ಮಹಿಳೆ ಗ್ಯಾಂಗ್ ರೇಪ್ ಮಾಡಿ, ಗುಪ್ತಾಂಗಕ್ಕೆ ಸಿಗರೇಟ್‌ನಿಂದ ಸುಟ್ಟ ಕಾಮುಕರು..!

Social Share

ಮುಂಬೈ,ಡಿ.5- ಮೂವರು ವ್ಯಕ್ತಿಗಳು ಮಹಿಳೆಯ ಮನೆಗೆ ನುಗ್ಗಿ ಸಾಮೂಹಿಕ ಅತ್ಯಾಚಾರ ಎಸಗಿ ಮೃಗದಂತೆ ವರ್ತಿಸಿ ಹಲ್ಲೆ ನಡೆಸಿರುವ ಘಟನೆ ವಾಣಿಜ್ಯ ನಗರಿ ಮುಂಬೈನ ಕುರ್ಲಾದಲ್ಲಿ ನಡೆದಿದೆ.

42 ವರ್ಷದ ಮಹಿಳೆಯ ಖಾಸಗಿ ಭಾಗಗಳಲ್ಲಿ ಸಿಗರೇಟ್ ಸುಟ್ಟ ಗಾಯ ಮಾಡಿದ್ದಲ್ಲದೆ ,ಎಳೆದಿದಾಡಿ ಹರಿತವಾದ ಆಯುಧದಿಂದ ಹಲ್ಲೆ ನಡೆಸಲಾಗಿದ್ದು,ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ .

ಆರೋಪಿಗಳು ಅದೇ ಪ್ರದೇಶದಲ್ಲಿ ವಾಸಿಗಳಾಗಿದ್ದು ಇಡೀ ಘಟನೆಯನ್ನು ಚಿತ್ರೀಕರಿಸಿದ್ದಾರೆ ,ಪೊಲೀಸರಿಗೆ ತಿಳಿಸಿದರೆ ಜಾಲತಾಣದಲ್ಲಿ ಪ್ರಸಾರ ಮಾಡುವುದಾಗಿ ಮಹಿಳೆಗೆ ಬೆದರಿಕೆ ಹಾಕಿದ್ದಾರೆ.

ನೊಂದ ಮಹಿಳೆ ನೆರೆಹೊರೆಯವರೊಂದಿಗೆ ತನ್ನ ಮೇಲೆ ನಡೆದ ಅಮಾನುಷ ಘಟನೆ ಬಗ್ಗೆ ತಿಳಿಸಿದ್ದು ನಂತರ ಪೊಲೀಸರಿಗೆ ದೂರು ನೀಡಲಾಗಿದೆ. ಪ್ರಕರಣ ದಾಖಲಿಸಿರುವ ಕುರ್ಲಾ ಠಾಣೆಯ ಪೊಲೀಸರು ಅತ್ಯಾಚಾರಿಗಳ ಭೇಟೆಗೆ ಕಾರ್ಯಾಚರಣೆ ನಡೆಸಿದ್ದಾರೆ.ಈ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.

#Mumbai #Gangrape, #FilmAct, #CigaretteBurns, #WomenPrivateParts,

Articles You Might Like

Share This Article