ಪುರಿ,(ಒಡಿಶಾ)ಜ.23- ಪುರಾತನ ಐತಿಹಾಸಿಕ ಪುರಿ ಜಗನ್ನಾಥ ದೇವಾಲಯದಲ್ಲಿ ಇಂದು ಪಾಕಿಸ್ತಾನದಿಂದ ಬಂದ 45 ಹಿಂದೂ ಭಕ್ತರು ದೇವರ ದರ್ಶನ ಪಡೆದರು.
ಪಾಕಿಸ್ತಾನದ ಕರಾಚಿಯಿಂದ ಮಹಿಳೆಯರು, ಮಕ್ಕಳು ಮತ್ತು ವೃದ್ಧರು ಸೇರಿದಂತೆ ಸುಮಾರು 45 ಜನರ ತಂಡ ದೇವರ ದರ್ಶನ ಪಡೆಯಲು ಭಾರತಕ್ಕೆ ಬಂದು ಪುರಿಯ ಪ್ರಸಿದ್ಧ ಜಗನ್ನಾಥ ದೇವಾಲಯಕ್ಕೆ ಭೇಟಿ ನೀಡುವ ಅವಕಾಶವನ್ನು ಮತ್ತು ದೇವರ ದರ್ಶನ ಪಡೆದ ಕ್ಷಣವನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ ಎಂದು ಭಾವುಕರಾದರು.
ದೇವರ ದರ್ಶನವು ನಮಗೆ ದೈವಿಕ ಅನುಭೂತಿಯನ್ನು ನೀಡಿತು. ಅನುಭವ ವರ್ಣನಾತೀತವಾಗಿತ್ತು. ಜಗನ್ನಾಥನ ರಥಯಾತ್ರೆಯು 2009 ರಿಂದ ಪ್ರತಿ ವರ್ಷ ಕರಾಚಿಯಲ್ಲಿ ನಡೆಯುತ್ತಿದೆ. 2022 ರಲ್ಲಿ ಕರಾಚಿಯಲ್ಲಿ 14 ನೇ ರಥಯಾತ್ರೆಯನ್ನು ನಡೆಸಲಾಯಿತು,
ಪರಾಕ್ರಮ್ ದಿವಸ್ : ನೇತಾಜಿ ಸ್ಮರಿಸಿದ ಪ್ರಧಾನಿ ಮೋದಿ
ಭಾರತಕ್ಕೆ ಬರಲು ಸುಮಾರು 14 ವರ್ಷಗಳ ಕಾಲ ಕಾದು ಕೊನೆಗೂ ದೇವಾನುದೇವತೆಗಳ ದರ್ಶನ ಪಡೆದೆವು. ಈ ಅವಕಾಶಕ್ಕಾಗಿ ನಾವು ಭಾರತ ಮತ್ತು ಪಾಕಿಸ್ತಾನ ಸರ್ಕಾರಗಳಿಗೆ ಧನ್ಯವಾದಗಳನ್ನು ಅರ್ಪಿಸುತ್ತೇವೆ ಎಂದು ಭಕ್ತರೊಬ್ಬರು ಹೇಳಿದರು.
ಭಾರತದಲ್ಲಿ ನಡೆಯುವ ಪುರಿ ಜಗನ್ನಾಥನ ರಥಯಾತ್ರೆ ವೈಭವದಿಂದ ಕುಡಿರುತ್ತದೆ ದೇಶ ವಿದೇಶದಿಂದ ಲಕ್ಷಾಂತರ ಭಕ್ತರು ಪಾಲ್ಗೊಳ್ಳುತ್ತಾರೆ.ಈಗಾಗಲೆ ಮೂರು ರಥಗಳ ನಿರ್ಮಾಣಕ್ಕಾಗಿ ಶನಿವಾರ ಒಡಿಶಾದ ನಯಾಗರ್ ಜಿಲ್ಲಾಯ ದಸ್ಪಲ್ಲಾದಿಂದ 104 ಮರದ ದಿಮ್ಮಿಗಳನ್ನು ಕಳುಹಿಸಲಾಗಿದೆ.
ಕಾರು-ಟ್ರಕ್ ನಡುವೆ ಮುಖಾಮುಖಿ ಡಿಕ್ಕಿ, ಐವರ ಸಾವು
ವಿಶೇಷ ಧಾರ್ಮಿಕ ವಿಧಿ ವಿಧಾನಗಳ ನಂತರ ಮರದ ದಿಮ್ಮಿಗಳನ್ನು ಮಹಾವೀರ ದೇವಸ್ಥಾನಕ್ಕೆ ಕಳುಹಿಸಲಾಯಿತು. ರಾಮ ನವಮಿಯಂದು ಮರವನ್ನು ಕತ್ತರಿಸಲಾಗುತ್ತದೆ ಮತ್ತು ಅಕ್ಷಯ ತೃತೀಯದಂದು ರಥಗಳ ನಿರ್ಮಾಣವನ್ನು ಪ್ರಾರಂಭಿಸಲಾಗುತ್ತದೆ.
45 Hindu, Devotees, Pakistan, Visit, Lord Jagannath, Temple Odisha,