ಪಟಾಕಿ ತಂದ ಅವಾಂತರ, 4 ಮಂದಿ ಕಣ್ಣುಗಳಿಗೆ ಹಾನಿ

Social Share

ಬೆಂಗಳೂರು,ಅ.24- ದೀಪಾವಳಿ ಹಬ್ಬದ ಸಂದರ್ಭದಲ್ಲಿ ಸಿಡಿಸುವ ಪಟಾಕಿಗಳನ್ನು ಜಾಗೃತಿಯಿಂದ ಸಿಡಿಸುವಂತೆ ಎಷ್ಟೆ ಮನವರಿಕೆ ಮಾಡಿಕೊಟ್ಟರು ಜನ ಮಾತ್ರ ತಪ್ಪು ಮಾಡೋದನ್ನು ಬಿಟ್ಟಿಲ್ಲ. ಹೀಗಾಗಿ ನಿನ್ನೆಯಿಂದ ಇದುವರೆಗೂ 4 ಮಂದಿ ತಮ್ಮ ಕಣ್ಣುಗಳಿಗೆ ಹಾನಿ ಮಾಡಿಕೊಂಡಿ ದ್ದಾರೆ.

ನಿನ್ನೆ ಇಬ್ಬರು ಕಣ್ಣಿಗೆ ಹಾನಿ ಮಾಡಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದರೂ ಇದೀಗ ಮತ್ತಿಬ್ಬರು ಬಾಲಕರು ತಮ್ಮ ಕಣ್ಣುಗಳಿಗೆ ಹಾನಿ ಮಾಡಿಕೊಂಡಿ ದ್ದಾರೆ. ಮನೆ ಮುಂಭಾಗದ ರಸ್ತೆ ಯಲ್ಲಿ ಪಟಾಕಿ ಸಿಡಿಸುತ್ತಿದ್ದ ಥಣಿಸಂದ್ರದ 7 ವರ್ಷದ ಬಾಲಕ ಎಡಗಣ್ಣಿಗೆ ಹಾಗೂ ಫ್ರೆಜರ್ ಟೌನ್‍ನ 7 ವರ್ಷದ ಮತ್ತೊಬ್ಬ ಬಾಲಕ ಬಲಗಣ್ಣಿಗೆ ಹಾನಿ ಮಾಡಿ ಕೊಂಡಿದ್ದಾರೆ.

ಇಬ್ಬರು ಬಾಲಕರು ಮಿಂಟೋ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು, ಅವರು ಸ್ವಲ್ಪದರಲೆ ಅಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಶಿಂಧೆ ಬಣದ 22ಕ್ಕೂ ಹೆಚ್ಚು ಶಾಸಕರು ಬಿಜೆಪಿಗೆ..?

ಮನುಷ್ಯನಿಗೆ ಕಣ್ಣು ಪ್ರಮುಖ ಆಂಗವಾಗಿದ್ದು, ಪಟಾಕಿ ಹೊಡೆಯುವ ಚಟದಿಂ ದಾಗಿ ಅತ್ಯಮೂಲ್ಯವಾದ ನಿಮ್ಮ ಕಣ್ಣುಗಳನ್ನು ಹಾಳು ಮಾಡಿಕೊಳ್ಳಬೇಡಿ. ಪಟಾಕಿ ಹಚ್ಚುವಾಗ ಎಚ್ಚರವಹಿಸಬೇಕು ಎಂದು ವೈದ್ಯರು ಸಲಹೆ ನೀಡಿದ್ದಾರೆ.

Articles You Might Like

Share This Article