ಬ್ಯಾಂಕಾಕ್ : ಬೆಂಗಳೂರಿನ,ಅ.6- ಈಶಾನ್ಯ ಥೈಲಾಂಡ್ನ ಪ್ರದೇಶದ ಶಿಶುವಿಹಾರದಲ್ಲಿಂದು ನಡೆದ ಶೂಟೌಟ್ನಲ್ಲಿ ಮಕ್ಕಳು ಸೇರಿದಂತೆ 36ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, ದುಷ್ಕರ್ಮಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಈಶಾನ್ಯ ಭಾಗದ ನಾಂಗ್ಬವಾ ಪ್ಯಾಂಪುದಲ್ಲಿರುವ ಮಕ್ಕಳ ಆರೈಕೆ ಕೇಂದ್ರಕ್ಕೆ ಮಧ್ಯಾಹ್ನದ ವೇಳೆಗೆ ನುಗ್ಗಿದ ದುಷ್ಕಮಿಗಳು ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾನೆ. ಜೊತೆಗೆ ಚಾಕುವಿನಿಂದಲೂ ದಾಳಿ ನಡೆಸಿದ್ದಾನೆ ಎನ್ನಲಾಗಿದೆ. ಇದರಿಂದ 24 ಮಕ್ಕಳು ಸೇರಿದಂತೆ 36ಕ್ಕೂ ಹೆಚ್ಚು ಮಂದಿ ಹತ್ಯೆಯಾಗಿದ್ದಾರೆ.
ಆರೋಪಿ ಬ್ಯಾಂಕಾಕ್ ನೊಂದಣಿಯ ಟಯೋಟಾ ಪೀಕಬ್ ಟ್ರಕ್ನಲ್ಲಿ ಬಂದಿದ್ದಾನೆ. ಪ್ರಧಾನಿ ಪ್ರಯುತ್ ಸನ್ ಓಂಚಾ ಅವರು ಘಟನೆ ಬಗ್ಗೆ ದಿಗ್ಬ್ರಮೆ ವ್ಯಕ್ತಪಡಿಸಿದ್ದು, ಮಾನವ ಹತ್ಯಾಕಾಂಡ ನಡೆಸಿದ ದುಷ್ಕರ್ಮಿಯನ್ನು ಹತ್ಯೆ ಮಾಡುವಂತೆ ಸೂಚನೆ ನೀಡಿದ್ದಾರೆ. ಆದರೆ ಆರೋಪಿ ಖುದ್ದು ತಾನೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಕೇಂದ್ರ ತನಿಖಾ ಸಂಸ್ಥೆ ತಿಳಿಸಿದೆ. ದುಷ್ಕರ್ಮಿ ಮಾಜಿ ಪೊಲೀಸ್ ಆಕಾರಿ ಎಂದು ಹೇಳಲಾಗಿದೆ.