40ಕ್ಕೂ ಹೆಚ್ಚು ಕುರಿ, ಮೇಕೆ ಕದ್ದೊಯ್ದ ಕಳ್ಳರು

Social Share

ಕೊರಟಗೆರೆ, ಡಿ.3- ಬಡ ರೈತಾಪಿ ವರ್ಗದ ಕುಟುಂಬವೊಂದರ ಕುರಿ ರಪ್ಪದಲ್ಲಿನ 40ಕ್ಕೂ ಹೆಚ್ಚು ಕುರಿ ಹಾಗೂ ಮೇಕೆಯನ್ನ ಟೆಂಪೋದಲ್ಲಿ ತುಂಬಿಕೊಂಡು ಸಿನಿಮೀಯ ರೀತಿಯಲ್ಲಿ ಪರಾರಿಯಾಗಿರುವ ಘಟನೆ ಕೊರಟಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ.

ತಾಲೂಕು ಅರಸಾಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಾಶಾಪುರ ಗ್ರಾಮದಲ್ಲಿ ಈ ಘಟನೆ ಜರುಗಿದ್ದು, ನಾಗರಾಜು ಎಂಬ ಬಡ ರೈತನ ಒಂದೇ ರಪ್ಪದಲ್ಲಿ 40ಕ್ಕೂ ಹೆಚ್ಚು ಕುರಿ- ಮೇಕೆಗಳಿದ್ದವು. ಗುರುವಾರ ಮಧ್ಯರಾತ್ರಿ ಎರಡು ಗಂಟೆ ನಂತರ ಕಳ್ಳತನವಾಗಿರಬಹುದು ಎನ್ನಲಾಗಿದೆ.

ಈ ರೈತನ ಕುಟುಂಬ ಸಂಬಂಧಿಕರ ಮದುವೆಗೆ ಕೊರಟಗೆರೆ ಸಿದ್ದೇಶ್ವರ ಕಲ್ಯಾಣ ಮಂಟಪಕ್ಕೆ ಹೋಗಿದ್ದು, ಮದುವೆ ಮುಗಿಸಿಕೊಂಡು ಹಿಂತಿರುಗುವಾಗ ರಾತ್ರಿ11.30 ಆಗಿತ್ತು. ಮದುವೆಯಿಂದ ಬಂದವರು ಗಾಡ ನಿದ್ರೆಗೆ ಜಾರಿದ್ದಾರೆ.

ಮಹಾರಾಷ್ಟ್ರದಲ್ಲಿ ಏಕ ಬಳಕೆ ಪ್ಲಾಸ್ಟಿಕ್ ನೀತಿ ಪರಿಷ್ಕರಣೆ

ಆ ಸಂದರ್ಭದಲ್ಲಿ, ಕುರಿ, ಮೇಕೆ ಕಳುವ ಮಾಡಲು ಬಂದ ಚೋರರು ಮನೆಗಳಿಂದ ಯಾರು ಹೊರಗೆ ಬಾರದಿರದಂತೆ ಸುತ್ತಲಿನ 8-10 ಮನೆಗಳ ಬಾಗಿಲ ಚಿಲಕಕ್ಕೆ ಕಡ್ಡಿ ಇಟ್ಟು ಕಳ್ಳತನ ಮಾಡಲಾಗಿದೆ. ಬಡ ರೈತ ನಾಗರಾಜು ಕುರಿ-ಮೇಕೆ ಸಾಕಿ ಜೀವನ ಸಾಗಿಸುತ್ತಿದ್ದು, ಕಳವಾದ ನಂತರ ದಿಕ್ಕು ಕಾಣದಂತಾಗಿ ಜೀವನದ ಬಂಡಿ ಮುಂದೆ ಸಾಗಿಸಲು ಸಂಕಷ್ಟ ಎದುರಿಸುತ್ತಿದ್ದು, ಕಳ್ಳತನದಿಂದ ಆಕಾಶವೇ ತಲೆ ಮೇಲೆ ಕಳಚಿ ಬಿದ್ದಂತಾಗಿದೆ.

ಅಮೆರಿಕಾದ ಮಾಜಿ ಗುಪ್ತಚರ ಅಧಿಕಾರಿಗೆ ರಷ್ಯಾ ಪೌರತ್ವ

ಸರ್ಕಾರದಿಂದ ಪರಿಹಾರ ಕಲ್ಪಿಸಿಕೊಡಲು ಇಡೀ ಕುಟುಂಬ ವರ್ಗ ಅಂಗಲಾಚುತಿದೆ. ಚಿಕ್ಕನಹಳ್ಳಿಯಲ್ಲೂ ಕಳ್ಳತನ
ಕಾಶಾಪುರದಲ್ಲಿ ಮೇಕೆ ಕಳೆವು ಮಾಡಿದ ಅರ್ಧ ತಾಸು ಅಥವಾ ಒಂದು ಗಂಟೆಯ ಅಂತರದಲ್ಲಿ 5-6 ಕಿಲೋ ಮೀಟರ್ ದೂರದಲ್ಲಿರುವ ಚಿಕ್ಕನಹಳ್ಳಿ ಬಳಿ 4-5 ಕುರಿ ಮೇಕೆಗಳನ್ನ ಕಳವು ಮಾಡಿ ಪರಾರಿಯಾಗಿದ್ದಾರೆ ಎನ್ನಲಾಗಿದೆ.

ಸಿದ್ದರಾಮಯ್ಯ ಆಸ್ಪತ್ರೆಗೆ ದಾಖಲು

ಈ ಸಂಬಂಧ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಪಿಐ ಕೆ ಸುರೇಶ್ ಹಾಗೂ ಪಿಎಸ್‍ಐ ಚೇತನ್ ಗೌಡ ಸ್ಥಳಕ್ಕೆ ಭೇಟಿ ನೀಡಿ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

sheep, goats, Thieves, Koratagere,

Articles You Might Like

Share This Article