ರಸ್ತೆ ವಿಭಜಕದಲ್ಲಿ ಮಲಗಿದ್ದವರ ಮೇಲೆ ಹರಿದ ಟ್ರಕ್, 4 ಮಂದಿ ಸಾವು

Social Share

ನವದೆಹಲಿ , ಸೆ.21- ರಸ್ತೆ ಮಧ್ಯದ ವಿಭಜಕದಲ್ಲಿ ಮಲಗಿದ್ದವರ ಮೇಲೆ ಟ್ರಕ್ ಹರಿದ ಪರಿಣಾಮ ನ್ವಾಲ್ವರು ಮೃತಪಟ್ಟು ಇಬ್ಬರು ಗಾಯಗೊಂಡಿರುವ ಘಟನೆ ಈಶಾನ್ಯ ದೆಹಲಿಯ ಸೀಮಾಪುರಿ ಪ್ರದೇಶದಲ್ಲಿ ಇಂದು ಮುಂಜಾನೆ ನಡೆದಿದೆ.ಮುಂಜಾನೆ 2 ಗಂಟೆ ಸಮಾರಿನಲ್ಲಿ ಈ ದುರಂತ ಸಂಭವಿಸಿದೆ.

ಕೆಡಿಟಿಸಿ ಡಿಪೋ ಟ್ರಾಫಿಕ್ ಸಿಗ್ನಲ್ ದಾಟಿ ಡಿಎಲïಎಫ್ ಟಿ ಪಾಯಿಂಟ್ ಕಡೆಗೆ ಹೋಗುತ್ತಿದ್ದ ಟ್ರಕ್ ರಸ್ತೆ ವಿಭಜಕದಲ್ಲಿ ಮಲಗಿದ್ದ ಆರು ಜನರ ಮೇಲೆ ಹರಿದಿದೆ ಉಪ ಪೊಲೀಸ್ ಆಯುಕ್ತ ಸತ್ಯಸುಂದರಂ ತಿಳಿಸಿದ್ದಾರೆ.

ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, ನಾಲ್ವರು ಜಿಟಿಬಿ ಆಸ್ಪತ್ರೆಗೆ ಸಾಗಿಸುವಾಹ ಕೊನೆಯುಸಿರೆಳೆದಿದ್ದಾರೆ.ಟ್ರಕ್ ಚಾಲಕನ ಅತಿವೇಗ ಮತ್ತು ನಿರ್ಲಕ್ಷ್ಯದಿಂದ ಅಪಘಾತ ನಡೆದಿದೆ ಎಂದು ತಿಳಿಸಿದ್ದಾರೆ.

ಮೃತರನ್ನು ನ್ಯೂ ಸೀಮಾಪುರಿ ನಿವಾಸಿಗಳಾದ ಕರೀಂ (52), ಚೋಟ್ಟೆ ಖಾನ್ (25), ಶಾ ಆಲಂ (38) ಮತ್ತು ಉತ್ತರ ಪ್ರದೇಶದ ಸಾಹಿಬಾಬಾದ್ ಶಾಲಿಮಾರ್ ಗಾರ್ಡನ್ ನಿವಾಸಿ ರಾಹುಲ್ (45) ಎಂದು ಗುರುತಿಸಲಾಗಿದೆ .ಗಾಯಗೊಂಡವರನ್ನು ಉತ್ತರ ಪ್ರದೇಶದ ಸಾಹಿಬಾಬಾದ್ ಮನೀಶ್ (16) ಮತ್ತು ತಾಹಿರ್ಪುರ ನಿವಾಸಿ ಪ್ರದೀಪ್ (30) ಎಂದು ಗುರುತಿಸಲಾಗಿದೆ. ಇವರೆಲ್ಲರು ಕೂಲಿ ಕಾರ್ಮಿಕರೆಂದು ತಿಳಿದುಬಂದಿದೆ.

ಘಟನೆ ನಂತರ ಪರಾರಿಯಾಗಿರುವ ಟ್ರಕ್ ಚಾಲಕನ ಪತ್ತೆಗೆ ತಂಡಗಳನ್ನು ರಚಿಸಲಾಗಿದೆ.ತನಿಖೆ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Articles You Might Like

Share This Article