ಚೀನಾದಲ್ಲಿ ಕೈಗಾರಿಕಾ ಸಗಟು ಕೇಂದ್ರದಲ್ಲಿ ಬೆಂಕಿ, 36 ಕಾರ್ಮಿಕರ ಸಾವು

Social Share

ಬೀಜಿಂಗ್, ನ.22 -ಮಧ್ಯ ಚೀನಾದ ಹೆನಾನ್ ಪ್ರಾಂತ್ಯದಲ್ಲಿ ರಾಸಾಯನಿಕ ಮತ್ತು ಕೈಗಾರಿಕಾ ಸರಕುಗಳನ್ನು ಪೂರೈಸುವ ಕಂಪನಿಯಲ್ಲಿ ಬೆಂಕಿ ಕಾಣಿಸಿಕೊಂಡು 36 ಕಾರ್ಮಿಕರು ಸಾವನ್ನಪ್ಪಿದ್ದಾರೆ.

ಹಲವರು ಗಾಯಗೊಂಡಿದ್ದು ,ಇಬ್ಬರು ನೌಕರರು ಕಾಣೆಯಾಗಿದ್ದಾರೆ ಎಂದು ಅನ್ಯಾಂಗ್ ನಗರದ ಸ್ಥಳೀಯ ಸರ್ಕಾರ ಹೇಳಿಕೆಯಲ್ಲಿ ತಿಳಿಸಿದೆ. ಅಗ್ನಿಶಾಮಕ ದಳ ಸ್ಥಳಕ್ಕೆ ಬಂದು ನಾಲ್ಕು ಗಂಟೆ ಸತತ ಪ್ರಯತ್ನ ನೆಡಸಿ ಬೆಂಕಿಯನ್ನು ಸಂಪೂರ್ಣ ನಂದಿಸಿದ್ದಾರೆ, ಬೆಂಕಿಯ ಕಾರಣ ಅಥವಾ ಎಷ್ಟು ಉದ್ಯೋಗಿಗಳು ಇದ್ದರು ಮತು ಸತ್ತರು ಎಂಬುದರ ಕುರಿತು ಯಾವುದೇ ಮಾಹಿತಿಯನ್ನು ಬಹಿರಂಗಪಡಿಸುತ್ತಿಲ್ಲ,

ಕಳಪೆ ಶೇಖರಣಾ ಪರಿಸ್ಥಿತಿ, ಅನಾಹುತ ಸಂದರ್ಭದಲ್ಲಿ ಕಾರ್ಮಿಕರ ನಿರ್ಗಮನ ಸ್ಥಳಗಳಿಲ್ಲದಿರುವುದು ಮತ್ತು ಅಗ್ನಿಶಾಮಕ ಉಪಕರಣಗಳ ಕೊರತೆಯನ್ನು ನೇರ ಘಟನೆಗೆ ನೇರ ಕಾರಣ ಎನ್ನಲಾಗುತ್ತಿದೆ.

ಆರಕ್ಕೇರದ ಬಿಜೆಪಿ, ಮೂರಕ್ಕಿಳಿಯದ ಕಾಂಗ್ರೆಸ್, ಜೆಡಿಎಸ್ ಜೋಶ್

ಬೆಂಕಿ ಬಿದ್ದಿರುವ ಕೈಕ್ಸಿಂಡಾ ಕಂಪನಿಯು ವಿಶೇಷ ರಾಸಾಯನಿಕಗಳು ,ಕೈಗಾರಿಕಾ ಸರಕುಗಳ ವ್ಯಾಪಕ ಶ್ರೇಣಿಯಲ್ಲಿ ವ್ಯವಹರಿಸುವ ಸಗಟು ವ್ಯಾಪಾರ ನಡೆಸುತ್ತಿದೆ ತಿಲಿದುಬಂದಿದೆ.

ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಅಗತ್ಯ ಆರ್ಥಿಕ ನೆರವು: ಬೊಮ್ಮಾಯಿ

ಉತ್ತರ ಬಂದರು ನಗರವಾದ ಟಿಯಾಂಜಿನ್‍ನಲ್ಲಿರುವ ರಾಸಾಯನಿಕ ಗೋದಾಮಿನಲ್ಲಿ ಕಳೆದ 2015 ರಲ್ಲಿ ಸಂಭವಿಸಿದ ಬೃಹತ್ ಸ್ಪೋಟದಲ್ಲಿ 173 ಜನರು ಸಾವನ್ನಪ್ಪಿದರು, ಅವರಲ್ಲಿ ಹೆಚ್ಚಿನವರು ಅಗ್ನಿಶಾಮಕ ದಳದವರು ಮತ್ತು ಪೊಲೀಸ್ ಅಧಿಕಾರಿಗಳು ಬಲಿಯಾಗಿದ್ದರು.

36 Killed, 2 Missing, China, Factory, Fire,

Articles You Might Like

Share This Article