ಮಹಾರಾಷ್ಟ್ರ : ಇಡೀ ಕುಟುಂಬ ಮನೆಯಲ್ಲಿ ಶವವಾಗಿ ಪತ್ತೆ

ಧುಲೆ, ಸೆ.20- ಇಬ್ಬರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ನಾಲ್ವರು ಮಹಾರಾಷ್ಟ್ರದ ಧುಲೆಯ ಪ್ರಮೋದ್ ನಗರ ಪ್ರದೇಶದಲ್ಲಿನ ಅವರ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಮೃತರನ್ನು ಕಷಿ ರಸಗೊಬ್ಬರ ಮಾರಾಟಗಾರ ಪ್ರವೀಣ್ ಮಾನಸಿಂಗ್ ಗಿರಾಸೆ, ಅವರ ಪತ್ನಿ ಗೀತಾ ಪ್ರವೀಣ್ ಗಿರಾಸೆ, ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದು, ಅವರ ಇಬ್ಬರು ಮಕ್ಕಳಾದ ಮಿತೇಶ್ ಪ್ರವೀಣ್ ಗಿರಾಸೆ ಮತ್ತು ಸೋಹಂ ಪ್ರವೀಣ್ ಗಿರಾಸೆ ಎಂದು ಗುರುತಿಸಲಾಗಿದೆ. ಧುಲೆ ಜಿಲ್ಲೆಯ ದೇವಪುರ ಪೊಲೀಸ್ ಠಾಣೆ ವ್ಯಾಪ್ತಿಯ ಸಮರ್ಥ ಕಾಲೋನಿಯ ಪ್ರಮೋದ್ ನಗರ ಪ್ರದೇಶದ ಅವರ ಮನೆಯಲ್ಲಿ ಅವರ ಶವಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.ಮನೆಯಿಂದ ದುರ್ವಾಸನೆ ಬರುತ್ತಿದ್ದರಿಂದ ಮೂರ್ನಾಲ್ಕು ದಿನಗಳ ಹಿಂದೆ ಮತಪಟ್ಟಿರಬೇಕು ಎಂದು ಪೊಲೀಸರು ತಿಳಿಸಿದ್ದಾರೆ. ಪ್ರವೀಣ್ ಗಿರಾಸೆ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದು, ಪತ್ನಿ ಹಾಗೂ ಇಬ್ಬರು ಮಕ್ಕಳು ವಿಷ ಸೇವಿಸಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಕುಟುಂಬ ಏಕೆ ಈ ತೀವ್ರ ಕ್ರಮ ಕೈಗೊಂಡಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.ಸಮದ್ಧ ಕುಟುಂಬವಾಗಿದ್ದರೂ ಈ … Continue reading ಮಹಾರಾಷ್ಟ್ರ : ಇಡೀ ಕುಟುಂಬ ಮನೆಯಲ್ಲಿ ಶವವಾಗಿ ಪತ್ತೆ