ಆರೋಪಿ ಸೆರೆ : 5.15 ಲಕ್ಷ ಮೌಲ್ಯದ 3 ಕಾರು- 2 ಬೈಕ್‍ಗಳ ವಶ

Social Share

ಬೆಂಗಳೂರು, ಡಿ.22- ಕಳ್ಳತನವನ್ನೇ ವೃತ್ತಿಯನ್ನಾಗಿಸಿಕೊಂಡು ವಾಹನಗಳನ್ನು ಕಳವು ಮಾಡುತ್ತಿದ್ದ ಆರೋಪಿಯೊಬ್ಬನನ್ನು ವಿದ್ಯಾರಣ್ಯಪುರ ಠಾಣೆ ಪೊಲೀಸರು ಬಂಧಿಸಿ 5.15 ಲಕ್ಷ ರೂ. ಬೆಲೆಬಾಳುವ ಮೂರು ಕಾರುಗಳು ಹಾಗೂ ಎರಡು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ಚಿತ್ರದುರ್ಗ ಜಿಲ್ಲೆಯ ಸದ್ದಾಂ ಹುಸೇನ್ ಅಲಿಯಾಸ್ ತಬ್ರೇಜ್ ಅಲಿಯಾಸ್ ಸದ್ದಾಂ(30) ಬಂಧಿತ ಆರೋಪಿ.
ದೊಡ್ಡಬೆಟ್ಟಹಳ್ಳಿ ನಿವಾಸಿ ಕಂಚಿ ರೆಡ್ಡಿಗಾರಿ ಜನಾರ್ಧನ್ ಎಂಬುವವರು ಕಳೆದ ನ.17ರಂದು ರಾತ್ರಿ 10 ಗಂಟೆ ಸುಮಾರಿಗೆ ತಮ್ಮ ಮನೆಯ ಮುಂಭಾಗದ ರಸ್ತೆಯಲ್ಲಿ ಮಾರುತಿ ಸುಜುಕಿ ಕಾರನ್ನು ನಿಲ್ಲಿಸಿ ಊರಿಗೆ ಹೋಗಿದ್ದರು.

ನ.23ರಂದು ಊರಿನಿಂದ ವಾಪಸ್ ಬಂದು ನೋಡಿದಾಗ ಕಾರು ಇರಲಿಲ್ಲ. ತಮ್ಮ ಕಾರನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಎಂದು ಅವರು ವಿದ್ಯಾರಣ್ಯ ಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಕೋವಿಡ್ ನೆಪದಲ್ಲಿ ಚುನಾವಣೆ ಮುಂದೂಡುವ ಯತ್ನ ನಡೀತಿದೆ : ಡಿಕೆಶಿ

ಪ್ರಕರಣ ದಾಖಲಿಸಿಕೊಂಡು ಆರೋಪಿಯ ಪತ್ತೆ ಕಾರ್ಯವನ್ನು ಮೇಲಾಧಿಕಾರಿಗಳ ಸೂಚನೆಯಂತೆ ಯಲಹಂಕ ಉಪವಿಭಾಗದ ಎಸಿಪಿ ಮಂಜುನಾಥ್ ಅವರ ಸಲಹೆಯಂತೆ ವಿದ್ಯಾರಣ್ಯ ಪುರ ಠಾಣೆ ಇನ್ಸ್‍ಪೆಕ್ಟರ್ ಸುಂದರ್ ಅವರನ್ನೊಳಗೊಂಡ ಸಿಬ್ಬಂದಿ ತಂಡ ಕಾರ್ಯಾಚರಣೆ ಕೈಗೊಂಡು ಮಾಹಿತಿಗಳನ್ನು ಸಂಗ್ರಹಿಸಿತು.

ವಿದ್ಯಾರಣ್ಯ ಪುರ, ಬಾಗಲಗುಂಟೆ, ಅನ್ನಪೂರ್ಣೇಶ್ವರಿ ನಗರದ ಕಡೆಗಳಲ್ಲಿ ಕಾರುಗಳನ್ನು ಹಾಗೂ ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡಿ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿ 5.15 ಲಕ್ಷ ಮೌಲ್ಯದ ಮೂರು ಕಾರುಗಳು ಹಾಗೂ ಎರಡು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳುವಲ್ಲಿ ಈ ತಂಡ ಯಶಸ್ವಿಯಾಗಿದೆ.

ಒಡಿಶಾ ಕರಾವಳಿಯಲ್ಲಿ ಡಾಲ್‍ಫಿನ್ ಗಣತಿ ಆರಂಭ

ಈಗಾಗಲೇ ಹೊಸದುರ್ಗ, ಹಿರಿಯೂರು, ದೊಡ್ಡಪೇಟೆ, ಚಿಕ್ಕನಾಯಕನಹಳ್ಳಿ, ತುಮಕೂರು, ಚಿಕ್ಕಮಗಳೂರು, ತರೀಕೆರೆ, ಮಾದನಾಯಕನಹಳ್ಳಿ, ವಿಶ್ವನಾಥಪುರ ಪೊಲೀಸ್ ಠಾಣೆಗಳ ವಾಹನ ಕಳ್ಳತನದ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿಯ ಬಂಧನದಿಂದ ವಿದ್ಯಾರಣ್ಯಪುರ ಪೊಲೀಸ್ ಠಾಣೆ ಎರಡು ಪ್ರಕರಣ, ಅನ್ನಪೂರ್ಣೇಶ್ವರಿ ಹಾಗೂ ಬಾಗಲಗುಂಟೆಯ ತಲಾ ಒಂದು ಪ್ರಕರಣಗಳು ಬೆಳಕಿಗೆ ಬಂದಿದೆ.
ಈ ತಂಡದ ಕಾರ್ಯವೈಖರಿಯನ್ನು ಮೇಲಾಧಿಕಾರಿಗಳು ಶ್ಲಾಘನೆ ವ್ಯಕ್ತಪಡಿಸಿರುತ್ತಾರೆ.

3 cars, 2 bikes, Accused, arrested,

Articles You Might Like

Share This Article