ಐಸಿಸ್ ಉಗ್ರರ ದಾಳಿಗೆ 42 ಮಂದಿ ಯೋಧರು ಬಲಿ..!

Social Share

ಮಲಿ, ಆ.11- ಇಸ್ಲಾಮಿಕ್ ಸ್ಟೆಟ್‍ಗೆ ಸೇರಿದ ಸಂಘಟನೆ ಉಗ್ರರು ನಡೆಸಿದ ದಾಳಿಯಿಂದ ಪಶ್ಚಿಮ ಆಫ್ರಿಕಾದ ಮಲೈನ್ ಪ್ರದೇಶದಲ್ಲಿ 42 ಮಂದಿ ಯೋಧರು ಹತರಾಗಿದ್ದು, 22 ಮಂದಿ ಗಾಯಗೊಂಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಮಲೈನ್ ಸೇನೆಯ ಮೇಲೆ ನಡೆದ ಭೀಕರ ದಾಳಿ ಇದು ಎಂದು ವಿಶ್ಲೇಷಿಸಲಾಗಿದೆ. ಪಶ್ಚಿಮ ಆಫ್ರಿಕಾದ ಸೆಹೆಗಲ್ ವಲಯದಲ್ಲಿ ವ್ಯಾಪಕವಾಗಿ ಹರಡಿರುವ ಮೂಲಭೂತವಾದಿ ಉಗ್ರರು ದಶಕಗಳಿಂದಲೂ ಸೇನೆಯೊಂದಿಗೆ ಸಂಘರ್ಷ ನಡೆಸುತ್ತಿದ್ದಾರೆ.

ಇಸ್ಲಾಮಿಕ್ ಸ್ಟೇಟ್‍ಗೆ ಸೇರಿದ ಇಸ್ಲಾಮಿಕ್‍ಸ್ಟೇಟ್ ಇನ್ ದಿನ ಗ್ರೇಟರ್ ಸಹರ (ಐಎಸ್‍ಜಿಎಸ್) ಉಗ್ರ ಸಂಘಟನೆ ಮಲೈನ್ ದೇಶದ ಟಿಸಿಟ್ ಸೇನಾ ಘಟಕದ ಮೇಲೆ ಡ್ರೋಣ್, ಸ್ಫೋಟಗಳು, ಕಾರ್ ಬಾಂಬ್‍ಗಳು ಮತ್ತು ಪಿರಂಗಿಗಳನ್ನು ಬಳಸಿ ದಾಳಿ ಮಾಡಿದೆ. ಸುದೀರ್ಘವಾಗಿ ನಡೆದ ಕಾಳಗದಲ್ಲಿ 37 ಯೋಧರು ಬಲಿಯಾಗಿದ್ದಾರೆ ಎಂದು ಸೇನೆ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಿದೆ.

ಈ ಮೊದಲು ಬಿಡುಗಡೆ ಮಾಡಲಾದ ಹೇಳಿಕೆಯಲ್ಲಿ 17 ಮಂದಿ ಯೋಧರು ಸಾವನ್ನಪ್ಪಿದ್ದು, 9 ಮಂದಿ ಕಣ್ಮರೆಯಾಗಿದ್ದಾರೆ ಎಂದು ತಿಳಿಸಲಾಗಿತ್ತು.

ಹಿಂಸಾಚಾರವನ್ನು ನಿಯಂತ್ರಿಸಲು ವಿಫಲವಾದ ಹತಾಶೆಯಿಂದ 2020ರಲ್ಲಿ ಪ್ರಜಾಪ್ರಭುತ್ವ ಸರ್ಕಾರವನ್ನು ಪತನಗೊಳಿಸಿ, ಮಿಲಿಟರಿ ಆಡಳಿತವನ್ನು ಕೈಗೆ ತೆಗೆದುಕೊಂಡಿದೆ. ಆದರೂ ದಾಳಿಗಳು ಸಾಮಾನ್ಯವಾಗಿವೆ. ಕಳೆದ ಜುಲೈನಲ್ಲಿ ನಡೆದ ದಾಳಿಯ ಹೊಣೆಯಲ್ಲಿ ಆಲ್-ಖೈದಾ ಸಂಘಟನೆ ಹೊತ್ತುಕೊಂಡಿತ್ತು.

Articles You Might Like

Share This Article