ಡಬಲ್ ಡೆಕ್ಕರ್ ಬಸ್‍ಗೆ ಕಂಟೈನರ್ ಡಿಕ್ಕಿ, ನಾಲ್ವರು ಸಾವು

Social Share

ಲಕ್ನೋ,ಅ.23- ಉತ್ತರಪ್ರದೇಶದ ಎಕ್ಸ್‍ಪ್ರೆಸ್ ವೇ ಹೆದ್ದಾರಿಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ಸಾವು, 42 ಮಂದಿ ಗಾಯಗೊಂಡಿದ್ದಾರೆ. ಇಂದು ಮುಂಜಾನೆ ಇಟಾವಾ ಬಳಿ ಲಕ್ನೋ-ಆಗ್ರಾ ಎಕ್ಸ್‍ಪ್ರೆಸ್‍ವೇಯಲ್ಲಿ ಕಂಟೈನರ್ ಮತ್ತು ಡಬಲ್ ಡೆಕ್ಕರ್ ಬಸ್ ನಡುವಿನ ಮುಖಾಮುಖಿಯಿಂದ ಈ ದುರಂತ ಸಂಭವಿಸಿದೆ.

ಡಿಕ್ಕಿ ಸಂಭವಿಸಿ ನಾಲ್ವರು ಸಾವನ್ನಪ್ಪಿದ್ದಾರೆ ಮತ್ತು 42 ಮಂದಿ ಗಾಯಗೊಂಡಿದ್ದಾರೆ. ಘಟನೆಯಲ್ಲಿ ನಾಲ್ವರು ಪ್ರಯಾಣಿಕರು ಸ್ಥಳದಲ್ಲೇ ಮೃತಪಟ್ಟರೆ, ತೀವ್ರವಾಗಿ ಗಾಯಗೊಂಡಿರುವ 42ಕ್ಕೂ ಹೆಚ್ಚು ಪ್ರಯಾಣಿಕರನ್ನು ಸಫಾಯಿ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದೆ.

ವಿಧಾನಸಭೆ ಡೆಪ್ಯುಟಿ ಸ್ಪೀಕರ್ ಆನಂದ್ ಮಾಮನಿ ನಿಧನ

ಎಲ್ಲಾ ಗಾಯಾಳುಗಳಿಗೆ ಸೂಕ್ತ ನೆರವು ಮತ್ತು ಚಿಕಿತ್ಸೆ ನೀಡುವಂತೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಜಿಲ್ಲಾ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಕೆನಡಾ ವಿಮಾನ ನಿಲ್ದಾಣ ಬಳಿ ಸ್ಪೋಟಕ ಪತ್ತೆ : ಇಬ್ಬರ ಬಂಧನ

ಅಪಘಾತಕ್ಕಿಡಾದ ಬಸ್ ಗೋರಖ್‍ಪುರದಿಂದ ಅಜ್ಮೀರ್‍ಗೆ ಹೋಗುತ್ತಿದ್ದಾಗ ಅಪಘಾತ ಸಂಭವಿಸಿದೆ. ಬಸ್‍ನಲ್ಲಿ 60 ಮಂದಿ ಪ್ರಯಾಣಿಕರಿದ್ದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

Articles You Might Like

Share This Article