ನೀರಿನ ಮಟ್ಟ ಹಠಾತ್ ಏರಿಕೆಯಾಗಿ ಜಲಪಾತದ ಬಳಿ ಸಿಲುಕಿದ್ದ 40 ಪ್ರವಾಸಿಗರ ರಕ್ಷಣೆ

Social Share

ಪಣಜಿ, ಅ.15- ಭಾರೀ ಮಳೆಯಿಂದ ನೀರಿನ ಮಟ್ಟ ಹಠಾತ್ ಏರಿಕೆಯಾಗಿ ಮಾಂಡೋವಿ ನದಿಯ ಮೇಲಿನ ಸಣ್ಣ ಸೇತುವೆ ಕೊಚ್ಚಿಹೋಗಿದ್ದರಿಂದ ದಕ್ಷಿಣ ಗೋವಾದ ದೂಧ್‍ಸಾಗರ್ ಜಲಪಾತದ ಬಳಿ ಸಿಲುಕಿಕೊಂಡಿದ್ದ ಸುಮಾರು 40 ಪ್ರವಾಸಿಗರನ್ನು ಜೀವ ರಕ್ಷಕ ಸಿಬ್ಬಂದಿ ರಕ್ಷಿಸಿದ್ದಾರೆ.

ರಾಜ್ಯದಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದ್ದು ಮಾಂಡೋವಿ ನದಿಯ ಬಳಿ ಬಂದಿದ್ದ 40 ಪ್ರವಾಸಿಗರು ಕೊಚ್ಚಿಹೋದರು. ಇವರು ದೂಧ್‍ಸಾಗರ್ ಜಲಪಾತದ ಬಳಿ ಸಿಲುಕಿಕೊಂಡಿದ್ದ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ರಕ್ಷಣಾ ಕಾರ್ಯಾಚರಣೆ ನಡೆಸಿ ಜೀವ ಉಳಿಸಲಾಗಿದೆ. ಅವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದ್ದು ಎಲ್ಲರು ಚೇತರಿಸಿಕೊಂಡಿದ್ದಾರೆ.

ಅಪಾಯವನ್ನು ಲೆಕ್ಕಿಸದೆ ಕಾರ್ಯಾಚರಣೆ ನಡೆಸಿದ ರಿವರ್ ಲೈಫ್ ಸೇವರ್ಸ್ ಜೀವ ರಕ್ಷಕರ ಸಾಹಸವನ್ನು ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಶ್ಲಾಘಿಸಿದ್ದಾರೆ.

ಗೋವಾ-ಕರ್ನಾಟಕ ಗಡಿಯಲ್ಲಿರುವ ಸುಂದರವಾದ ದೂಧ್‍ಸಾಗರ್‍ಜಲಪಾತ ಹೆಚ್ಚಿನ ಸಂಖ್ಯೆಯ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಮಳೆಗಾಲದ ಆರಂಭದಲ್ಲಿ ಈ ಜಲಪಾತಕ್ಕೆ ಭೇಟಿ ನೀಡುವುದನ್ನು ನಿಲ್ಲಿಸಲಾಗಿತ್ತು. ಆದರೆ ಈ ವಾರದ ಆರಂಭದಲ್ಲಿ ಪ್ರವಾಸಿಗರಿಗೆ ಇದನ್ನು ತೆರೆಯಲಾಗಿತ್ತು.

Articles You Might Like

Share This Article