ಭೋಪಾಲ್, ಜ.2- ಚಾಲಕ ನಿದ್ದೆ ಮಂಪರಿಗೆ ಜಾರಿದ ಪರಿಣಾಮ ಬಸ್ಸೊಂದು ನದಿಗೆ ಉರುಳಿ ಬಿದ್ದ ಪರಿಣಾಮ ಮೂವರು ಪ್ರಯಾಣಿಕರು ಮೃತಪಟ್ಟು, ಹಲವರು ಗಾಯಗೊಂಡಿರುವ ಘಟನೆ ಮಧ್ಯಪ್ರದೇಶದ ಅಲಿರಾಜ್‍ಪುರ್ ಜಿಲ್ಲೆಯಲ್ಲಿ ಸಂಭವಿಸಿದೆ. ಮೃತಪಟ್ಟ ಮೂವರು ಗುಜರಾತ್ ಮೂಲದವರೆಂದು ತಿಳಿದುಬಂದಿದ್ದು, ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಜಿಲ್ಲಾಕಾರಿ ಮನೋಜ್ ಪುಷ್ ಅವರು ಸ್ಥಳ ಪರಿಶೀಲನೆ ನಡೆಸಿದ ನಂತರ ಘಟನೆಯ ಬಗ್ಗೆ ಮಾಹಿತಿ ನೀಡಿದ್ದಾರೆ.
ಬಸ್ ಗುಜರಾತ್‍ನ ಅಲಿರಾಜ್‍ಪುರ್‍ನಿಂದ ಉದೇಪುರಕ್ಕೆ ಹೋಗುತ್ತಿದ್ದಾಗ ಸಮಯದಲ್ಲಿ ಚಾಲಕನ ನಿದ್ದೆಗೆ ಮಂಪರಿಗೆ ಜಾರಿದ್ದರಿಂದ ಬಸ್ ನಿಯಂತ್ರಣ ತಪ್ಪಿ ಮೆಲ್ಖೋದ್ರಾ ನದಿಗೆ ಬಿದ್ದ ಪರಿಣಾಮ ಒಂದು ವರ್ಷದ ಮಗು ಸೇರಿ ಮೂವರು ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ.
ಅಪಘಾತದಲ್ಲಿ ಮೃತಪಟ್ಟ ಒಂದು ವರ್ಷದ ಮಗುವಿನ ವಿವರ ತಿಳಿದುಬಂದಿಲ್ಲವಾದರೂ, ಕೈಲಾಶ್ ವೇದ್ (48), ಮೀರಾಬಾಯಿ (46) ಎಂಬುವವರು ಮೃತಪಟ್ಟು, 28 ಮಂದಿ ಪ್ರಯಾಣಿಕರು ಗಾಯಗೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ಮೃತರ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರರಿಗೆ ಒಪ್ಪಿಸಿದ್ದಾರೆ, ಗಾಯಾಳುಗಳನ್ನು ಚಿಕಿತ್ಸೆಗಾಗಿ ದಾಖಲು ಮಾಡಲಾಗಿದೆ ಎಂದು ಜಿಲ್ಲಾಕಾರಿ ಮನೋಜ್ ಪುಷ್ಪ್ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.
ಪೆÇಲೀಸ್ ಅಕಾರಿ ಮನೋಜ್ ಕುಮಾರ್À ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಅಪಘಾತ ನಡೆಯಲು ಚಾಲಕನ ನಿರ್ಲಕ್ಷ್ಯತನವೇ ಕಾರಣವಾಗಿದ್ದು ಅವನನ್ನು ವಿಚಾರಣೆ ನಡೆಸುವುದಾಗಿ ಅವರು ತಿಳಿಸಿದರು.
