ಮಹಾರಾಷ್ಟ್ರದಲ್ಲಿ ನಿಷೇಧಿತ PFI ಸಂಘಟನೆಯ 4 ಸದಸ್ಯರ ಬಂಧನ

ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರಹ ದಳವು ರಾಯಗಡ ಜಿಲ್ಲೆಯ ಪನ್ವೇಲ್‍ನಿಂದ ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ (ಪಿಎಫ್‍ಐ) ನಾಲ್ವರು ಸದಸ್ಯರನ್ನು ಬಂಧಿಸಿದೆ.
Social Share

ಮುಂಬೈ.ಅ,20 – ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರಹ ದಳವು ರಾಯಗಡ ಜಿಲ್ಲೆಯ ಪನ್ವೇಲ್‍ನಿಂದ ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ (ಪಿಎಫ್‍ಐ) ನಾಲ್ವರು ಸದಸ್ಯರನ್ನು ಬಂಧಿಸಿದೆ.

ಬಂಧಿತರಲ್ಲಿ ನಿಷೇಧಿತ ಸಂಘಟನೆಯ ರಾಜ್ಯ ವಿಸ್ತರಣಾ ಸಮಿತಿಯ ಸ್ಥಳೀಯ ಸದಸ್ಯರು ಅದರಲ್ಲಿ ಸ್ಥಳೀಯ ಘಟಕದ ಕಾರ್ಯದರ್ಶಿ ಮತ್ತು ಇತರ ಇಬ್ಬರು ಕಾರ್ಯಕರ್ತರು ಸೇರಿದ್ದಾರೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (20-10-2022)

ಸಂಘಟನೆಯನ್ನು ನಿಷೇಧಿಸಿದ್ದರೂ ಸಹ, ಪನ್ವೇಲ್‍ನಲ್ಲಿ ಗೋಪ್ಯವಾಗಿ ಪಿಎಫ್‍ಐ ಸಭೆಯ ನಡೆಸಿದ್ದ ಬಗ್ಗೆ ಎಟಿಎಸ್ ನಿರ್ದಿಷ್ಟ ಮಾಹಿತಿ ಕಲೆಹಾಕಿದ ಎಟಿಎಸ್ ತಂಡವು ಮುಂಬೈನಿಂದ ಸುಮಾರು 50 ಕಿಮೀ ದೂರದಲ್ಲಿರುವ ಪನ್ವೇಲ್‍ನಲ್ಲಿ ಕಾರ್ಯಾಚರಣೆ ನಡೆಸಿ ನಾಲ್ವರು ಬಂಧಿಸಿದೆ ಎಂದು ಅವರು ಹೇಳಿದರು.

ವಿಚಾರಣೆಯ ನಂತರ, ಮುಂಬೈನ ಎಟಿಎಸ್‍ನ ಕಲಾಚೌಕಿ ಘಟಕದಲ್ಲಿ ಕಠಿಣ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆಯ ಸೆಕ್ಷನ್ 10 ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು ವಿಚಾರಣೆ ನಡೆಸಲಾಗಿದೆ.

Articles You Might Like

Share This Article