ಕುಣಿಗಲ್,ಡಿ.19- ತಾಲೂಕಿನ ಹುತ್ರಿದುರ್ಗ ಹೋಬಳಿಯ ಕಡೆಸಿಂಗನಹಳ್ಳಿಯಲ್ಲಿ ಡಾ.ಉಮಾಲತಾ ಎಂಬುವರಿಗೆ ಸೇರಿದ ನಾಲ್ಕು ಎಕರೆ ಜಮೀನಿನಲ್ಲಿ ಬೆಳೆದಿದ್ದ ಮಾವಿನ ಮರಗಳನ್ನು ದುಷ್ಕರ್ಮಿಗಳು ನಾಶ ಮಾಡಿರುವ ಬಗ್ಗೆ ಕುಣಿಗಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಮಾಗಡಿ ತಾಲೂಕಿನ ಕಲ್ಯಾ ನಿವಾಸಿಯಾಗಿದ್ದು, ಬೆಂಗಳೂರಿನ ಬಸವೇಶ್ವರ ನಗರದಲ್ಲಿ ವಾಸವಿರುವ ಡಾ.ಉಮಾಲತಾ ಅವರು ಕಡೆಸಿಂಗನಹಳ್ಳಿ ಗ್ರಾಮದ ಸರ್ವೇ ನಂಬರ್ 303ರಲ್ಲಿ ನಾಲ್ಕು ಎಕರೆ ಜಮೀನು ಹೊಂದಿದ್ದರು.
ಉಮಾಲತಾ ಅವರ ಜಮೀನಿನ ಬಗ್ಗೆ ಹುಚ್ಚೇಗೌಡ, ರಾಮಣ್ಣ, ಪುನೀತ್ ಹಾಗೂ ನಂಜೇಗೌಡ ಎಂಬುವರು ತಗಾದೆ ತೆಗೆದು ನಿಮ್ಮ ಜಮೀನು ನಮಗೆ ಸೇರಬೇಕು ಎಂದು ಪದೇ ಪದೇ ಜಗಳ ತೆಗೆಯುತ್ತಿದ್ದರು. 2011ರಿಂದಲೂ ಈ ಜಮೀನಿನ ಬಗ್ಗೆ ವಾಗ್ವಾದ ನಡೆಯುತ್ತಿದ್ದು, ಕಳೆದ ಸೆಪ್ಟೆಂಬರ್ನಲ್ಲಿ ಉಮಾಲತಾ ಅವರಿಗೆ ಸೇರಿದ ಜಮೀನಿನಲ್ಲಿ ಆರೋಪಿಗಳು ಉಳುಮೆ ಮಾಡಿದ್ದರು. ಈ ಕುರಿತಂತೆಯೂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಕೊಲ್ಲಾಪುರ ಸಂಸದ ಧೈರ್ಯಶೀಲ ಮಾನೆಗೆ ಬೆಳಗಾವಿ ಪ್ರವೇಶ ನಿಷೇಧ..!
ಪರಿಸ್ಥಿತಿ ಹೀಗಿದ್ದರೂ ಕೆಲ ದಿನಗಳ ಹಿಂದೆ ಪುನೀತ್ ಮತ್ತು ರಾಮಣ್ಣ ಎಂಬುವರು ಏಕಾಏಕಿ ಜಮೀನಿನ ಮೇಲೆ ದಾಳಿ ಮಾಡಿ ಜೆಸಿಬಿ ಯಂತ್ರದ ಮೂಲಕ ಎಂಟು ವರ್ಷದ 48 ಪಲ ನೀಡುವ ಮಾವಿನ ಮರಗಳನ್ನು ನಾಶಪಡಿಸಿದ್ದಾರೆ.
ವಿರೋಧದ ನಡುವೆಯೂ ಸುವರ್ಣಸೌಧದಲ್ಲಿ ಸಾರ್ವಕರ್ ಭಾವಚಿತ್ರ ಲೋಕಾರ್ಪಣೆ
ಆರೋಪಿಗಳ ಕೃತ್ಯ ಕುರಿತಂತೆ ಜಮೀನು ನೋಡಿಕೊಳ್ಳುತ್ತಿದ್ದ ಭದ್ರಶೆಟ್ಟಿ ಎಂಬುವರು ನೀಡಿದ ಮಾಹಿತಿ ಮೇರೆಗೆ ಉಮಲತಾ ಅವರ ಪತಿ ಹರೀಶ್ಕುಮಾರ್ ಕುಣಿಗಲ್ ಪೋಲಿಸರಿಗೆ ದೂರು ನೀಡಿದ್ದಾರೆ. ಹರೀಶ್ಕುಮಾರ್ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವ ಕುಣಿಗಲ್ ಪೊಲೀಸರು ಮುಂದಿನ ಕ್ರಮ ಜರುಗಿಸಿದ್ದಾರೆ.
#4acres, #mangotree, #Kunigal,