30 ಕೋಟಿ ಮೌಲ್ಯದ 9000 ಚದರ ಅಡಿ ಪ್ರದೇಶ ಬಿಬಿಎಂಪಿ ವಶಕ್ಕೆ

Social Share

ಬೆಂಗಳೂರು,ಜು.22- ನಗರದ ಹೃದಯಭಾಗದಲ್ಲಿ ರುವ ಗಾಂ ಬಜಾರ್‍ನಲ್ಲಿರುವ 30 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ 9 ಸಾವಿರ ಚದುರ ಅಡಿ ಸ್ವತ್ತನ್ನು ಬಿಬಿಎಂಪಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಗಾಂಧಿ ಬಜಾರ್‍ನಲ್ಲಿದ್ದ ನಿವೇಶನ ಸಂಖ್ಯೆ 174 ಮತ್ತು 175 ಹಾಗೂ 176ನ್ನು ಬಿಬಿಎಂಪಿ ಭೂಸ್ವಾೀಧಿನಪಡಿಸಿಕೊಂಡು ಸದರಿ ನಿವೇಶನಗಳಲ್ಲಿ ನೂತನ ಮಾರುಕಟ್ಟೆ ನಿರ್ಮಿಸಲು ಮುಂದಾಗಿತ್ತು.

ಆದರೆ, ನಿವೇಶನಗಳ ಭೂ ಸ್ವಾನಕ್ಕೆ ತಡೆ ನೀಡುವಂತೆ ಸ್ವತ್ತಿನ ಮಾಲೀಕರು ನ್ಯಾಯಾ ಲಯದ ಮೆಟ್ಟಿಲೇರಿದ್ದರು.
ವಾದ ವಿವಾದ ಆಲಿಸಿದ ನ್ಯಾಯಾಲಯ ಮಾಲೀಕರ ಅರ್ಜಿಯನ್ನು ವಜಾಗೊಳಿಸಿ ಬಿಬಿಎಂಪಿ ಪರ ತೀರ್ಪು ನೀಡಿತ್ತು.

ನ್ಯಾಯಾಲಯದ ಆದೇಶದ ಮೇರೆಗೆ ಇಂದು ಕಾರ್ಯಚರಣೆ ನಡೆಸಿದ ಬಿಬಿಎಂಪಿ ಕಾರ್ಯಪಾಲಕ ಅಭಿಯಂತರ ಯೆರಪ್ಪರೆಡ್ಡಿ ಅವರು 9000 ಚದುರ ಅಡಿಯ ಪ್ರದೇಶದಲ್ಲಿದ್ದ ಕಟ್ಟಡಗಳನ್ನು ತೆರವುಗೊಳಿಸಿ ಪಾಲಿಕೆ ವಶಕ್ಕೆ ಪಡೆದು ಕೊಂಡಿದ್ದಾರೆ.

Articles You Might Like

Share This Article