ತಿರುವನಂತಪುರಂ,ಜ.6- ಆರ್ಥಿಕ ವಿಷಯಗಳಿಗೆ ಸಂಬಂಧಿಸಿದಂತೆ ಕುಟುಂಬದ ಮೂವರು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೇರಳದ ಕಡಿನಂಕುಲಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಕಡಿನಂಕುಲಂ ನಿವಾಸಿ ರಮೇಶ್ (50), ಅವರ ಪತ್ನಿ ಸಲಜಕುಮಾರಿ (44), ಪುತ್ರಿ ರೇಶ್ಮಾ (22) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಮೇಶ್ ವಿದೇಶದಲ್ಲಿ ಕೆಲಸ ಮಾಡುತ್ತಿದ್ದು ನಿನ್ನೆ ವಾಪಾಸ್ಸಾಗಿದ್ದರು. ಅದರ ಪ್ರಯುಕ್ತ ಸಂಬಂಧಿಕರು ಮನೆಗೆ ಬಂದಿದ್ದರು.
ಗುರುವಾರ ಮಧ್ಯ ರಾತ್ರಿ 11.30ರ ಸುಮಾರಿಗೆ ಕೊಠಡಿಯಲ್ಲಿ ಮೂವರು ಬೆಂಕಿ ಹಚ್ಚಿಕೊಂಡಿದ್ದಾರೆ. ಬೆಂಕಿ ಉರಿಯುವ ಮತ್ತು ಅದರಲ್ಲಿ ಸುಡುತ್ತಿರುವವರ ಅರಚಾಟದ ಶಬ್ದ ಕೇಳಿ ಮನೆಯಲ್ಲೇ ಮಲಗಿದ್ದ ಸಂಬಂಧಿಕರು ಗಾಬರಿಯಾಗಿದ್ದಾರೆ.
ಹರ್ಯಾಣ ಪ್ರವೇಶಿಸಿದ ರಾಹುಲ್ ಭಾರತ್ ಜೋಡೋ ಯಾತ್ರೆ
ಬಾಗಿಲು ಬಡಿದಾಗ ಅದು ತೆರೆದುಕೊಂಡಿಲ್ಲ. ಅಕ್ಕಪಕ್ಕದವರು ಧಾವಿಸಿ ಬಂದು ಬಾಗಿಲು ಹೊಡೆಡಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದರು. ಕೊಠಡಿಯಲ್ಲಿ ಸುಲಜಕುಮಾರಿ ಬರೆದಿದ್ದಾರೆ ಎಂಬ ಪತ್ರದ ಮೂಲಕ ಅದೊಂದು ಆತ್ಮಹತ್ಯೆ ಎಂದು ಪರಿಗಣಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೂಲಗಳ ಪ್ರಕಾರ ಕುಟುಂಬದ ವಿರುದ್ಧ ಏಳು ವಂಚನೆ ಪ್ರಕರಣ ದಾಖಲಾಗಿದ್ದವು. ಸುಮಾರು 35 ಲಕ್ಷ ರೂಪಾಯಿ ಸಾಲ ಇತ್ತು. ಚೆಕ್ಬೌನ್ಸ್ ಪ್ರಕರಣದಲ್ಲಿ ಅವರು ವಾಸಿಸುತ್ತಿದ್ದ ಮನೆಯನ್ನು ಬ್ಯಾಂಕ್ ಜಪ್ತಿ ಮಾಡಿಕೊಳ್ಳಲು ಮುಂದಾಗಿತ್ತು ಎಂದು ಹೇಳಲಾಗಿದೆ.
Three Family Die, Setting , Themselves, Fire, Kerala,