4 ಕೋಟಿ ರೂ. ಮೌಲ್ಯದ ತಿಮಿಂಗಲ ವಾಂತಿ, ಮೂವರು ಅರೆಸ್ಟ್

ಬೆಂಗಳೂರು,ಡಿ.25- ಮಾರುಕಟ್ಟೆಯಲ್ಲಿ ವಜ್ರವೈಡೂರ್ಯಕ್ಕಿಂತಲೂ ದುಬಾರಿಯಾಗಿರುವ 4ಕೆಜಿ 100 ಗ್ರಾಂ ತೂಕದ 4 ಕೋಟಿ ರೂ.ಗಳಿಗೂ ಅಧಿಕ ಮೌಲ್ಯದ ಅಂಬರ್‍ಗ್ರೀಸ್(ತಿಮಿಂಗಲ ವಾಂತಿ)ಅನ್ನು ಆಗ್ನೇಯ ವಿಭಾಗದ ಪೊಲೀಸರು ವಶಪಡಿಸಿಕೊಂಡು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ತಮಿಳುನಾಡು ಮೂಲದ ಪನ್ನೀರ್ ಸೆಲ್ವಂ, ಆನಂದಶೇಖರ್ ಹಾಗೂ ಕೆ.ಮಂಜು ಬಂಧಿತ ಆರೋಪಿಗಳು. ಡಿ.22ರಂದು ಬೆಳಗ್ಗೆ 9 ಗಂಟೆ ಸಂದರ್ಭದಲ್ಲಿ ಮೂವರು ಆರೋಪಿಗಳು ನಗರದ ಸೋಮೇಶ್ವರ ಕಾಲೋನಿಯ ಲೇಕ್ ರಸ್ತೆಯಲ್ಲಿ ಸಮುದ್ರ ವನ್ಯ ಜೀವಿಗೆ ಸೇರಿದ ವಸ್ತುವನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದಾರೆ ಎಂಬ ಮಾಹಿತಿ ಆಧರಿಸಿ ಮೈಕೋಲೇಔಟ್ ಪೊಲೀಸರು ಕಾರ್ಯಾಚರಣೆ ನಡೆಸಿದರು.

ಅವರಿಂದ 4ಕೆಜಿ 100ಗ್ರಾಂ ತೂಕದ ಅಂಬರ್‍ಗ್ರೀಸ್ ಮತ್ತು ಅದನ್ನು ಸಾಗಾಣಿಕೆ ಮಾಡಲು ಬಳಸಿದ್ದ ಸ್ವಿಪ್ಟ್ ಕಾರನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ತಮಿಳುನಾಡಿನಿಂದ ಅಂಬರ್‍ಗ್ರೀಸ್ ಅನ್ನು ತಂದು ಬೆಂಗಳೂರಿನಲ್ಲಿ ಮಾರಾಟ ಮಾಡಲು ಯತ್ನಿಸಿದ್ದಾಗಿ ತಿಳಿಸಿದ್ದಾರೆ.

ಪ್ರಕರಣ ದಾಖಲಿಸಿರುವ ಮೈಕೋಲೇಔಟ್ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಸಮುದ್ರದಲ್ಲಿ ದೊರೆಯುವ ಈ ಅಂಬರ್‍ಗ್ರೀಸನ್ನು ಸುಗಂಧ ದ್ರವ್ಯ ತಯಾರಿಕೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಬಳಕೆ ಮಾಡಲಾಗುತ್ತಿದೆ.

ಇದು ನಿಷೇತ ವಸ್ತುವಾಗಿದ್ದು, ಅಕ್ರಮವಾಗಿ ತಂದು ಮಾರಾಟ ಮಾಡಲಾಗುತ್ತಿದೆ. ಸರಿಸುಮಾರು ಪ್ರತಿ ಕೆಜಿಗೆ ಒಂದು ಕೋಟಿಗೂ ಅಕ ಮೌಲ್ಯ ಅಂಬರ್‍ಗ್ರೀಸ್‍ಗಿದೆ.

Sri Raghav

Admin