ಸಚಿವರ ಕಾರಿನ ಮೇಲೆ ಪಾದರಕ್ಷೆ ಎಸೆದ ಪ್ರಕರಣ : ಕ್ಷಮೆಯಾಚಿಸಿದ ಬಿಜೆಪಿ

Social Share

ಚೆನ್ನೈ,ಆ.14-ತಮಿಳುನಾಡಿನ ಸಚಿವ ಪಳನಿವೇಲು ತಂಗರಾಜನ್ ಅವರ ಕಾರಿನ ಮೇಲೆ ತಮ್ಮ ಪಕ್ಷದ ಕಾರ್ಯಕರ್ತರು ಪಾದರಕ್ಷೆ ತೂರಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಿಜೆಪಿ ಕ್ಷಮೆಯಾಚಿಸಿದೆ.

ನಿನ್ನೆ ಮಧುರೈನ ವಿಮಾನ ನಿಲ್ದಾಣದಲ್ಲಿ ಹಲವಾರು ಬಿಜೆಪಿ ಕಾರ್ಯಕರ್ತರು ಸಚಿವರ ಕಾರಿನ ಮೇಲೆ ಚಪ್ಪಲಿ ತೂರಿದ್ದರು. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಐವರನ್ನು ಬಂಸಲಾಗಿದೆ.

ಇಂದು ಬೆಳಗ್ಗೆ ಮಧುರೈನ ಬಿಜೆಪಿ ಜಿಲ್ಲಾಧ್ಯಕ್ಷ ಶರವಣನ್ ಅವರು ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದು, ನಿನ್ನೆಯ ಘಟನೆ ನನ್ನನ್ನು ಘಾಸಿಗೊಳಿಸಿದೆ. ನಿನ್ನೆ ರಾತ್ರಿಯೇ ನಾನು ಹಣಕಾಸು ಸಚಿವರನ್ನು ಭೇಟಿ ಮಾಡಿ ಘಟನೆಯ ಬಗ್ಗೆ ಕ್ಷಮೆಯಾಚಿಸಿದ್ದೇನೆ. ನಿಯಂತ್ರಣ ಮೀರಿದ ಬಿಜೆಪಿ ಕಾರ್ಯಕರ್ತರ ವರ್ತನೆ ಅಕ್ಷಮ್ಯ ಮತ್ತು ದುಃಖಕರ ಎಂದು ವಿಷಾದಿಸಿದರು.

ನಂತರದ ಬೆಳವಣಿಗೆಯಲ್ಲಿ ರಾಜ್ಯ ಬಿಜೆಪಿ ಮಧುರೈನ ಜಿಲ್ಲಾಧ್ಯಕ್ಷ ಶರವಣನ್ ಅವರನ್ನು ಉಚ್ಛಾಟಿಸುವುದಾಗಿ ಹೇಳಿಕೆ ನೀಡಿದೆ. ಪಕ್ಷದ ಶಿಸ್ತು ಉಲ್ಲಂಘಿಸಿ ಕಳಂಕ ತಂದಿದ್ದಕ್ಕಾಗಿ ಅವರ ವಿರುದ್ಧ ಶಿಸ್ತುಕ್ರಮ ಜರುಗಿಸುವುದಾಗಿ ತಿಳಿಸಿದೆ.

Articles You Might Like

Share This Article