3,000 ಸದಸ್ಯರಿಗೆ ಧೋಕಾ, 100 ಕೋಟಿ ರೂ. ಹಗರಣ ತನಿಖೆ ಚುರುಕು

100-crore

ಜೈಪುರ, ಫೆ.27-ರಾಜಸ್ತಾನ ಮತ್ತು ಗುಜರಾತ್‍ನ 3,000 ಸದಸ್ಯರಿಗೆ 100 ಕೋಟಿ ರೂ.ಗಳನ್ನು ವಂಚಿಸಿದ ಹಗರಣಕ್ಕೆ ಸಂಬಂಧಿಸಿದಂತೆ ಈ ಎರಡೂ ರಾಜ್ಯಗಳ ಪೊಲೀಸರು ಮೌಂಟ್ ಅಬು ಮೂಲಕ ಅರ್ಬುಡಾ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿಮಿಟೆಡ್ ಆಡಳಿತ ಮಂಡಳಿ ಮತ್ತು ಉನ್ನತಾಧಿಕಾರಿಗಳನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ.  ಕಳೆದ ಕೆಲವು ದಿನಗಳ ಅವಧಿಯಲ್ಲಿ ಈ ಸಹಕಾರ ಬ್ಯಾಂಕ್ ವಿರುದ್ಧ ಗುಜರಾತ್‍ನಲ್ಲಿ 12 ಮತ್ತು ರಾಜಸ್ತಾನದಲ್ಲಿ 4 ಎಫ್‍ಐಆರ್‍ಗಳು ದಾಖಲಾಗಿವೆ.   ರಾಜಸ್ತಾನದ ಗಿರಿಧಾಮ ಮೌಂಟ್ ಅಬುನಲ್ಲಿರುವ ಬ್ಯಾಂಕಿನ ಕೇಂದ್ರ ಕಚೇರಿ ಮೇಲೆ ದಾಳಿ ನಡೆಸಿದ ಪೊಲೀಸರು ಹಾರ್ಡ್ ಡಿಸ್ಕ್‍ಗಳು, ಲ್ಯಾಪ್‍ಟಾಪ್‍ಗಳು ಮತ್ತು ದಾಖಲೆ ಪತ್ರಗಳು-ದಸ್ತಾವೇಜುಗಳನ್ನು ವಶಪಡಿಸಿಕೊಂಡಿದ್ದಾರೆ.

ಈ ಬ್ಯಾಂಕ್ 3,000ಕ್ಕೂ ಹೆಚ್ಚು ಸದಸ್ಯರಿಂದ ವಿವಿಧ ಯೋಜನೆಯಡಿ 100 ಕೋಟಿ ರೂ.ಗಳನ್ನು ಸಂಗ್ರಹಿಸಿ ವಂಚಿಸಿದ ಪ್ರಕರಣ ಈಗ ದೊಡ್ಡ ವಿವಾದವಾಗಿ ಪರಿಣಮಿಸಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin