ಉಕ್ರೇನ್,ಫೆ.2- ಜನವಸತಿ ಕಟ್ಟಡದ ಮೇಲೆ ರಷ್ಯಾ ನಡೆಸಿದ ರಾಕೆಟ್ ದಾಳಿಗೆ ಮೂವರು ಬಲಿಯಾಗಿದ್ದು, 20ಕ್ಕೂ ಹೆಚ್ಚು ನಾಗರೀಕರು ತೀವ್ರವಾಗಿ ಗಾಯಗೊಂಡಿರುವ ಘಟನೆ ಇಲ್ಲಿನ ಪೂರ್ವ ನಗರದ ಕ್ರಾಮಾಟೋಸ್ರ್ಕ್‍ನಲ್ಲಿ ನಡೆದಿದೆ.
ಎರಡು ಗಂಟೆಗಳ ಹಿಂದೆ, ರಷ್ಯಾದ ಆಕ್ರಮಣಕಾರರು ನಗರದ ಮಧ್ಯಭಾಗದಲ್ಲಿರುವ ವಸತಿ ಕಟ್ಟಡವನ್ನು ರಾಕೆಟ್‍ನಿಂದ ಹೊಡೆದು ಅದನ್ನು ಸಂಪೂರ್ಣವಾಗಿ ನಾಶಪಡಿಸಿದರು ಎಂದು ಪ್ರಾದೇಶಿಕ ಗವರ್ನರ್ ಪಾವ್ರೋ ಕಿರಿಲೆಂಕೊ ತಿಳಿಸಿದ್ದಾರೆ.
ಸ್ಥಳೀಯ ಪೊಲೀಸರು ತಮ್ಮ ಅಧಿಕೃತ ವೆಬ್‍ಸೈಟ್‍ನಲ್ಲಿ ಮೂವರು ನಾಗರಿಕರು ಹತರಾಗಿದ್ದು, 20 ಮಂದಿ ಗಾಯಗೊಂಡಿದ್ದಾರೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ ಎಂದು ತಿಳಿಸಿದ್ದಾರೆ.
ಮನೆಯಲ್ಲಿ ನೆಮ್ಮದಿಯಾಗಿದ್ದ ಸಾರ್ವಜನಿಕರು ಸಾವನ್ನಪ್ಪಿದ್ದಾರೆ. ಕೆಲವರು ಅವಶೇಷಗಳಡಿ ಸಿಲುಕಿಕೊಂಡಿದ್ದಾರೆ ಇಂದು ನಮ್ಮ ದುರಂತ ಎಂದು ಉಕ್ರೇನ್ ಅಧ್ಯಕ್ಷ ವ್ಲಾಡಿಮಿರ್ ಝೆಲೆನ್ಸ್ಕಿ ಆತಂಕ ವ್ಯಕ್ತಪಡಿಸಿದ್ದಾರೆ.
ಧಾರವಾಡ ಕಸೂತಿ ಕಲೆಯ ಸೀರೆಯುಟ್ಟು ಬಜೆಟ್ ಮಂಡಿಸಿದ ನಿರ್ಮಲಾ
ಕ್ರಾಮಾಟೋಸ್ಕರ್ï ಡೊನೆಟ್ಸ್ಕ್‍ನ ಪೂರ್ವ ಕೈಗಾರಿಕಾ ಪ್ರದೇಶದಲ್ಲಿದೆ, ಈ ದೊಡ್ಡ ನಗರ ಸೇರಿದಂತೆ ಕೆಲ ಭಾಗಗಳನ್ನು 2014 ರಿಂದ ಕ್ರೆಮ್ಲಿನ್ ಬೆಂಬಲಿತ ಪ್ರತ್ಯೇಕತಾವಾದಿಗಳು ನಿಯಂತ್ರಿಸುತ್ತಿದ್ದಾರೆ ಎನ್ನಲಾಗಿದ್ದು, ಈ ಪ್ರದೇಶವನ್ನು ವಶಕ್ಕೆ ಪಡೆದುಕೊಳ್ಳಲು ರಷ್ಯಾ ಇನ್ನಿಲ್ಲದ ಕಸರತ್ತು ನಡೆಸುತ್ತಿದೆ.
3 Killed, Russian, Rocket Attack, Residential, Building, Ukraine,