ಬೆಂಗಳೂರು,ಜ.7- ಎಲೆಕ್ಟ್ರಿಕಲ್ ಅಂಗಡಿಯಲ್ಲಿ ಕೆಲಸಕ್ಕಿದ್ದ ನೌಕರ ಮಾಲೀಕರ ಕಣ್ತಪ್ಪಿಸಿ 30 ಲಕ್ಷ ಹಣ ತೆಗೆದುಕೊಂಡು ಪರಾರಿಯಾಗಿರುವ ಘಟನೆ ಸಿಟಿ ಮಾರ್ಕೆಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಚಿಕ್ಕಪೇಟೆಯಲ್ಲಿ ಮಾಲೀಕ ಜಯಚಂದ್ರ ಅವರಿಗೆ ಸೇರಿದ ಎಲೆಕ್ಟ್ರಿಕಲ್ ಅಂಗಡಿ ಇದೆ. ತಮ್ಮ ಅಂಗಡಿಯಲ್ಲಿ 30 ಲಕ್ಷ ಹಣ ಇಟ್ಟಿದ್ದರು.
ಡಿ.21ರಂದು ಮಾಲೀಕ ಹೊರಗೆ ಹೋಗಿದ್ದಾಗ ಕೆಲಸಗಾರ ಅಂಗಡಿಯಲ್ಲಿದ್ದ 30 ಲಕ್ಷ ಹಣ ಕಳ್ಳತನ ಮಾಡಿ ಪರಾರಿಯಾಗಿದ್ದಾನೆ. ಮಾಲೀಕ ಜಯಚಂದ್ರ ಅವರು ಕೆಲಸಗಾರ ಹೊರಗೆ ಹೋಗಿರಬಹುದು ಬರುತ್ತಾ ನೆಂದು ಸುಮ್ಮನಾಗಿದ್ದಾರೆ. 2-3 ದಿನ ಕಳೆದರೂ ಕೆಲಸಗಾರನ ಸುಳಿವೇ ಇಲ್ಲ. ನಂತರ ಅಂಗಡಿಯಲ್ಲಿಟ್ಟಿದ್ದ ಹಣ ನೋಡಿಕೊಂಡಾಗ 30 ಲಕ್ಷ ರೂ. ಕಳ್ಳತನವಾಗಿರುವುದು ಕಂಡುಬಂದಿದೆ.
ಈ ಸಂಬಂಧ ಜಯಚಂದ್ರ ಅವರು ನಿನ್ನೆ ಸಿಟಿ ಮಾರ್ಕೆಟ್ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿ ಕೊಂಡಿರುವ ಪೊಲೀಸರು ಆರೋಪಿ ಪತ್ತೆಗೆ ಶೋಧ ಕೈಗೊಂಡಿದ್ದಾರೆ. ಆರೋಪಿಯು ಹೊರ ರಾಜ್ಯದವನು ಎಂಬುದು ಗೊತ್ತಾಗಿದ್ದು, ಒಂದು ತಂಡ ಆತನ ಬಂಧನಕ್ಕೆ ಹೊರ ರಾಜ್ಯಕ್ಕೆ ತೆರಳಿ ಶೋಧ ನಡೆಸುತ್ತಿದೆ.
