340 ಆಂಬ್ಯುಲೆನ್ಸ್​ಗಳ ಸೇವೆ ಸ್ಥಗಿತ..!

Social Share

ಬೆಂಗಳೂರು,ಜ.30- ಕಳಪೆ ಸ್ಥಿತಿಗೆ ತಲುಪಿರುವ ರಾಜ್ಯದಲ್ಲಿ 108 ಆಂಬ್ಯುಲೆನ್ಸ್ ಸೇವೆಯಡಿ ಚಾಲನೆಯಲ್ಲಿರುವ 340 ಆಂಬ್ಯುಲೆನ್ಸ್‍ಗಳನ್ನು ಸ್ಥಗಿತಗೊಳಿಸಲು ರಾಜ್ಯ ಆರೋಗ್ಯ ಇಲಾಖೆ ನಿರ್ಧರಿಸಿದೆ, ನಿಯಮಿತ ಕಾರ್ಯವಿಧಾನ ದಂತೆ ಆಂಬ್ಯುಲೆನ್ಸ್‍ಗಳನ್ನು ಬದಲಾಯಿಸಲು ಅಧಿಕಾರಿಗಳು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.

4 ಲಕ್ಷ ಕಿಲೋಮೀಟರ್ ದೂರ ಕ್ರಮಿಸುವ ಎಲ್ಲಾ ಆಂಬ್ಯುಲೆನ್ಸ್‍ಗಳನ್ನು ನಾಲ್ಕು ವರ್ಷಗಳಲ್ಲಿ ಬದಲಾಯಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಉಪನಿರ್ದೇಶಕ (ಇಎಂಆರ್‍ಐ-108) ಡಾ ಆರ್ ನಾರಾಯಣ್ ಅವರು ಮಾತನಾಡಿ, 2015-16ರಲ್ಲಿ ಕಳಪೆ ಸ್ಥಿತಿಗೆ ತಲುಪಿದ್ದ ಆ್ಯಂಬುಲೆನ್ಸ್‍ಗಳನ್ನು ಬದಲಾಯಿಸಲಾಗಿತ್ತು. ಪ್ರಸ್ತುತ ಬದಲಿಸಲು ಮುಂದಾಗಿರುವ 340 ಆ್ಯಂಬುಲೆನ್ಸ್‍ಗಳು ಸುಮಾರು 7 ವರ್ಷಗಳಷ್ಟು ಹಳೆಯದ್ದಾಗಿವೆ. ಹೀಗಾಗಿ ಅವುಗಳನ್ನು ಬದಲಿಸಲು ನಿರ್ಧರಿಸಲಾಗಿದೆ ಎಂದು ಹೇಳಿದ್ದಾರೆ.

ಸಾಲ ತೀರಿಸಲು ಹಣ ಕಳ್ಳತನ ಕಳ್ಳತನ ಮಾಡಿದ್ದ ಆಟೋ ಚಾಲಕನ ಬಂಧನ

ಆ್ಯಂಬುಲೆನ್ಸ್‍ಗಳ ಬದಲಾವಣೆ ಮಾಡುವ ಸಮಯದಲ್ಲಿ ಸೇವೆಗಳಲ್ಲಿ ಯಾವುದೇ ವ್ಯತ್ಯಯ ಕಂಡುಬರುವುದಿಲ್ಲ ಎಂದು ತಿಳಿಸಿದ್ದಾರೆ. ಜಿವಿಕೆ-ಇಎಂಆರ್ಐ ಕಳೆದ 14 ವರ್ಷಗಳಿಂದ ರಾಜ್ಯದಲ್ಲಿ 108 ಆಂಬ್ಯುಲೆನ್ಸ್ ಸೇವೆಯನ್ನು ಸೇವೆಯನ್ನು ಒದಗಿಸುತ್ತಿದೆ. ಹೊಸ ಆಂಬುಲೆನ್ಸ್ ಖರೀದಿ ಕುರಿತ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ. 3-4 ತಿಂಗಳುಗಳಲ್ಲಿ ಹೊಸ ಆ್ಯಂಬುಲೆನ್ಸ್ ಗಳು ರಸ್ತೆಗಿಳಿಯಲಿವೆ ಎಂದು ಹೇಳಿದ್ದಾರೆ.

ಮುಂದುವರೆದ ಅದಾನಿ – ಹಿಡನ್‍ಬರ್ಗ್ ಜುಗಲ್ ಬಂದಿ

ಈ ಹಿಂದೆ, ಆಂಬ್ಯುಲೆನ್ಸ್‍ಗಳ ನಿಯಮಗಳು ಮತ್ತು ಗುಣಮಟ್ಟ ಪರಿಶೀಲನೆಗಳು ಹೆಚ್ಚು ಕಟ್ಟುನಿಟ್ಟಾಗಿರಲಿಲ್ಲ. ಇದೀಗ, ಗುಣಮಟ್ಟದ ಸೇವೆಯನ್ನು ಒದಗಿಸುವಲ್ಲಿ ಯಾವುದೇ ರಾಜಿ ಮಾಡಿಕೊಳ್ಳದಂತೆ ಖಚಿತಪಡಿಸಿಕೊಳ್ಳಲು ಕಂಪನಿಗಳು ಕಟ್ಟುನಿಟ್ಟಾಗಿ ಅನುಸರಿಸಬೇಕಾದ ಮಾರ್ಗಸೂಚಿಗಳನ್ನು ರೂಪಿಸಲು ಆರೋಗ್ಯ ಇಲಾಖೆ ಚಿಂತನೆ ನಡೆಸಿದ್ದು, ಈ ನಿಟ್ಟಿನಲ್ಲಿ ಹೊಸ ಸೇವಾ ಪೂರೈಕೆದಾರರೊಂದಿಗೆ ರಾಜ್ಯಕ್ಕೆ ಉತ್ತಮ ಗುಣಮಟ್ಟದ ಆಂಬ್ಯುಲೆನ್ಸ್‍ಗಳನ್ನು ಒದಗಿಸುವ ಗುರಿಯನ್ನು ಆರೋಗ್ಯ ಇಲಾಖೆ ಹೊಂದಿದೆ ಎಂದು ತಿಳಿದುಬಂದಿದೆ.

340 ambulances, Service, suspend,

Articles You Might Like

Share This Article