ಬೆಂಗಳೂರು, ಜು.13- ಅರಣ್ಯ ಪ್ರದೇಶದಲ್ಲಿ ಹ್ಯಾಶಿಶ್ ಆಯಿಲ್ ತಯಾರಿಸಿ ಡ್ರಗ್ ಪೆಡ್ಲರ್‍ಗಳಿಗೆ ಸರಬರಾಜು ಮಾಡುತ್ತಿದ್ದ ಇಬ್ಬರು ಮಹಿಳೆಯರು ಸೇರಿದಂತೆ ನಾಲ್ವರು ಅಂತರ್ ರಾಜ್ಯ ಡ್ರಗ್ ಕಳ್ಳ ಸಾಗಾಣಿಕೆ ತಂಡವನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತನಿಂದ 4 ಕೋಟಿ ಮೌಲ್ಯದ ನಿಷೇತ 5 ಕೆಜಿ ಹ್ಯಾಶಿಶ್ ಆಯಿಲ್ ಮತ್ತು 6 ಕೆಜಿ ಗಾಂಜಾ ವಶಪಡಿಸಿಕೊಳ್ಳುವಲ್ಲಿ ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳದ ಅಧಿಕಾರಿ ಮತ್ತು ಸಿಬ್ಬಂದಿ ತಂಡ ಯಶಸ್ವಿಯಾಗಿದೆ. ಶ್ರೀನಿ ಅಲಿಯಾಸ್ ಶ್ರೀನಿವಾಸ, ಸತ್ಯವತಿ, ಮಲ್ಲೇಶ್ವರಿ ಮತ್ತು ಪ್ರಹ್ಲಾದ ಬಂಧಿತ ಆರೋಪಿಗಳು.
ವಿವೇಕನಗರದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ತಂಡ ಕಾರ್ಯಾಚರಣೆ ನಡೆಸಿ ಡ್ರಗ್ ಪೆಡ್ಲಿಂಗ್‍ನಲ್ಲಿ ತೊಡಗಿದ್ದ ವ್ಯಕ್ತಿಯನ್ನು ವಶಕ್ಕೆ ಪಡೆದು ಆತನಿಂದ ಲಕ್ಷಾಂತರ ರೂ. ಬೆಲೆ ಬಾಳುವ ಎಂಡಿಎಂಎ ಎಕ್ಸ್‍ಟಿಸಿ ಪಿಲ್ಸ್‍ಗಳು, ಎಲ್‍ಎಸ್‍ಡಿ ಸ್ಟ್ರಿಪ್ಸ್‍ಗಳು, ಗಾಂಜಾ ಹಾಗೂ ಕೃತ್ಯಕ್ಕೆ ಬಳಸಿದ್ದ ಲ್ಯಾಪ್‍ಟಾಪ್ ಮೊಬೈಲ್ ಫೋನ್‍ಗಳನ್ನು ವಶಕ್ಕೆ ಪಡಿಸಿಕೊಂಡು ತನಿಖೆ ಕೈಗೊಂಡಿತ್ತು.
ಈ ತಂಡ ನಗರದ ಪ್ರತಿಷ್ಠಿತ ಪಬ್‍ಗಳು ಮತ್ತು ಬಾರ್‍ಅಂಡ್ ರೆಸ್ಟೋರೆಂಟ್‍ಗಳಲ್ಲಿ ಡಿಜೆ ಕೆಲಸ ನಿರ್ವಹಿಸುತ್ತಿದ್ದ ಈ ಆರೋಪಿಯನ್ನು ಪೊಲೀಸ್ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಈತನಿಗೆ ಹೆಚ್ಚಿನ ಪ್ರಮಾಣದಲ್ಲಿ ಆಂಧ್ರ ಪ್ರದೇಶದ ವಿಶಾಖ ಪಟ್ಟಣಂ ಜಿಲ್ಲೆಯ ಅರಕು ಮತ್ತು ಸೆಂಥಿಪಲ್ಲಿ ಅರಣ್ಯ ಪ್ರದೇಶಗಳಲ್ಲಿ ಗಾಂಜಾವನ್ನು ಬೆಳೆದು ಅದರಿಂದ ಹ್ಯಾಶಿಶ್ ಆಯಿಲ್ ಅನ್ನು ತಯಾರಿಕೆ ಮಾಡಿ ಈತನಿಗೆ ಮಾರಾಟ ಮಾಡುತ್ತಿದ್ದ ಗಾಂಜಾ ಕಳ್ಳಸಾಗಾಣಿಕೆ ಮಾಡುವ ಜಾಲವನ್ನು ಭೇದಿಸಿ ಇಬ್ಬರು ಮಹಿಳೆಯರನ್ನೊಳಗೊಂಡ ನಾಲ್ವರ ಕುಖ್ಯಾತ ತಂಡವನ್ನು ಬಂಸುವಲ್ಲಿ ಯಶಸ್ವಿಯಾಗಿದೆ.
