5 ಶತಮಾನದ ಹಿಂದಿನ ಸೋಮಲಿಂಗೇಶ್ವರ ದೇವಾಲಯದ ಅವಶೇಷಗಳು ಪತ್ತೆ..!

Soma ಚಿಕ್ಕನಾಯಕನಹಳ್ಳಿ, ಸೆ.20-ಐದು ಶತಮಾನದ ಹಿಂದಿನ ಸೋಮಲಿಂಗೇಶ್ವರ ದೇವಾಲಯದ ಅವಶೇಷಗಳು ಪತ್ತೆಯಾಗಿದ್ದು ಸಾರ್ವಜನಿಕರಲ್ಲಿ ಅಚ್ಚರಿ ಮೂಡಿಸಿದೆ. ತಾಲ್ಲೂಕಿನ ಹಂದನಕೆರೆ ಹೋಬಳಿ ಬರಗೂರು ವ್ಯಾಪ್ತಿಯ ಓಟಿಕೆರೆ ಗ್ರಾಮದ ಓಟಿಕೆರೆಮ್ಮ ದೇವಾಲಯದ ಎದುರು ಸುಮಾರು ಇನ್ನೂರು ಮೀಟರ್ ಅಂತರದ ಪೊದೆಯೊಂದರಲ್ಲಿ ದೇವಾಲಯ ಪತ್ತೆಯಾಗಿದೆ.
ಈ ದೇವಾಲಯವು ಕೆರೆಯ ಹಿಂಬಂದಿಯಲ್ಲಿ ಇದ್ದ ಕಾರಣ ಸಂಪೂರ್ಣವಾಗಿ ಮುಳ್ಳಿನ ಕುರುಚಲು ಪೊದೆ, ಬೆಳೆದಿದ್ದು ಪ್ರಾಣಿಗಳ ಆವಾಸ ಸ್ಥಳವಾಯಿತು. ಈ ಸ್ಥಳದಲ್ಲಿ ಎರಡು ಶಿವಲಿಂಗಗಳು ಏಳು ಮಂಟಪ ಎರಡು ಶಿಲಾಶಾಸನ ಪತ್ತೆಯಾಗಿದೆ.ಸುಮಾರು 3 ಅಡಿ ಎತ್ತರದ ಶಿವಲಿಂಗ ಮತ್ತೊಂದು ಶಿವಲಿಂಗದ ನೆತ್ತಿಯ ಮೇಲೆ ಬೃಹತ್ ಮರವೊಂದು ಬೆಳೆದು ಅದರ ಬೇರಿನಿಂದ ಶಿವಲಿಂಗದ ದಿಕ್ಕು ಕೂಡ ಬದಲಾಗಿದೆ. ಜೊತೆಗೆ ಕಲ್ಲುಕಂಬಗಳು, ಬಾಗಿಲುಗಳು ಬೃಹತ್ತಾದ ಹಜಾರಗಳು, ಹೊಂದಿದ್ದು ಒಂದು ಶಿಲಾ ಶಾಸನ ದೇವಾಲಯದ ಒಳಾಂಗಣದಲ್ಲಿ ಸುರಕ್ಷಿತವಾಗಿದ್ದು ಹೊರಭಾಗದಲ್ಲೊಂದು ಶಿಲಾ ಶಾಸನವಿದ್ದು, ಹಳೆಗನ್ನಡದ ಲಿಪಿಯ.ಬರಹಗಳು ಇದೆ. ಇವುಗಳ ಸುರಕ್ಷತೆಯ ಅನಿವಾರ್ಯವಾಗಿದೆ ಎಂಬುದು ಗ್ರಾಮಸ್ಥರ ಅಭಿಪ್ರಾಯ.

ಭೂಮಿಯ ಮಾಲೀಕ ರಾಮಚಂದ್ರಯ್ಯ ಮಾತನಾಡಿ, ಶತಮಾನಗಳಿಂದಲೂ ಇದ್ದ ಈ ದೇವಾಲಯ ಕಾಲಕ್ರಮೇಣ ನಶಿಸಿ ಹೋಗಿದ್ದು. ಈ ದೇವಾಲಯಕ್ಕೆ ಸಂಬಂಧಪಟ್ಟ ಭಕ್ತರಿಗೆ ತೊಂದರೆಯಾದ ಪರಿಣಾಮ ಕಳೆದ ಹತ್ತು ವರ್ಷಗಳಿಂದ ದೇವಾಲಯವನ್ನು ಪತ್ತೆಹಚ್ಚಲು ಪ್ರಯತ್ನಿಸುತ್ತಿದ್ದರು, ಅಂದಾಜಿನ ಮೇಲೆ ಹಿರಿಯರು ನಡೆಸಿಕೊಂಡು ಬಂದಂತೆ ಆ ಭಾಗದಲ್ಲಿದ್ದ ಮಾಸ್ತಮ್ಮ ವಿಗ್ರಹಕ್ಕೆ ಪೂಜೆ ಸಲ್ಲಿಸುತ್ತಿದ್ದರು. ದೇವರ ಕಾಟದಿಂದಾಗಿ ಪೊದೆಯನ್ನು ತೆರವುಗೊಳಿಸಲು ಮುಂದಾಗಿ ದೇವಾಲಯದ ಏಳು ಮಂಟಪಗಳಿದ್ದು ಎರಡು ಶಿಲಾಶಾಸನ ಎರಡು ಲಿಂಗಗಳು ಪತ್ತೆಯಾಗಿದ್ದು ಇದನ್ನು ಪುರಾತತ್ವ ಇಲಾಖೆ ಈ ದೇವಾಲಯದ ಜೀರ್ಣೋದ್ದಾರ ಮಾಡಬೇಕಿದೆ ಎಂದರು.

