ಸಾಂಗ್ಲಿ, ಸೆ 14 – ಮಕ್ಕಳ ಕಳ್ಳರೆಂದು ಶಂಕಿಸಿ ನಾಲ್ವರು ಸಾಧುಗಳ ಮೇಲೆ ಗುಂಪೊಂದು ಹಲ್ಲೇ ನಡೆಸಿರುವ ಘಟನೆ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೇಯ ಜಟ್ ತೆಹಸಿಲನ ಪ್ರದೇಶದಲ್ಲಿ ನಡೆದಿದೆ. ಉತ್ತರ ಪ್ರದೇಶ ಮೂಲದ ನಾಲ್ವರು ಕಾರಿನಲ್ಲಿ ಕರ್ನಾಟಕದ ಬಿಜಾಪುರದಿಂದ ಪಂಢರಪುರದ ದೇವಸ್ಥಾನದ ಕಡೆಗೆ ಹೋಗುತ್ತಿದ್ದಾಗ ಲವಂಗಾ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಇದನ್ನೂ ಓದಿ : ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (14-09-2022)
ಸೋಮವಾರ ಗ್ರಾಮದ ದೇವಸ್ಥಾನದಲ್ಲಿ ತಂಗಿದ್ದರು. ಮಂಗಳವಾರ ಪ್ರಯಾಣವನ್ನು ಪುನರಾರಂಭಿಸುವಾಗ, ಅವರು ಹುಡುಗನನ್ನು ದಾರಿ ಕೇಳಿದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದು ಮಕ್ಕಳನ್ನು ಅಪಹರಿಸುವ ಕ್ರಿಮಿನಲ್ ಗ್ಯಾಂಗ್ ಎಂದು ಕೆಲವು ಸ್ಥಳೀಯರು ಅನುಮಾನಿಸಿ ಹಲ್ಲೆ ನಡೆಸಲಾಗಿದೆ.
ದೊಣ್ಣೆಗಳಿಂದ ಥಳಿಸುತ್ತಿದ್ದಾಗ ಪೊಲೀಸರು ಬಂದು ಪರಿಸ್ಥಿತಿ ನಿಯಂತ್ರಿಸಿದ್ದಾರೆ ಮತ್ತು ಸಾಧುಗಳು ಉತ್ತರ ಪ್ರದೇಶದ ಅಕಡಾದ ಸದಸ್ಯರಾಗಿದ್ದಾರೆ ಎಂದು ತಿಳಿದು ಕೆಲವರು ಕ್ಷಮೆಯಾಚಿಸಿದ್ದಾರೆ.ಯಾರು ಕೂಡ ದೂರು ನೀಡಿಲ್ಲ .