ಉಪ್ಪಿನಂಗಡಿ : ಈಜಲು ಹೋಗಿದ್ದ ಮೂವರು ವಿದ್ಯಾರ್ಥಿಗಳು ನೀರು ಪಾಲು

water

ಮಂಗಳೂರು,ಜ.1- ಈಜಲು ಹೋದ ಮೂವರು ವಿದ್ಯಾರ್ಥಿಗಳು ನೀರು ಪಾಲಾಗಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಉಪ್ಪಿನಂಗಡಿಯಲ್ಲಿ ಇಂದು ಬೆಳಗ್ಗೆ ಸಂಭವಿಸಿದೆ.

ನೆಲ್ಯಾಡಿ ನಿವಾಸಿ ಮಹಮ್ಮದ್ ಸುಹೈದ್, ಪೆರ್ನೆಯ ಬಿಳಿಯೂರು ನಿವಾಸಿ ಸಹೀರ್ ಮತ್ತು 34ನೇ ನೆಕ್ಕಿಲಾಡಿಯ ಆದರ್ಶ ನಗರ ನಿವಾಸಿ ಫಿರ್ಝಾನ್ ಮೃತ ವಿದ್ಯಾರ್ಥಿಗಳು.

ಇವರು ಉಪ್ಪಿನಂಗಡಿ ಜೂನಿಯರ್ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದರು. ಗೆಳೆಯ ಫಿರ್ಝಾನ್‍ನ ಹುಟ್ಟು ಹಬ್ಬ ಹಿನ್ನೆಲೆ ನೇತ್ರಾವತಿ ತಟಕ್ಕೆ ತೆರಳಿದ್ದ ಈ ಮೂವರು ನಂತರ ಈಜಲು ಹೋಗಿ ನೀರು ಪಾಲಾಗಿದ್ದಾರೆ.

ಕಾಣೆಯಾದ ವಿದ್ಯಾರ್ಥಿಗಳಿಗಾಗಿ ಪೋಷಕರು ಹುಡುಕಾಟ ನಡೆಸಿದ್ದರು. ಆದರೆ ಅವರ ಸುಳಿವು ಪತ್ತೆಯಾಗಿರಲಿಲ್ಲ. ಇಂದು ಬೆಳಗ್ಗೆ ಮೂವರು ವಿದ್ಯಾರ್ಥಿಗಳ ಶವ ನೇತ್ರಾವತಿ ನದಿಯಲ್ಲಿ ಪತ್ತೆಯಾಗಿದೆ. ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Sri Raghav

Admin