ಕುಗ್ರಾಮದಲ್ಲಿ ವಾಸ: ಈ ಆರೋಪಿಗಳು ವಿಶಾಖ ಪಟ್ಟಣಂ ಜಿಲ್ಲೆಯ ಅರಕು ಮತ್ತು ಸೆಂಥಿಪಲ್ಲಿ ಅರಣ್ಯ ಪ್ರದೇಶದ ಬುಡದಲ್ಲಿನ ಕುಗ್ರಾಮಗಳಲ್ಲಿ ವಾಸವಿದ್ದು, ಇವರು ಬೆಂಗಳೂರು, ಕೊಚ್ಚಿನ್, ಚೆನ್ನೈ, ಹೈದ್ರಾಬಾದ್, ಮುಂಬೈ ಹಾಗೂ ಮೆಟ್ರೋಪಾಲಿಟನ್ ನಗರಗಳ ಡ್ರಗ್ ಪೆಡ್ಲರ್‍ಗಳೊಂದಿಗೆ ಸಂಪರ್ಕದಲ್ಲಿದ್ದರು.
ನಂತರ ಅವರುಗಳನ್ನು ನೆಲ್ಲೂರು ರೈಲ್ವೆ ನಿಲ್ದಾಣ, ಗುಂಟೂರು ರೈಲ್ವೆ ನಿಲ್ದಾಣ, ವಿಜಯವಾಡ ರೈಲ್ವೆ ನಿಲ್ದಾಣ, ಪುಟ್ಟಪರ್ತಿ ರೈಲ್ವೆ ನಿಲ್ದಾಣ ಹಾಗೂ ಹೈದ್ರಾಬಾದ್ ನಗರ ಬಸ್ ನಿಲ್ದಾಣ ಸೇರಿದಂತೆ ಮುಂತಾದ ಸ್ಥಳಗಳಿಗೆ ಬರಮಾಡಿಕೊಳ್ಳುತ್ತಿದ್ದರು.
ಮುಂಗಡ ಹಣ: ಡ್ರಗ್ ಪೆಡ್ಲರ್‍ಗಳಿಂದ ನಗದು ರೂಪದಲ್ಲಿ ಮುಂಗಡ ಹಣ ಪಡೆದು ಅವರಿಗೆ ಅವಶ್ಯಕವಿರುವ ಮಾದಕ ವಸ್ತುಗಳಾದ ಹ್ಯಾಶಿಶ್ ಆಯಿಲ್ ಮತ್ತು ಗಾಂಜಾದ ಪ್ರಮಾಣವನ್ನು ಆರ್ಡರ್ ಪಡೆದುಕೊಳ್ಳುತ್ತಿದ್ದರು.
ಕಾಲ್ನಡಿಗೆ ಮೂಲಕ ಅರಣ್ಯಕ್ಕೆ: ಅರಕು ಮತ್ತು ಸೆಂಥಿಪಲ್ಲಿ ಅರಣ್ಯ ಪ್ರದೇಶಗಳ ಅರಣ್ಯ ಇಲಾಖೆ, ಪೊಲೀಸ್ ಇಲಾಖೆ ಮತ್ತು ಅಬಕಾರಿ ಇಲಾಖೆಗಳ, ಚೆಕ್ ಪೋಸ್ಟ್ ಅಧಿಕಾರಿಗಳ ಕಣ್ತಪ್ಪಿಸಿ ಕಳ್ಳದಾರಿಯಲ್ಲಿ ಸುಮಾರು 25ರಿಂದ 30 ಕಿಲೋ ಮೀಟರ್ ದೂರವನ್ನು ಅಲೆಮಾರಿಗಳ ಸೋಗಿನಲ್ಲಿ ಕಾಲ್ನಡಿಗೆ ಮೂಲಕ ಬೆಟ್ಟಹತ್ತಿ ಹೋಗುತ್ತಿದ್ದರು.
