ಜಕಾರ್ತಾ, ಜು.3-ಇಂಡೋನೇಷ್ಯಾದ ರೆಸಾರ್ಟ್ ದ್ವೀಪವಾದ ಬಾಲಿ ಬಳಿ 65 ಜನರನ್ನು ಹೊತ್ತೊಯ್ಯುತ್ತಿದ್ದ ದೋಣಿ ಕಳೆದ ರಾತ್ರಿ ಮುಳುಗಿದೆ.ತಡರಾತ್ರಿ ಪೂರ್ವ ಜಾವಾದ ಕೇತಪಾಂಗ್ ಬಂದರಿನಿಂದ ಹೊರಟ ಕೆಎಂಪಿ ತುನು ಪ್ರತಮ ಜಯ ಹೆಸರಿನ ದೋಣಿ ಸುಮಾರು ಅರ್ಧ ಗಂಟೆಯ ನಂತರ ಮುಳುಗಿದೆ ಎಂದು ರಾಷ್ಟ್ರೀಯ ಶೋಧ ಮತ್ತು ರಕ್ಷಣಾ ಸಂಸ್ಥೆ ತಿಳಿಸಿದೆ.
ದೋಣಿಯಲ್ಲಿ 53 ಪ್ರಯಾಣಿಕರು, 12 ಸಿಬ್ಬಂದಿ ಮತ್ತು 14 ಟ್ರಕ್‌ಗಳು ಸೇರಿದಂತೆ 22 ವಾಹನಗಳು ಇದ್ದವು ಎಂದು ವರದಿಯಾಗಿದೆ.ಇದು 50 ಕಿಲೋಮೀಟರ್ ಪ್ರಯಾಣದ ಬಾಲಿಯ ಗಿಲಿಮನುಕ್ ಬಂದರಿಗೆ ಹೋಗುತ್ತಿತ್ತು ಎಂದು ಅಧಕಾರಿಗಳು ತಿಳಿಸಿದ್ದಾರೆ.
ರಾತ್ರಿಯಿಡೀ ರಕ್ಷಣಾ ತಂಡವು ಪ್ರಕ್ಷುಬ್ಧ ಸಮುದ್ರದಲ್ಲಿ ಕಾಣೆಯಾದ ಜನರನ್ನು ಹುಡುಕುತ್ತಿದೆ. ಕೆಲವರು ಈಜಿಕೊಂಡು ದಡ ಸೇರಿದ್ದು ಸುಮಾರು 43 ಪ್ರಯಾಣಿಕರು ಕಾಣೆಯಾಗಿದ್ದಾರೆ.
- ಮದುವೆಯಾಗದಿದ್ದಕ್ಕೆ ಮನನೊಂದು ಯುವಕ ಆತ್ಮಹತ್ಯೆ
- ಉದ್ಯಮಿಯನ್ನು ಕಟ್ಟಿ ಹಾಕಿ ಚಿನ್ನ,ಹಣ ಲೂಟಿ
- ಸಣ್ಣ ವ್ಯಾಪಾರಿಗಳಿಗೆ ಜಿಎಸ್ಟಿ ನೋಟಿಸ್ ಗೊಂದಲಕ್ಕೆ ಕೇಂದ್ರ ಸರ್ಕಾರವೇ ಹೊಣೆ : ಸಿಎಂ ಸ್ಪಷ್ಟನೆ
- ಉದ್ಧಟತನ ತೋರುವ ಸಚಿವರನ್ನು ಸಂಪುಟದಿಂದ ಕೈಬಿಡುವಂತೆ ಡಿಕೆಶಿಗೆ ‘ಕೈ’ಕಮಾಂಡ್ ಸೂಚನೆ
- ಒಬ್ಬ ಮಹಿಳೆಯೊಂದಿಗೆ ಇಬ್ಬರು ಪುರುಷರ ಮದುವೆ : ಹಿಮಾಚಲದಲ್ಲಿ ಮರುಜೀವ ಪಡೆದ ಬಹುಪತಿತ್ವ