ಇಂಡಿಯಾನಾ ಮಾಲ್‍ನಲ್ಲಿ ಗುಂಡಿನ ದಾಳಿ, 4 ಮಂದಿ ಬಲಿ

Social Share

ಗ್ರೀನ್ವುಡ್ , ಜುಲೈ 18-ಕಳೆದ ರಾತ್ರಿ ಇಲ್ಲಿನ ಇಂಡಿಯಾನಾ ಮಾಲ್‍ಗೆ ನುಗ್ಗಿದ ಬಂದೂಕುಧಾರಿಯೊಬ್ಬ ಗುಂಡಿನದಾಳಿ ನಡೆಸಿ ನಾಲ್ವರು ಸಾವನ್ನಪ್ಪಿದ್ದಾರೆ. ಮಾಲ್‍ನ ಫುಡ್ ಕೋರ್ಟ್‍ಗೆ ದುಷ್ರ್ಕಮಿ ನುಗ್ಗಿ ಗುಂಡಿನದಾಳಿ ನಡೆಸಿದ್ದಾನೆ ಈತನ ಪುಂಡಟ ಕಂಡ ನಾಗರಿಕನೊಬ್ಬ ಆತನನ್ನು ಗುಂಡಿಕ್ಕಿ ಕೊಂದಿದ್ದಾರೆ.

ದುಷ್ಕರ್ಮಿ ರೈಫಲ್ ಮತ್ತು ಮದ್ದುಗುಂಡು ಹಲವಾರು ಮ್ಯಾಗಜೀನ್‍ಳೊಂದಿಗೆ ಮಾಲ್ ಪ್ರವೇಶಿಸಿ ಮನಬಂದಂತೆ ಗುಂಡು ಹಾರಿಸಿದ ಎಂದು ಗ್ರೀನ್ವುಡ್ ಪೊಲೀಸ್ ಇಲಾಖೆಯ ಮುಖ್ಯಸ್ಥ ಜಿಮ್ ಐಸನ್ ಹೇಳಿದ್ದಾರೆ.

ಫುಡ್ ಕೋರ್ಟ್ ಬಳಿಯ ಬಾತ್ ರೂಂನಲ್ಲಿದ್ದ ಅನುಮಾನಾಸ್ಪದ ವಸ್ತುವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ಐಸನ್ ಹೇಳಿದ್ದಾರೆ. ಇಂಡಿಯಾನಾ ಪೆÇಲಿಸ್ ಮೆಟ್ರೋಪಾಲಿಟನ್ ಪೊಲಿಸ್ ಮತ್ತು ಅನೇಕ ಇತರ ಏಜೆನ್ಸಿಗಳು ತನಿಖೆಯಲ್ಲಿ ಸಹಾಯ ಮಾಡುತ್ತಿವೆ.

ನಮ್ಮ ದೇಶದಲ್ಲಿ ರೀತಿಯ ಘಟನೆಯಿಂದ ನಾವು ಅಸ್ವಸ್ಥರಾಗಿದ್ದೇವೆ ಎಂದು ಇಂಡಿಯಾನಾಪೊಲಿಸ್ ಸಹಾಯಕ ಪೊಲೀಸ್ ಮುಖ್ಯಸ್ಥ ಕ್ರಿಸ್ ಬೈಲಿ ಹೇಳಿದ್ದಾರೆ.

Articles You Might Like

Share This Article