ದೇವರ ಉತ್ಸವದಲ್ಲಿ ಕ್ರೇನ್ ಮಗುಚಿಬಿದ್ದು ನಾಲ್ವರ ಸಾವು

Social Share

ಚೆನ್ನೈ,ಜ.23-ದೇವರ ಉತ್ಸವದಲ್ಲಿ ಸಂಭವಿಸಿದ ಕ್ರೇನ್ ಅವಘಡದಲ್ಲಿ 4 ಮಂದಿ ಮೃತಪಟ್ಟು, ಇತರ ಐದು ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ತಮಿಳುನಾಡಿನಲ್ಲಿ ಸಂಭವಿಸಿದೆ. ರಾಣಿಪೇಟೆಯ ದ್ರೌಪದಿ ದೇವಾಲಯದಲ್ಲಿ ನಡೆಯುತ್ತಿದ್ದ ಉತ್ಸವದ ಸಂದರ್ಭದಲ್ಲಿ ಕ್ರೇನ್ ಮಗುಚಿಬಿದ್ದು ಈ ದುರ್ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಭಕ್ತರು ನೀಡುವ ಮಾಲೆ ಸ್ವೀಕರಿಸಲು ಕ್ರೇನ್‍ನಲ್ಲಿ ಎಂಟು ಮಂದಿ ಇದ್ದರು. ಕ್ರೇನ್‍ನಲ್ಲಿ ದೇವರು ಮತ್ತು ದೇವಿಯರ ವಿಗ್ರಹಗಳ ಮೆರವಣಿಗೆ ಸಾಗಿಸಲಾಗುತಿತ್ತು. ಈ ಸಂದರ್ಭದಲ್ಲಿ ಕ್ರೇನ್ ಏಕಾಏಕಿ ಅಪಘಾತಕ್ಕೀಡಾಯಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಪೊಂಗಲ್ ನಂತರ ನಡೆಯುವ ದ್ರೌಪತಿ ಅಮ್ಮನ್ ಹಬ್ಬದ ಅಂಗವಾಗಿ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು.

ಕ್ರೇನ್ ಮಗುಚಿ ಬಿದ್ದು ಅದರ ಮೇಲೆ ಜನರು ನೇತಾಡುತ್ತಿರುವ ದೃಶ್ಯಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಪುರಿಜಗನ್ನಾಥನ ದರ್ಶನ ಪಡೆದ ಪಾಕಿಸ್ತಾನದ 45 ಹಿಂದೂ ಭಕ್ತರು

ಕ್ರೇನ್ ಕೆಳಕ್ಕೆ ಬೀಳುತ್ತಿದ್ದಂತೆ ದೇವಾಲಯದ ಭಕ್ತರು ಭಯಭೀತರಾಗಿ ದಿಕ್ಕಾಪಾಲಾಗಿ ಓಡುವ ದೃಶ್ಯಗಳಿವೆ. ನೆಲದ ಅಸಮತೋಲನದಿಂದಾಗಿ ಕ್ರೇನ್ ಉರುಳಿಬಿದ್ದಿರುವ ಸಾಧ್ಯತೆಗಳಿವೆ ಎಂದು ಶಂಕಿಸಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಜರುಗಿಸಿದ್ದಾರೆ.

ಕ್ರೇನ್ ಆಪರೇಟರ್ ಅನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ರಾಣಿಪೇಟೆ ಜಿಲ್ಲಾಧಿಕಾರಿ ಭಾಸ್ಕರ ಪಾಂಡಿಯನ್ ತಿಳಿಸಿದ್ದಾರೆ. ದೇಗುಲದ ಉತ್ಸವದಲ್ಲಿ ಕ್ರೇನ್ ಬಳಸಲು ಯಾವುದೇ ಅನುಮತಿ ಅಥವಾ ಸೂಚನೆ ಇರಲಿಲ್ಲ. ಇದು ಖಾಸಗಿ ದೇವಸ್ಥಾನ ಎಂದು ಪಾಂಡಿಯನ್ ಸ್ಪಷ್ಟಪಡಿಸಿದ್ದಾರೆ.

4 killed, due, collapse, crane, during, temple, festival, Tamil Nadu,

Articles You Might Like

Share This Article