Soma-2

ಎಳ್ಳೇನಹಳ್ಳಿ ಸಿದ್ದರಾಮಯ್ಯ ಮಾತನಾಡಿ, ಈ ದೇವಾಲಯ ಸುಮಾರು ಹಲವು ಶತಮಾನಕ್ಕೂ ಹಳೆಯದಾಗಿದ್ದು, ಕಾಲ ಕ್ರಮೇಣ ದೇವಾಲಯದ ಅವಶೇಷಗಳು ಮಣ್ಣಲ್ಲಿ ಹೊತ್ತಿಹೋಗಿದ್ದ ಪರಿಣಾಮ ಬೃಹತ್ತಾದ ಪೊದೆ ಬೆಳೆದು ಪ್ರಾಣಿಗಳ ವಾಸಸ್ಥಾಳವಾಗಿತ್ತು, ಇದು ಸೋಮಲಿಂಗೇಶ್ವರ ದೇವಾಲಯ ಎಂದು ಮುತ್ತಜ್ಜ ಹೇಳಿದ್ದ ನೆನಪು ಇನ್ನು ಜೀವಂತವಾಗಿದ್ದು ಇಂದು ಸತ್ಯವಾಗಿದೆ ಎಂದರು. ವಯೋವೃದ್ದೆ ಕಮಲಮ್ಮ ಹಾಗೂ ಲಿಂಗರಾಜು ಮಾತನಾಡಿ, ಈ ದೇವಾಲಯದ ಈ ಐತಿಹ್ಯ ಇರುವ ಬಗ್ಗೆ ಸಾಕಷ್ಟು ದಾಖಲೆಗಳು ಇದೆ. ಐದು ಲಿಂಗಗಳು ಇದೆ ಎಂದು ಜ್ಯೋತಿಷ್ಯಗಳ ಹೇಳಿದ ನಂತರವೇ ಎರಡು ಲಿಂಗಗಳು ಪತ್ತೆಯಾಗಿದ್ದು ಈ ಹಿಂದೆ ಹಲವು ಬರಿ ನಿಧಿಗಳ್ಳರು ಈ ದೇವಾಲಯದ ಪ್ರಕಾರವನ್ನು ಭಗ್ನಗೊಳಿಸಲು ಯತ್ನಿಸಲು ಮುಂದಾದ ಸಂದರ್ಭದಲ್ಲಿ ಅವಕಾಶ ಮಾಡಿಕೊಡದೆ ಶಕ್ತಿಯೊಂದು ತಡೆಯೊಡ್ಡಿದೆ ಎಂಬುದರ ಬಗ್ಗೆ ಗಮನ ಸೆಳೆದರು ಈ ಬಗ್ಗೆ ಸರಕಾರ ಜÁಗೃತಿ ವಹಿಸಿ ಈ ದೇವಾಲಯದ ಅಭಿವೃದ್ದಿ ಹಾಗೂ ಜೀಣೋದ್ದಾರಗೊಳಿಸಬೇಕೆಂದು ಗ್ರಾಮಸ್ಥರ ಒಕ್ಕೋರಲ ಅಭಿಪ್ರಾಯವಾಗಿದೆ.

ಈ ಅಚ್ಚರಿ ಸಂಗತಿಯನ್ನು ತಿಳಿದ ಸುತ್ತಮುತ್ತಲಿನ ಗ್ರಾಮಸ್ಥರು ತಂಡೋಪತಂಡವಾಗಿ ಗ್ರಾಮದತ್ತ ಧಾವಿಸಿ ದೇವಾಲಯದ ಒಳ ಹಾಗೂ ಹೊರ ಪ್ರಾಂಗಣ, ಹಳೆಗನ್ನಡದ ಲಿಪಿ ಇರುವ ಶಿಲಾ ಶಾಸನಗಳು ಲಿಂಗಗಳು, ನಾಗರಕಲ್ಲುಗಳು, ಬೃಹತ್ತಾಗಿರುವ ಹುತ್ತಕ್ಕೆ ಭಕ್ತಿ ಸಮರ್ಪಿಸಿದರು.

► Follow us on –  Facebook / Twitter  / Google+

Sri Raghav

Admin