24 ಗಂಟೆಯಲ್ಲಿ ದೇಶದಾದ್ಯಂತ 3,33,533 ಮಂದಿಗೆ ಕೊರೋನಾ, 525 ಸಾವು..!

Social Share

ನವದೆಹಲಿ, ಜನವರಿ 23 ಕೇಂದ್ರ ಆರೋಗ್ಯ ಸಚಿವಾಲಯ ಇಂದು ಬೆಳೆಗ್ಗೆ ಬಡುಗಡೆ ಮಾಡಿರುವ ಅಂಕಿಅಂಶಗಳ ಪ್ರಕಾರ ದೇಶದಲ್ಲಿದಲ್ಲಿ24ಗಂಟೆಯೊಳಗೆ 3,33,533 ಹೊಸ ಕರೋನ ವೈರಸ್ ಸೋಂಕಿತರು ಕಂಡುಬಂದಿದ್ದು, 525 ಮಂದಿ ಸಾವನ್ನಪ್ಪಿದ್ದಾರೆ.
ಇದರೊಂದಿಗೆ ಭಾರತದಲ್ಲಿ ಒಟ್ಟು ಕೊರೊನಾ ಸೊಂಕಿತರ ಸಂಖ್ಯೆ 4 ಕೋಟಿ ಗಡಿಗೆ ತಲುಪಿದೆ, ಸಕ್ರಿಯ ಪ್ರಕರಣಗಳು 21,87,205 ಕ್ಕೆ ಏರಿಕೆಯಾಗಿದ್ದು, ಸಾವಿನ ಸಂಖ್ಯೆ 4,89,409 ಕ್ಕೆ ಏರಿದೆ .ಸಾವು ಮತ್ತು ಸಕ್ರಿಯ ಪ್ರಕರಣ ಹೆಚ್ಚಳ ದಾಖಲಾಗಿದೆ.ಮೊರನೇ ಅಲೆ ಮತ್ತಷ್ಷು ಏರಿಕೆ ಯಾಗಲಿದೆ ಆದರೆ ಮುಂದಿನ 30 ದಿನ ನಿರ್ಣಕವೆಂದು ಆರೋಗ್ಯ ಅಕಾರಿಗಳು ತಿಳಿಸಿದ್ದಾರೆ
ರಾಷ್ಟ್ರವ್ಯಾಪಿ ಕೋವಿಡï-19 ವ್ಯಾಕ್ಸಿನೇಷನ್ ಅಭಿಯಾನದಡಿ ಇದುವರೆಗೆ ಲಸಿಕೆ ಪಡೆದವರು 162ಕೋಟಿ ತಲುಪಿದೆ ಇದೆ ವೇಗ ಹೆಚ್ಚಿಸಲು ಎಲ್ಲಾ ರಾಜ್ಯಗಳು ಪ್ರಯತ್ನ ನಡೆಸುತ್ತಿದೆ .ಲಸಿಕೆ ಪಡೆಯಲು ಜಾಗೃತಿ ಮೊಡಿಸಲಾಗುತ್ತಿದೆ.ದಕ್ಷಿಣ ಭಾರತ ಹಾಗು ದೆಹಲಿ ,ಕೊಲ್ಕತ್ತಾ ,ಸೇರಿದಂತೆ ದೇಶದ ಅರ್ದ ಭಾಗ ಕೊರೊನಾ ಮತ್ತು ಒಮ್ರಿಕಾನ್‍ನಿಂದ ಭಾದಿತವಾಗಿದೆ

Articles You Might Like

Share This Article