಳಿತ ವಿರೋಧಿ ಅಲೆಗೆ ಎನ್‍ಪಿಎಫ್ ಭಾರೀ ದಂಡ ತೆತ್ತಿದೆ. 2013ರಲ್ಲಿ 60 ವಿಧಾನಸಭಾ ಕ್ಷೇತ್ರಗಳ ಪೈಕಿ 38 ಕ್ಷೇತ್ರಗಳನ್ನು ಗೆದ್ದು ಆಡಳಿತಾರೂಢ ಪಕ್ಷ ಈ ಬಾರಿ ವಿರೋಧ ಪಕ್ಷದ ಸ್ಥಾನಕ್ಕೆ ಸೀಮಿತವಾಗಿದೆ.  ನಾಗಾಲ್ಯಾಂಡ್‍ನಲ್ಲಿ ಕೂಡ ನರೇಂದ್ರ ಮೋದಿಯ ಅಬ್ಬರ ಹಾಗೂ ಅಮಿತ್ ಷಾ ತಂತ್ರ ಬಿಜೆಪಿಯನ್ನು ಇದೇ ಮೊದಲ ಬಾರಿ ಅಧಿಕಾರಕ್ಕೆ ತರುವಲ್ಲಿ ಯಶಸ್ವಿಯಾಗಿದೆ.   ಬಿಜೆಪಿ ಇಲ್ಲಿ 33 ಸ್ಥಾನಗಳನ್ನು ಪಡೆಯುವ ಮೂಲಕ ಸ್ಪಷ್ಟ ಬಹುಮತದಿಂದ ಅಧಿಕಾರ ಹಿಡಿದಿದ್ದರೆ ಮೂರು ಕ್ಷೇತ್ರಗಳಲ್ಲಿ ಗೆದ್ದಿರುವ ಇತರರು ಬಿಜೆಪಿಗೆ ಬೆಂಬಲ ನೀಡಲು ಮುಂದಾಗಿದ್ದಾರೆ.

ಅಧಿಕಾರ ಉಳಿಸಿಕೊಳ್ಳಲು ಎನ್‍ಪಿಎಫ್ ಏನೇ ಸರ್ಕಸ್ ನಡೆಸಿದರೂ ಬಿಜೆಪಿಯ ಸಂಘಟಿತ ಹೋರಾಟದ ಮುಂದೆ ಅದರ ಪ್ರಯತ್ನ ವಿಫಲವಾಗಿದೆ. ಈಗಾಗಲೇ ಅವಿರೋಧವಾಗಿ ಆಯ್ಕೆಯಾಗಿರುವ ಮಾಜಿ ಮುಖ್ಯಮಂತ್ರಿ ನೀಫುಯುರಿಯೋ ಮುಖ್ಯಮಂತ್ರಿಯಾಗುವ ಸಾಧ್ಯತೆ ಇದೆ.
ಇನ್ನು ಮೇಘಾಲಯದಲ್ಲಿ ಮಾತ್ರ ಕಾಂಗ್ರೆಸ್ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ ಅಧಿಕಾರ ರಚನೆ ಮಾಡುವಷ್ಟು ಬಹುಮತ ಪಡೆದಿಲ್ಲ.
ಒಟ್ಟು 60 ವಿಧಾನಸಭಾ ಕ್ಷೇತ್ರಗಳ ಪೈಕಿ ಕಾಂಗ್ರೆಸ್ 22 ಸ್ಥಾನಗಳನ್ನು ಪಡೆದಿದ್ದರೆ, ಎನ್‍ಪಿಪಿ9, ಬಿಜೆಪಿ 8, ಯುಡಿಪಿ 5 ಹಾಗೂ ಇತರರು ಏಳು ಕ್ಷೇತ್ರಗಳಲ್ಲಿ ಗೆದ್ದಿದ್ದಾರೆ.

