ರಾಂಚಿ, ಆ.21 – ಮಾನವ ಕಳ್ಳಸಾಗಾಣಿಕೆ ಜಾಲವನ್ನು ರಾಂಚಿ ಪೊಲೀಸರು ಮತ್ತೊಮ್ಮೆ ಬಯಲಿಗೆಳೆದಿದ್ದಾರೆ. ಜಾರ್ಖಂಡ್‍ನಿಂದ ಅಪಹರಿಸಿದ್ದ ನಾಲ್ವರು ಮಕ್ಕಳು ಮತ್ತು ಮಹಿಳೆಯೊಬ್ಬರನ್ನು ದೆಹಲಿಯಿಂದ ರಕ್ಷಿಸಲಾಗಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಈ ಘಟನೆಯೂ ಸೇರಿದಂತೆ ಕಳೆದ ಫೆಬ್ರವರಿಯಿಂದ ಇಲ್ಲಿಯವರೆಗೆ ಮಕ್ಕಳು ಮತ್ತು ಮಹಿಳೆಯರು ಸೇರಿದಂತೆ ರಾಜ್ಯದ ಒಟ್ಟು 49 ಜನರನ್ನು ಕಳ್ಳಸಾಗಣೆದಾರರ ಕಪಿಮುಷ್ಠಿಯಿಂದ ರಕ್ಷಿಸಲಾಗಿದೆ ಎಂದು ತಿಳಿಸಿದ್ದಾರೆ.
ಅಂತಹ ಕಳ್ಳಸಾಗಣೆದಾರರು ಜಾರ್ಖಂಡ್‍ನಲ್ಲಿ ಸಕ್ರಿಯರಾಗಿದ್ದಾರೆ, ಯುವತಿಯರಿಗೆ ಉದ್ಯೋಗ, ಉತ್ತಮ ಜೀವನವನ್ನು ಭರವಸೆ ನೀಡಿ ದೆಹಲಿಗೆ ಕರೆತಂದು ಮಾರಾಟ ಮಾಡುತ್ತಾರೆ. ಮಕ್ಕಳನ್ನು ಬಿಕ್ಷಾಟಣೆಗೆ ಮತ್ತಿತರ ಅಕ್ರಮ ದಂಧೆಗೆ ನೂಕುತ್ತಾರೆ.
ಪ್ರಸ್ತುತ ರಕ್ಷಿಸಿರುವ ಮೂರು ಹುಡುಗಿಯರು ಚಿಕಿತ್ಸೆ ಪಡೆಯುತ್ತಿದ್ದಾರೆ..ಪಾಕುರ್ ಮತ್ತು ಸಾಹಿಬ್ಗಂಜ್ ಜಿಲ್ಲಾಡಳಿತದ ಸಹಾಯದಿಂದ, ಎಲ್ಲರನ್ನು ತಮ್ಮ ಗ್ರಾಮಕ್ಕೆ ಕಳುಹಿಸಲಾಗುತ್ತಿದೆ ಎಂದು ನವದೆಹಲಿಯ ಸಮಗ್ರ ಪುನರ್ವಸತಿ ಸಂಪನ್ಮೂಲ ಕೇಂದ್ರದ ನೋಡಲ್ ಅಧಿಕಾರಿ ತಿಳಿಸಿದ್ದಾರೆ.
ಮಾನವ ಕಳ್ಳಸಾಗಾಣೆ ಜಾಲದ ಮೇಲೆ ಗುಪ್ತಚರ ಇಲಾಖೆ ಕಣ್ಣಿಟ್ಟಿದೆ ಆದರೆ ದಂದೆಕೊರರು ಕಳ್ಳ ಮಾರ್ಗದ ಮೂಲಕ ವಿದೇಶಕ್ಕೆ ಮಾರಾಟ ಮಾಡಿರುವ ಉದಾಹರಣೆಯೂ ಇದೆ. ಇತ್ತೀಚೆಗೆ ಮಕ್ಕಳ ಕಳುವು ಭಾರತದಲ್ಲಿ ಹೆಚ್ಚಾಗುತ್ತಿದೆ.