ಅರಣ್ಯದಲ್ಲಿ ಹ್ಯಾಶಿಶ್ ಉತ್ಪಾದನೆ ಮಾಡಿಕೊಂಡು ಅಲ್ಲಿ ಬೆಳೆದಿರುವ ಗಾಂಜಾವನ್ನು ತೆಗೆದುಕೊಂಡು ಪುನಃ ಕಾಲ್ನಡಿಗೆಯಲ್ಲಿಯೇ ಅದೇ ಕಳ್ಳದಾರಿಯಲ್ಲಿ ಬೆಟ್ಟವನ್ನು ಇಳಿದು ಅಲ್ಲಿಂದ ಬಸ್ ಮತ್ತು ರೈಲುಗಳಲ್ಲಿ ಸಂಚಾರ ಮಾಡುತ್ತಿದ್ದರು.
ಹಣ್ಣು, ತರಕಾರಿ ಚೀಲದಲ್ಲಿ ಸಾಗಾಣೆ: ಈ ತಂಡದ ಮಹಿಳೆಯರನ್ನು ಬಳಸಿಕೊಂಡು ಹಣ್ಣು, ತರಕಾರಿ ಚೀಲ, ಅಕ್ಕಿ, ಗೋದಿ, ಬ್ಯಾಗ್‍ಗಳ ಮಧ್ಯೆ ಹಾಗೂ ಟಿಫನ್ ಬಾಕ್ಸ್‍ಗಳಲ್ಲಿ ಆಹಾರ ಪದಾರ್ಥಗಳ ಮಧ್ಯೆ ಮಾದಕ ವಸ್ತುಗಳನ್ನು ಮರೆಮಾಚಿ ಇಟ್ಟುಕೊಂಡು ರೈಲ್ವೆ ನಿಲ್ದಾಣಗಳ ಅಕ್ಕ-ಪಕ್ಕದಲ್ಲಿ ನಿರ್ಮಿಸಿರುವ ತಾತ್ಕಾಲಿಕ ಜೋಪಡಿಗಳಲ್ಲಿ ಶೇಖರಿಸಿಟ್ಟು ಕೊಳ್ಳುತ್ತಿದ್ದರು.
ಪೆಡ್ಲರ್‍ಗಳಿಗೆ ಸರಬರಾಜು: ಮುಂಗಡ ಹಣವನ್ನು ಪಡೆದಿರುವ ಪೆಡ್ಲರ್‍ಗಳಿಗೆ ಈ ಮಾದಕ ವಸ್ತುಗಳನ್ನು ಸರಬರಾಜು ಮಾಡುತ್ತಿದ್ದರು.
ಅಲೆಮಾರಿ ಜೀವನ: ಈ ತಂಡ ತಮ್ಮ ಇರುವಿಕೆಯನ್ನು ಮರೆಮಾಚುವ ಉದ್ದೇಶದಿಂದ ಯಾವುದೇ ಗುರುತಿನ ಚೀಟಿಗಳನ್ನಾಗಲೀ, ಮೊಬೈಲ್ ಫೆÇೀನ್‍ಗಳಾಗಲೀ ಬಳಸುತ್ತಿರಲಿಲ್ಲ. ಯಾವುದೇ ನಿರ್ದಿಷ್ಟ ಪ್ರದೇಶಗಳಲ್ಲಿ ನೆಲೆಸದೇ ಅಲೆಮಾರಿಗಳಾಗಿಯೇ ಜೀವನ ನಡೆಸುತ್ತಿದ್ದುದ್ದು ತನಿಖೆಯಿಂದ ಕಂಡು ಬಂದಿದೆ. ಬಂಧಿತ ಆರೋಪಿಗಳು ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿದ್ದು ತನಿಖೆ ಮುಂದುವರೆದಿದೆ.
ಈ ಕಾರ್ಯಾಚರಣೆಯನ್ನು ಅಪರಾಧ ವಿಭಾಗದ ಜಂಟಿ ಪೊಲೀಸ್ ಆಯುಕ್ತ ರಮಣ್‍ಗುಪ್ತ ಅವರ ಮಾರ್ಗದರ್ಶನದಲ್ಲಿ, ಡಿಸಿಪಿ ಅಪರಾಧ-2 ಬಿ.ಎಸ್. ಅಂಗಡಿ ಅವರ ನಿರ್ದೇಶನದಂತೆ ಸಿಸಿಬಿ ಎಸಿಪಿ ರಾಮಚಂದ್ರ ನೇತೃತ್ವದಲ್ಲಿ ಇನ್‍ಸ್ಪೆಕ್ಟರ್ ಅಶೋಕ್ ಹಾಗೂ ಸಿಬ್ಬಂದಿ ತಂಡವೂ ಯಶಸ್ವಿಯಾಗಿ ನಿರ್ವಹಿಸಿರುತ್ತಾರೆ.