ಬಲೂಚಿಸ್ಥಾನ್, ಮಾ.4- ಪಾಕಿಸ್ತಾನದ ಬಲೂಚಿಸ್ಥಾನದ ಪ್ರಾಂಥ್ಯದಲ್ಲಿ ಬಾಂಬ್ ಸ್ಪೋಟ ಸಂಭವಿಸಿದ್ದು, ಮೂರು ಮಂದಿ ಸಾವನ್ನಪ್ಪಿದ್ದಾರೆ.
ಈ ಮೂಲಕ ನೆರೆಯ ರಾಷ್ಟ್ರದಲ್ಲಿ ಸುರಕ್ಷತೆಯ ಆತಂಕ ಹೆಚ್ಚಾಗಿದೆ. ಪಾಕಿಸ್ತಾನ ಸರ್ಕಾರದ ಮೇಲೆ ಅಪತ್ಯ ಸಾಧಿಸುವಂತೆ ಭಯೋತ್ಪಾದಕ ಸಂಘಟನೆಗಳು ಹಿಂಸಾ ಕೃತ್ಯಗಳನ್ನು ಹೆಚ್ಚಿಸಿವೆ.
ಪಾಕ್‍ನ ತೆಹರಿಕ್-ಇ-ತಾಲಿಬಾನ್ ಸಂಘಟನೆ ಹಿಂಸಾಚಾರಕ್ಕೆ ಕುಮ್ಮಕ್ಕು ನೀಡುತ್ತಿದ್ದು, ಸ್ಪೋಟದ ಹೊಣೆ ಹೊತ್ತುಕೊಂಡಿದೆ. ಸ್ಥಳೀಯ ಪೊಲೀಸ್ ಠಾಣೆಯ ಸಮೀಪ 2ರಿಂದ 2.5 ಕೆಜಿ ಸ್ಪೋಟಕ್ಕೆ ಸಿಡಿದಿದ್ದು, ಭಾರೀ ಹಾನಿ ಮಾಡಿದೆ.
ಪಾಕಿಸ್ತಾನದ ಶಾಂತಿ ಪಾಲನೆ ಅಧ್ಯಯನ ಸಂಸ್ಥೆಯ ಪ್ರಕಾರ, ಇತ್ತೀಚೆಗೆ ಮಿಲಿಟನ್‍ಗಳು ಹಾವಳಿ ಹೆಚ್ಚಾಗುತ್ತಿದ್ದು, ಸರ್ಕಾರ ಅವರ ಜೊತೆ ನಿರ್ಧಾಕ್ಷಿಣ್ಯವಾಗಿ ವರ್ತಿಸುತ್ತಿಲ್ಲ ಎನ್ನಲಾಗಿದೆ. ಪಾಕ್ ಅಧ್ಯಕ್ಷ ಇಮ್ರಾನ್ ಖಾನ್ ಇತ್ತಿಚೆಗೆ ಹೇಳಿಕೆ ನೀಡಿ, ಆಫ್ಘಾನಿಸ್ಥಾನದಲ್ಲಿ ತಾಲಿಬಾನ್‍ಗೆ ಪರ್ಯಾಯವಿಲ್ಲ ಎಂದು ಹೇಳಿದ್ದರು.
ಆಫ್ಘಾನಿಸ್ತಾನದಲ್ಲಿ ಹೆಚ್ಚು ಶಬ್ಧ ಬರುವ ಸಂಗೀತ ಕೇಳುತ್ತಾ ಹೋಗುತ್ತಿದ್ದ ಕಾರಿನ ಮೇಲೆ ತಾಲಿಬಾನಿಗಳು ಗುಂಡಿನ ದಾಳಿ ನಡೆಸಿ ಹಲವರನ್ನು ಕೊಂದು ಹಾಕಿದ್ದಾರೆ. ಅದೇ ಪರಿಸ್ಥಿತಿಗೆ ನಿಧಾನಕ್ಕೆ ಪಾಕಿಸ್ತಾನ ವಾಲುತ್ತಿದೆ ಎಂಬ ಆತಂಕಗಳು ಕೇಳಿ ಬರುತ್ತಿವೆ.
