ಪಾಕ್ ಭದ್ರತಾ ಶಿಬಿರಗಳಲ್ಲಿ ಶೂಟೌಟ್ : ನಾಲ್ವರು ಉಗ್ರರು, ಓರ್ವ ಯೋಧ ಬಲಿ

Social Share

ಕರಾಚಿ, ಫೆ.3- ಶಸ್ತ್ರ ಸಜ್ಜಿತ ದುಷ್ಕರ್ಮಿಗಳು ಪಾಕಿಸ್ತಾನದ ಗಲಭೆಗ್ರಸ್ತ ನೈಋತ್ಯ ಬಲೂಚಿಸ್ತಾನ ಪ್ರಾಂತ್ಯದ ಭದ್ರತಾ ಪಡೆಗಳ ಎರಡು ಶಿಬಿರಗಳ ಮೇಲೆ ದಾಳಿ ನಡೆಸಿದಾಗ ಉಂಟಾದ ಗುಂಡಿನ ಚಕಮಕಿಯಲ್ಲಿ ನಾಲ್ವರು ಭಯೋತ್ಪಾದಕರು ಮತ್ತು ಓರ್ವ ಯೋಧ ಮೃತಪಟ್ಟಿದ್ದಾರೆ ಎಂದು ಸೇನೆಯ ಮಾಧ್ಯಮ ವಿಭಾಗ ತಿಳಿಸಿದೆ.
ಬಳಿಕ ನಿಷೇಧಿತ ಬಲೂಚ್ ಲಿಬರೇಷನ್ ಆರ್ಮಿ ಈ ದಾಳಿಯ ಹೊಣೆ ಹೊತ್ತಿದೆ. ಪಂಜ್‍ಗೂರ್ ಮತ್ತು ನೋಶ್ಕಿ ಜಿಲ್ಲೆಗಳಲ್ಲಿ ದಾಳಿ ನಡೆಯಿತು. ಪಂಜ್‍ಗೂರ್‍ನಲ್ಲಿ ಉಗ್ರಗಾಮಿಗಳು ಭದ್ರತಾ ಪಡೆಗಳ ಶಿಬಿರವೊಂದಕ್ಕೆ ಎರಡು ಕಡೆಗಳಿಂದ ನುಗ್ಗಲು ಪ್ರಯತ್ನಿಸಿದರು. ನೋಶ್ಕಿಯಲ್ಲಿ ಗಡಿ ಪೆÇಲೀಸ್ (ಫ್ರಾಂಟಿಯರ್ ಕಾಪ್ರ್ಸ್) ಶಿಬಿರಕ್ಕೆ ನುಗ್ಗಲು ನಡೆಸಿದ ಯತ್ನವನ್ನು ಯಶಸ್ವಿಯಾಗಿ ಹತ್ತಿಕ್ಕಲಾಯಿತು ಎಂದು ಪಾಕ್ ಮಿಲಿಟರಿಯ ಮಾಧ್ಯಮ ವಿಭಾಗ ಪ್ರತಿಪಾದಿಸಿದೆ.
ಈ ಶೂಟೌಟ್‍ನಲ್ಲಿ ನಾಲ್ವರು ಭಯೋತ್ಪಾದಕರು ಹಾಗೂ ಓರ್ವ ಯೋಧ ಅಸುನೀಗಿದ್ದು, ಓರ್ವ ಅಧಿಕಾರಿ ಗಾಯಗೊಂಡಿದ್ದಾರೆ. ಎಡೆಬಿಡದೆ ಗುಂಡಿನ ಚಕಮಕಿ ಮುಂದುವರೆದಿದೆ ಎಂದು ಸೇನೆಯ ಮಾಧ್ಯಮ ವಿಭಾಗವಾದ ಇಂಟರ್ ಸರ್ವೀಸಸ್ ಪಬ್ಲಿಕ್ ರಿಲೇಷನ್ಸ್ (ಐಎಸ್‍ಪಿಆರ್) ವಿವರಿಸಿದೆ. ಉಗ್ರಗಾಮಿಗಳ ಕಡೆ ಅತಿ ಹೆಚ್ಚು ಹಾನಿ ಸಂಭವಿಸಿದೆ ಎಂದು ಅದು ಹೇಳಿದೆ.

Articles You Might Like

Share This Article