3,500 ಕಾನ್ಸ್ಟೆಬಲ್ ಹುದ್ದೆಗಳಿಗೆ ಲಿಖಿತ ಪರೀಕ್ಷೆ ಬರೆದ 1.45 ಲಕ್ಷ ಅಭ್ಯರ್ಥಿಗಳು
ಬೆಂಗಳೂರು, ನ.6- ಸಿವಿಲ್ ಕಾನ್ಸ್ಟೆಬಲ್ ಹುದ್ದೆಗಳ ನೇಮಕಾತಿಗೆ ಬೆಂಗಳೂರು ಸೇರಿದಂತೆ ರಾಜ್ಯದ 200 ಕೇಂದ್ರಗಳಲ್ಲಿ ಲಿಖಿತ ಪರೀಕ್ಷೆ ನಡೆಯಿತು. 3500 ಸಿವಿಲ್ ಕಾನ್ಸ್ಟೆಬಲ್ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದ್ದು, 1.45 ಲಕ್ಷ ಮಂದಿ ಲಿಖಿತ ಪರೀಕ್ಷೆ ಬರೆಯುವ ಅರ್ಹತೆ ಹೊಂದಿದ್ದರು. ಇಂದು ರಾಜ್ಯಾದ್ಯಂತ 200 ಕೇಂದ್ರಗಳಲ್ಲಿ ಕಾನ್ಸ್ಟೆಬಲ್ ಹುದ್ದೆಗಳಿಗೆ ಅಭ್ಯರ್ಥಿಗಳು ಲಿಖಿತ ಪರೀಕ್ಷೆ ಬರೆದರು. ಹಲವು ಅಭ್ಯರ್ಥಿಗಳಿಗೆ ಪರೀಕ್ಷಾ ಕೇಂದ್ರಗಳ ವಿಳಾಸ ಗೊತ್ತಾಗದೆ ಫಜೀತಿಗೀಡಾದ ಪ್ರಸಂಗ ನಡೆಯಿತು. ವಿಳಾಸ ತಿಳಿಯದೆ ಪರದಾಡುತ್ತಿದ್ದ ಕೆಲವು ಅಭ್ಯರ್ಥಿಗಳಿಗೆ ಪೆÇಲೀಸರು ಮಾಹಿತಿ ನೀಡಿ ಪರೀಕ್ಷಾ ಕೇಂದ್ರಗಳಿಗೆ ಕಳುಹಿಸಿಕೊಟ್ಟರು.
► Follow us on – Facebook / Twitter / Google+
Facebook Comments