ಯಾವುದೇ ಪಕ್ಷ ಸರ್ಕಾರ ರಚಿಸಬೇಕಾದರೆ 31 ಸ್ಥಾನಗಳನ್ನು ಪಡೆಯಬೇಕು. 2013ರಲ್ಲಿ 21 ಸ್ಥಾನ ಪಡೆದಿದ್ದ ಕಾಂಗ್ರೆಸ್ ಪಕ್ಷೇತರ ಶಾಸಕರ ಬೆಂಬಲದಿಂದ ಸರ್ಕಾರ ರಚಿಸಿತ್ತು. ಇಲ್ಲಿಯೂ ಆಡಳಿತ ವಿರೋಧಿ ಅಲೆ ಸಾಕಷ್ಟು ಕೆಲಸ ಮಾಡಿದೆ.  ಕಾಂಗ್ರೆಸ್ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ ಬಿಜೆಪಿ ಮೈತ್ರಿಕೂಟ ಸರ್ಕಾರ ರಚಿಸಲು ರಣತಂತ್ರ ರೂಪಿಸಿದೆ. ಎನ್‍ಪಿಪಿ, ಬಿಜೆಪಿ, ಯುಡಿಪಿ ಹಾಗೂ ಇತರರು ಸೇರಿಕೊಂಡು ಸರ್ಕಾರ ರಚನೆಯತ್ತ ಮಗ್ನರಾಗಿದ್ದಾರೆ.

ಸಂಭ್ರಮ:
ತ್ರಿಪುರ ಹಾಗೂ ನಾಗಾಲ್ಯಾಂಡ್‍ನಲ್ಲಿ ಬಿಜೆಪಿ ಭಾರೀ ಬಹುಮತದೊಂದಿಗೆ ಅಧಿಕಾರ ಹಿಡಿಯುತ್ತಿದ್ದಂತೆ ಪಕ್ಷದ ಕಾರ್ಯಕರ್ತರ ಸಂಭ್ರಮಕ್ಕೆ ಪಾರವೇ ಇರಲಿಲ್ಲ. ತ್ರಿಪುರದ ರಾಜಧಾನಿ ಅಗರ್ತಲ, ನಾಗಾಲ್ಯಾಂಡ್ ರಾಜಧಾನಿ ಕೊಹಿಮಾದಲ್ಲಿ ಕಾರ್ಯಕರ್ತರು ಸಿಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಅಭಿನಂದನೆ:
ಇನ್ನು ಪ್ರಧಾನಮಂತ್ರಿ ನರೇಂದ್ರ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ತ್ರಿಪುರ, ನಾಗಾಲ್ಯಾಂಡ್ ಹಾಗೂ ಮೇಘಾಲಯ ಜನತೆಗೆ ಅಭಿನಂದನೆ ಸಲ್ಲಿಸಿದರು.  ಇದೇ ವೇಳೇ ಪಕ್ಷದ ಗೆಲುವಿಗೆ ಶ್ರಮಿಸಿದ ಕಾರ್ಯಕರ್ತರು, ಮುಖಂಡರು ಮತ್ತು ಉಸ್ತುವಾರಿಗಳಿಗೂ ಉಭಯ ನಾಯಕರು ಅಭಿನಂದನೆ ತಿಳಿಸಿದ್ದಾರೆ. ಮೂರು ರಾಜ್ಯಗಳ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಎಲ್ಲ ರೀತಿಯ ನೆರವು ನೀಡಲಿದೆ ಎಂದು ಪ್ರಧಾನಿಯವರು ಆಶ್ವಾಸನೆ ನೀಡಿದ್ದಾರೆ.

ತ್ರಿಪುರ : ಒಟ್ಟು ಕ್ಷೇತ್ರಗಳು : 59
ಬಿಜೆಪಿ : 43 / ಸಿಪಿಎಂ : 16 / ಕಾಂಗ್ರೆಸ್ : 0 / ಇತರೆ : 0
ಮ್ಯಾಜಿಕ್ ನಂಬರ್ : 31

ಮೇಘಾಲಯ : ಒಟ್ಟು ಕ್ಷೇತ್ರಗಳು : 59
ಬಿಜೆಪಿ : 02 / ಎನ್ಎನ್ ಪಿ : 19 / ಕಾಂಗ್ರೆಸ್ : 21 / ಇತರೆ : 17
ಮ್ಯಾಜಿಕ್ ನಂಬರ್ : 31

ನಾಗಲ್ಯಾಂಡ್ : ಒಟ್ಟು ಕ್ಷೇತ್ರಗಳು 60
ಎನ್ ಡಿ ಪಿಪಿ : 30 / ಎನ್ ಪಿ ಎಫ್ : 28 / ಕಾಂಗ್ರೆಸ್ : 00 / ಇತರೆ : 02
ಮ್ಯಾಜಿಕ್ ನಂಬರ್ : 31

Sri Raghav

Admin