ನೇಪಾಳ, ಅರುಣಾಚಲಪ್ರದೇಶದಲ್ಲಿ ಮತ್ತೆ ಕಂಪಿಸಿದ ಭೂಮಿ

Social Share

ಇಟ್ನಾಗರ್,ನ.10- ಅರುಣಾಚಲ ಪ್ರದೇಶದ ಪಶ್ಚಿಮಸೈಂಗ್ ಜಿಲ್ಲೆಯಲ್ಲಿ ಇಂದು ಬೆಳಗ್ಗೆ ಭೂಕಂಪನದ ಅನುಭವವಾಗಿದೆ. ರಾಷ್ಟ್ರೀಯ ಭೂಕಂಪನ ಶಾಸ್ತ್ರೀಯ ಕೇಂದ್ರದ ಮಾಪನದಲ್ಲಿ 5.7 ಮ್ಯಾಗ್ನಟ್ಯೂಡ್ ದಾಖಲಾಗಿದೆ.

ಇಂದು ಬೆಳಗ್ಗೆ 10.31ರ ಸುಮಾರಿನಲ್ಲಿ ಕಂಪನ ದಾಖಲಾಗಿದೆ ಎಂದು ಜಿಲ್ಲಾಧಿಕಾರಿ ಇಮೋದೋರ್ಜಿ ತಿಳಿಸಿದ್ದಾರೆ.
ಸದ್ಯಕ್ಕೆ ಯಾವುದೇ ಪ್ರಾಣಹಾನಿಯ ವರದಿಯಾಗಿಲ್ಲ. ಕಂಪನ ಕೇಂದ್ರ ಬಿಂಧುವಿನ 10 ಕಿ.ಮೀ. ಸುತ್ತಳತೆಯಲ್ಲಿ ಭೂ ಹದುರಿದೆ. ಇದೇ ರೀತಿ ರಾಜ್ಯದ ಇತರೆ ಜಿಲ್ಲೆಗಳಲ್ಲೂ ಕಂಪನವಾಗಿರುವ ಅನುಭವವಾಗಿದೆ ಎಂದು ಸಾರ್ವಜನಿಕ ಮಾಹಿತಿ ಅಧಿಕಾರಿ ತಿಳಿಸಿದ್ದಾರೆ.

ನಾಳೆ ಬೆಂಗಳೂರಲ್ಲಿ ಮೋದಿ ಮೇನಿಯಾ, ಇಲ್ಲಿದೆ ಕಾರ್ಯಕ್ರಮಗಳ ಕಂಪ್ಲೀಟ್ ಡೀಟೇಲ್ಸ್

ನಿನ್ನೆ ನೇಪಾಳದಲ್ಲಿ ಭೂಕಂಪನವಾಗಿ 6ಮಂದಿ ಸಾವನ್ನಪ್ಪಿದ್ದರು. ಅದರ ಪರಿಣಾಮ ಭಾರತದಲ್ಲಿ ದೆಹಲಿ, ನೇಪಾಳ ಹಾಗೂ ನೆರೆ ಹೊರೆಯ ರಾಜ್ಯಗಳಲ್ಲಿ ಕಾಣಿಸಿಕೊಂಡಿತ್ತು. ನೇಪಾಳದಲ್ಲಿ ಮತ್ತೆ ಭೂಕಂಪನ: ಇಂದು ಬೆಳಗ್ಗೆ ಕೂಡ ನೇಪಾಳದಲ್ಲಿ ಮತ್ತೊಮ್ಮೆ ಭೂಕಂಪನವಾಗಿದೆ.

ಟಿಕೆಟ್ ಹಂಚಿಕೆ ವಿಚಾರದಲ್ಲಿ ಗೊಂದಲ, ಕಳವಳಕ್ಕೀಡಾದ ಮೂಲ ಕಾಂಗ್ರೆಸ್ಸಿಗರು

ಹಿಮಾಲಯ ತಪ್ಪಲಿನ ರಾಜ್ಯದಲ್ಲಿ ಪದೇ ಪದೇ ಭೂ ಕಂಪಿಸುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
ಇಂದು ಮುಂಜಾನೆ 5.13ರ ಸುಮಾರಿಗೆ ರಾಜಧಾನಿ ಕಟ್ಮಂಡುನಿಂದ 750 ಕಿ.ಮೀ. ದೂರದ ಬಜೂರಾ ಜಿಲ್ಲೆಯ ಖಾಪ್ಟಾಡ್ ಛಡ್ಡೇದ ಗ್ರಾಮೀಣ ಸ್ಥಳೀಯ ಸಂಸ್ಥೆ ಬಳಿ ಭೂ ಕಂಪನವಾಗಿದೆ.

ಇಲ್ಲಿ 2015ರಲ್ಲಿ ಭೂಕಂಪವಾಗಿದ್ದು, ಬಳಿಕ ಮತ್ತೆ ಯಾವುದೇ ಆತಂಕಕಾರಿ ಘಟನೆಗಳು ನಡೆದಿರಲಿಲ್ಲ.

Articles You Might Like

Share This Article