ನವದೆಹಲಿ,ಮಾ.11-ಜಪಾನ್ ದೇಶದ ಮಹಿಳೆಯೊಬ್ಬರಿಗೆ ಹೋಳಿ ಹಬ್ಬದ ಸಂದರ್ಭದಲ್ಲಿ ದೌರ್ಜನ್ಯ ನಡೆಸಿದ್ದ ಮೂವರನ್ನು ದೆಹಲಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಜಪಾನ್ ಮಹಿಳೆ ಯುವ ಪ್ರವಾಸಿ ಕೇಂದ್ರ ದೆಹಲಿಯ ಪಹರ್‍ಗಂಜ್‍ನಲ್ಲಿ ತಂಗಿದ್ದರು ಅವರ ಮೇಲೆ ಹೋಳಿ ಸಂದರ್ಭದಲ್ಲಿ ದೌರ್ಜನ್ಯ ನಡೆಸಿದ್ದ ಮೂವರನ್ನು ಬಂಧಿಸಲಾಗಿದ್ದು, ಬಂಧಿತರಲ್ಲಿ ಒಬ್ಬ ಬಾಲಾಪರಾಧಿ ಇದ್ದಾನೆ ಎಂದು ತಿಳಿದುಬಂದಿದೆ.
ತನ್ನ ಮೇಲಾದ ಕಿರುಕುಳದ ಬಗ್ಗೆ ಮಹಿಳೆ ಇಲ್ಲಿಯವರೆಗೆ ದೂರು ದಾಖಲಿಸಿಲ್ಲ ಮತ್ತು ನಿನ್ನೆ ಬಾಂಗ್ಲಾದೇಶಕ್ಕೆ ತೆರಳಿದ್ದಾಳೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ತಾನು ಬಾಂಗ್ಲಾದೇಶ ತಲುಪಿದ್ದು ಮಾನಸಿಕ ಮತ್ತು ದೈಹಿಕವಾಗಿ ಸದೃಢವಾಗಿರುವುದಾಗಿ ಮಹಿಳೆ ಟ್ವೀಟ್ ಮಾಡಿದ್ದಾಳೆ ಎಂದು ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಹೋಳಿ ಹಬ್ಬದ ಸಂದರ್ಭದಲ್ಲಿ ಮೂವರು ಜಪಾನ್ ಮಹಿಳೆಯನ್ನು ಹಿಡಿದುಕೊಂಡು ಆಕೆಯ ಮೇಲೆ ಬಣ್ಣ ಎರಚಿದ್ದೆ ಅಲ್ಲದೆ ಆಕೆಯೊಂದಿಗೆ ಅನುಚಿತವಾಗಿ ವರ್ತಿಸಿರುವ ವಿಡಿಯೋ ವೈರಲ್ ಆಗಿತ್ತು.
ಜೈಲಿಗೆ ಹಾಕಬಹುದು ನನ್ನ ಉತ್ಸಾಹ ಕುಂದಿಸಲು ನಿಮ್ಮಿಂದ ಸಾಧ್ಯವಿಲ್ಲ : ಮನೀಶ್ ಸಿಸೋಡಿಯಾ
ಒಬ್ಬ ಹುಡುಗ ಅವಳ ತಲೆಯ ಮೇಲೆ ಮೊಟ್ಟೆಯನ್ನು ಒಡೆದು ಹಾಕುತ್ತಿರುವುದನ್ನು ಸಹ ಕಾಣಬಹುದು. ಅವಳು ಅಂತಿಮವಾಗಿ ದೂರ ಸರಿಯುವ ಮೊದಲು ಆಕೆಯನ್ನು ಅಸಭ್ಯವಾಗಿ ಹಿಡಿದುಕೊಳ್ಳಲು ಮುಂದಾಗುವ ವ್ಯಕ್ತಿಗೆ ಆಕೆ ಕಪಾಳಮೋಕ್ಷ ಮಾಡುವುದು ವೀಡಿಯೊದಲ್ಲಿ ದಾಖಲಾಗಿದೆ.
ಕೆಪಿಸಿಸಿ ಕಾರ್ಯಧ್ಯಕ್ಷ ಆರ್. ಧೃವ ನಾರಾಯಣ್ ನಿಧನ
ಸ್ಥಳೀಯ ಗುಪ್ತಚರ ಮೂಲಕ ಆರೋಪಿಗಳನ್ನು ಗುರುತಿಸಲಾಗಿದೆ ಮತ್ತು ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ, ಅವರು ಜಪಾನ್ ರಾಯಭಾರ ಕಚೇರಿಯೊಂದಿಗೆ ಸಂಪರ್ಕದಲ್ಲಿದ್ದಾರೆ.
3 arrested, molesting, Japanese, woman, Holi,