ನವದೆಹಲಿ,ಮೇ.25-ಬುಡಕಟ್ಟು ಅಲೆಮಾರಿ ಕುಟುಂಬವಿದ್ದ ಟೆಂಟ್ ಮೇಲೆ ಮರ ಉರುಳಿ ಬಿದ್ದು ನಾಲ್ವರು ಸಾವನ್ನಪ್ಪಿರುವ ಘಟನೆ ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯಲ್ಲಿ ನಡೆದಿದೆ.ಇಂದು ಬೆಳಿಗ್ಗೆ ಪೈನ್ ಮರವೊಂದು ಬುಡಕಟ್ಟಿನವರಿದ್ದ ಟೆಂಟ್ ಮೇಲೆ ಬಿದ್ದು ಬುಡಕಟ್ಟು ಅಲೆಮಾರಿ ಕುಟುಂಬದ ನಾಲ್ವರು ಸಾವನ್ನಪ್ಪಿದ್ದಾರೆ ಎಂದು ಅಕಾರಿಗಳು ತಿಳಿಸಿದ್ದಾರೆ.
ಕೇಶ್ವಾನ್ ಬೆಲ್ಟ್‍ನ ಭಾಲ್ನಾ ಅರಣ್ಯ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಹೆಚ್ಚಿನ ವೇಗದ ಗಾಳಿ ಮತ್ತು ಭಾರೀ ಮಳೆಯಿಂದಾಗಿ ದೊಡ್ಡ ಮರವು ನೆಲಕ್ಕುರುಳಿದೆ ಎಂದು ಅವರು ಹೇಳಿದರು.ಅರಣ್ಯ ವಲಯದಲ್ಲಿ ಅಲೆಮಾರಿ ಕುಟುಂಬ ಹಾಕಿದ್ದ ಟೆಂಟ್ ಮೇಲೆ ಪೈನ್ ಮರ ಬಿದ್ದಿದೆ. ಈ ದುರಂತ ಘಟನೆಯಲ್ಲಿ ಇಂದು ಮುಂಜಾನೆ ನಾಲ್ವರು ಕುಟುಂಬದ ಸದಸ್ಯರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಕಿಶ್ತ್ವಾರ್‍ನ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಖಲೀಲ್ ಪೋಸ್ವಾಲ್ ಪಿಟಿಐಗೆ ತಿಳಿಸಿದ್ದಾರೆ.
ಬಸ್‍ಗಳಲ್ಲಿ ಟಿಕೆಟ್ ತೆಗದುಕೊಳ್ಳದ ಮಹಿಳೆಯರು, ಸಾರಿಗೆ ನಿಗಮಕ್ಕೆ ತಲೆನೋವು
ಕುಟುಂಬವು ತನ್ನ ಕುರಿ ಮತ್ತು ಮೇಕೆಗಳೊಂದಿಗೆ ದಚನ್ ಕಡೆಗೆ ಹೋಗುತ್ತಿತ್ತು ಮತ್ತು ಭಾರೀ ಮಳೆಯಿಂದಾಗಿ ಭಾಲ್ನಾ ಕಾಡಿನಲ್ಲಿ ಟೆಂಟ್ ಹಾಕಿಕೊಂಡಿದ್ದರು ಎಂದು ಅವರು ತಿಳಿಸಿದ್ದಾರೆ.ಮೂವರು ಮಹಿಳೆಯರು ಸೇರಿದಂತೆ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಕಿಶ್ತ್ವಾರ್‍ನ ಉಪ ಆಯುಕ್ತ ದೇವಾಂಶ್ ಯಾದವ್ ತಿಳಿಸಿದ್ದಾರೆ.
ಪೊಲೀಸ್ ತಂಡವು ತಕ್ಷಣವೇ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿತು ಎಂದು ಯಾದವ್ ಹೇಳಿದರು, ಮೃತದೇಹಗಳನ್ನು ಕಾನೂನು ವಿವಿಧಾನಗಳಿಗಾಗಿ ಆಸ್ಪತ್ರೆಗೆ ಕೊಂಡೊಯ್ಯಲಾಗುತ್ತಿದೆ ಎಂದು ಹೇಳಿದರು. ರೆಡ್ ಕ್ರಾಸ್ ಸೊಸೈಟಿಯಿಂದ ಕುಟುಂಬಕ್ಕೆ 50 ಸಾವಿರ ತಕ್ಷಣ ಪರಿಹಾರ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು. ಬಲಿಯಾದವರು ಕಥುವಾ ಜಿಲ್ಲೆಯ ಗತಿ-ಬರ್ವಾಲ್ ನಿವಾಸಿಗಳೆಂದು ಗುರುತಿಸಲಾಗಿದೆ.
#FamilyMembersDead, #TreeFallsOnTent, In #Kishtwar, #4Dead,