ನ್ಯೂಯಾರ್ಕ್ : ಅಗ್ನಿ ಅವಘಡದಲ್ಲಿ ಭಾರತೀಯ-ಅಮೆರಿಕನ್ ಮಹಿಳಾ ಉದ್ಯಮಿ ಸಾವು

Social Share

ಹೂಸ್ಟನ್, ಡಿ 18 ನ್ಯೂಯಾರ್ಕ್‍ನ ಲಾಂಗ್ ಐಲ್ಯಾಂಡ್‍ನಲ್ಲಿರುವ ಡಿಕ್ಸ್‍ಹಿಲ್ಸ್ ಕಾಟೇಜ್ ಮನೆಯಲ್ಲಿ ಸಂಭವಿಸಿದ ಬೆಂಕಿ ಅನಾಹುತದಲ್ಲಿ ಭಾರತೀಯ-ಅಮೆರಿಕನ್ ಮಹಿಳಾ ಉದ್ಯಮಿ ಸಾವನ್ನಪ್ಪಿದ್ದಾರೆ. ತಾನ್ಯಾ ಬಥಿಜಾ (32)ಮೃತ ಮಹಿಳಾ ಉದ್ಯಮಿಯಾಗಿದ್ದು ದುರಂತದಲ್ಲಿ ಅವರ ಮುದ್ದಿನ ಸಾಕು ನಾಯಿ ಕೂಡ ಸಾವನ್ನಪ್ಪಿದೆ.

ಕಳೆದ ಡಿ14 ರಂದು ಮುಂಜಾನೆ 2:53 ಕ್ಕೆ ಡಿಕ್ಸ್ ಹಿಲ್ಸ್‍ನಲ್ಲಿರುವ ಕಾಟೇಜ್‍ನಲ್ಲಿ ಬೆಂಕಿ ಹೊತ್ತಿಕೊಂಡಿದ್ದು ಪಕ್ಕದ ಮನೆಯಲ್ಲೇ ಇದ್ದ ಅವರ ತಂದೆ ಗೋಬಿಂದ್ ಬಥಿಜಾ ಅವರು ವ್ಯಾಯಾಮ ಮಾಡಲು ಎದ್ದು ಕಿಟಕಿಯಿಂದ ಹೊರಗೆ ನೋಡಿದಾಗ ಕಾಟೇಜ್‍ನಲ್ಲಿ ಬೆಂಕಿ ಉರಿಯುತ್ತಿರುವುದನ್ನು ಕಂಡು ಮನೆಯವರನ್ನು ಎಚ್ಚರಿಸಿದ್ದಾರೆ .

ಪೊಲೀಸರಿಗೆ ಕರೆ ಮಾಡಿ ಕುಟೀರದ ಕಡೆಗೆ ಓಡಿದ ಕುಟುಂಬದವರು ತಾನ್ಯಾ ಅವರನ್ನು ರಕ್ಷಿಸಲು ಪ್ರಯತ್ನಿಸಿದ್ದಾರೆ ಆದರೆ ಬೆಂಕಿ ತುಂಬಾ ಪ್ರಬಲವಾಗಿತ್ತು.ಕೆಲವೇ ಕ್ಷನದಲ್ಲಿ ಅಗ್ನಿಶಾಮಕ ದಳ ಪಡೆ ಆಗಮಿಸಿ ಬೆಂಕಿಯನ್ನು ಸಂಪೂರ್ಣವಾಗಿ ನಂದಿಸಿದರು ಎಂದು ಎಂದು ಅಕಾರಿಗಳು ತಿಳಿಸಿದ್ದಾರೆ.

