35 ಲಕ್ಷ ಬೆಲೆಯ ಗಾಂಜಾ ವಶ : ಇಬ್ಬರ ಬಂಧನ

Social Share

ಬೆಂಗಳೂರು,ಡಿ.24- ಮಾದಕವಸ್ತು ಗಾಂಜಾವನ್ನು ಒಡಿಶಾ ಮತ್ತು ಆಂಧ್ರದ ಗಡಿ ಪ್ರದೇಶದ ಕಾಡುಜನರಿಂದ ಕಡಿಮೆ ಬೆಲೆಗೆ ಖರೀದಿಸಿ ತಂದು ಮೂಟೆಗಳಲ್ಲಿಟ್ಟುಕೊಂಡು ಮಾರಲು ಯತ್ನಿಸುತ್ತಿದ್ದ ಒರಿಸ್ಸಾ ಮೂಲದ ಇಬ್ಬರನ್ನು ಕೋಣನಕುಂಟೆ ಠಾಣೆ ಪೊಲೀಸರು ಬಂಧಿಸಿ 35 ಲಕ್ಷ ಬೆಲೆ ಬಾಳುವ ಗಾಂಜಾ ವಶಪಡಿಸಿಕೊಂಡಿದ್ದಾರೆ.

ಒರಿಸ್ಸಾದ ಗಂಜಾಂ ಜಿಲ್ಲೆಯ ಬಿಜೆಯನಗರಗಡದ ಜಾಗಿಲ್ ಸೇಥಿ ಅಲಿಯಾಸ್ ಜಾಕಿಲ್ ಶೆಟ್ಟಿ(44) ಮತ್ತು ಮುರುಳಿ ಬೆಹ್ರ ಅಲಿಯಾಸ್ ಮುರುಳಿ(26) ಬಂಧಿತರು. ಕೋಣನಕುಂಟೆ ವ್ಯಾಪ್ತಿಯ ಪಿಳ್ಳಗಾನಹಳ್ಳಿ ಡಿಪೋ ಪಕ್ಕದಲ್ಲಿರುವ ಬಯಲು ಪ್ರದೇಶದ ಪಾಳುಬಿದ್ದ ಮನೆಯಲ್ಲಿ ಇಬ್ಬರು ಗಾಂಜಾ ಇಟ್ಟುಕೊಂಡು ಮಾರಾಟ ಮಾಡಲು ಯತ್ನಿಸುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿದೆ.

ಬಿಬಿಎಂಪಿ ವಾರ್ಡ್ ಮರುವಿಂಗಡಣೆಗೆ ಕೋಟಿ ಕೋಟಿ ಖರ್ಚು

ದಕ್ಷಿಣ ವಿಭಾಗ ಉಪಪೊಲೀಸ್ ಆಯುಕ್ತ ಕೃಷ್ಣಕಾಂತ್ ಅವರ ಮಾರ್ಗದರ್ಶನದಲ್ಲಿ ಸಹಾಯಕ ಪೊಲೀಸ್ ಆಯುಕ್ತ ಪವನ್ ಅವರ ನೇತೃತ್ವದಲ್ಲಿ ಇನ್‍ಸ್ಪೆಕ್ಟರ್ ಶಿವಕುಮಾರ್ ಮತ್ತು ಸಿಬ್ಬಂದಿ ಒಳಗೊಂಡ ತಂಡ ಸ್ಥಳಕ್ಕೆ ಹೋಗಿ ಒರಿಸ್ಸಾ ಮೂಲದ ಇಬ್ಬರನ್ನು ಬಂಸಿ ಗಾಂಜಾ ಮೂಟೆಗಳನ್ನು ವಶಪಡಿಸಿಕೊಂಡಿದ್ದಾರೆ.

ಆರೋಪಿಗಳು ಗಾಂಜಾವನ್ನು ಒಡಿಶಾ ಮತ್ತು ಆಂಧ್ರದ ಗಡಿ ಪ್ರದೇಶದ ಕಾಡುಜನರಿಂದ ಕಡಿಮೆ ಬೆಲೆಗೆ ಗಾಂಜಾ ಖರೀದಿಸಿ ಹೊಸ ವರ್ಷಾಚರಣೆಗೆಂದು ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ಹಣ ಸಂಪಾದನೆ ಮಾಡುವ ಉದ್ದೇಶದಿಂದ ತೆಗೆದುಕೊಂಡು ಬಂದಿರುವುದಾಗಿ ವಿಚಾರಣೆ ವೇಳೆ ತಿಳಿಸಿದ್ದಾರೆ.

30 ಅಡಿ ಕಂದಕಕ್ಕೆ ಉರುಳಿ ಬಿದ್ದ ಶಾಸಕರ ಕಾರು

ಆರೋಪಿಗಳಿಂದ 35 ಲಕ್ಷ ರೂ. ಬೆಲೆ ಬಾಳುವ 263 ಕೆಜಿ 700 ಗ್ರಾಂ ತೂಕದ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ.
ಈ ಕಾರ್ಯಾಚರಣೆಯನ್ನು ನಗರಪೊಲೀಸ್ ಆಯುಕ್ತರಾದ ಪ್ರತಾಪ್ ರೆಡ್ಡಿ ಮತ್ತು ಪಶ್ಚಿಮ ವಿಭಾಗದ ಅಪರ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಪ್ರಶಂಸಿಸಿರುತ್ತಾರೆ.

35 lakh, seized, Ganja, Two arrested,

Articles You Might Like

Share This Article