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ(18-12-2022)

ಹೊಗೆಯನ್ನು ಸೇವಿಸಿ ಅಸ್ವಸ್ಥಗೊಂಡಿದ ತಾನ್ಯಾ ಬಥಿಜಾ ಅವರನ್ನು ಪೊಲೀಸರನ್ನು ಚಿಕಿತ್ಸೆಗಾಗಿ ಸ್ಟೋನಿ ಬ್ರೂಕ್ ವಿಶ್ವವಿದ್ಯಾಲಯದ ಆಸ್ಪತ್ರೆಗೆ ಸಾಗಿಸಲಾಯಿತುಆದರೆ ಚಿಕಿತ್ಸೆ ಫಲಿಸದೆ ಕಳೆದ ರಾತ್ರಿ ಸಾವನ್ನಪ್ಪಿದ್ದಾರೆ.

ಪ್ರಾಥಮಿಕ ತನಿಖೆಯಲ್ಲಿ ಇದು ಆಕಸ್ಮಿಕ ಬೆಂಕಿ ಅನಾಹುತ ಎಂದು ಸಫೋಲ್ಕ ಕೌಂಟಿ ಪೊಲೀಸ್ ಇಲಾಖೆ ತಿಳಿಸಿದೆ.ಅಕೌಂಟಿಂಗ್ ಮತ್ತು ಫೈನಾನ್ಸ್‍ನಲ್ಲಿ ಮದವಿ ಮುಗಿಸಿದ ನಂತರ, ಅವರು ಯಶಸ್ವಿ ಉದ್ಯಮಿಯಾದರು. ಅವಳು ಇತ್ತೀಚೆಗೆ ಬೆಲ್‍ ಪೋರ್ಟ್‍ನಲ್ಲಿ ಡಂಕಿನ್ ಡೊನಟ್ಸ್ ಔಟ್‍ಲೆಟ್ ಅನ್ನು ತೆರೆದಿದ್ದರು ,ಬೆಲ್ಪೋರ್ಟ್ ಮತ್ತು ಪ್ಯಾಚೋಗ್ ಚೇಂಬರ್ ಆಫ್ ಕಾಮರ್ಸ್ ಎರಡರಲ್ಲೂ ತೊಡಗಿಸಿಕೊಂಡಿದ್ದರು ಮತ್ತು ಬಾಯ್ಸ್ ಮತ್ತು ಗಲ್ಸರ್ ಕ್ಲಬ್ ಮತ್ತು ಲಾಂಗ್ ಐಲ್ಯಾಂಡ್ ಹೆಡ್ ಸ್ಟಾರ್ಟ್‍ನೊಂದಿಗೆ ಕೆಲಸ ಮಾಡಿದರು.

ತಾನ್ಯಾ ಸಮುದಾಯಕ್ಕೆ ಅದ್ಭುತ ಮತ್ತು ಶಕ್ತಿಯುತ ವ್ಯಾಪಾರ ನಾಯಕರಾಗಿದ್ದರು. ಅವಳನ್ನು ಕಳೆದುಕೊಮಡಿದ್ದೇವೆ ಎಂದು ಗ್ರೇಟರ್ ಪ್ಯಾಚೋಗ್ ಚೇಂಬರ್ ಆಫ್ ಕಾಮರ್ಸ್‍ನ ಕಾರ್ಯನಿರ್ವಾಹಕ ನಿರ್ದೇಶಕ ಡೇವಿಡ್ ಕೆನಡಿ ಹೇಳಿದರು.

ರೊಂಕೊಂಕೋಮಾ ಸರೋವರದಲ್ಲಿರುವ ಮಲೋನಿಯ ಲೇಕ್ ಫ್ಯೂನರಲ್ ಹೋಮ್ ಮತ್ತು ಕ್ರಿಮೇಷನ್ ಸೆಂಟರ್‍ನಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಅದೇ ದಿನ ಸಂಜೆ 4 ಗಂಟೆಗೆ ಹಿಕ್ಸ್ ವಿಲ್ಲಾ ಯಲ್ಲಿರುವ ಅಸಾಮೈ ಹಿಂದೂ ದೇವಾಲಯದಲ್ಲಿ ಪ್ರಾರ್ಥನೆ ಸೇವೆ ನಡೆಯಲಿದೆ ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.

#32YearOldWoman, #Died, #DixHillsCottageFire, #EnthusiasmForLife, #TanyaBathija,

Articles You Might Like

Share This Article