ಜಾನುವಾರುಗಳ ಚರ್ಮ ರೋಗ ನಿವಾರಣೆಗೆ 5 ಕೋಟಿ ರೂ. ಬಿಡುಗಡೆ

Social Share

ಬೆಂಗಳೂರು,ಅ.14- ರಾಜ್ಯದಲ್ಲಿ ಜಾನುವಾರುಗಳಿಗೆ ಬಾದಿಸುವ ಚರ್ಮಗಂಟು ರೋಗಕ್ಕೆ ಹಾಕಿಸುವ ಲಸಿಕೆ ಖರೀದಿಗೆ 5ಕೋಟಿ ಹಣವನ್ನು ಬಿಡುಗಡೆ ಮಾಡಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಕಾರಿಗಳಿಗೆ ಸೂಚಿಸಿದ್ದಾರೆ.

ಮುಖ್ಯಮಂತ್ರಿಗಳ ಗೃಹ ಕಛೇರಿ ಕೃಷ್ಣದಲ್ಲಿ ನಡೆದ ಸಭೆಯಲ್ಲಿ ರಾಜ್ಯಾದ್ಯಂತ ಜಾನುವಾರುಗಳಿಗೆ ಚರ್ಮಗಂಟು ರೋಗ ಹರಡುತ್ತಿರುವ ಕುರಿತು ಪಶು ಸಂಗೊಪನಾ ಸಚಿವ ಪ್ರಭು ಚವ್ಹಾಣ್ ಮತ್ತು ಇಲಾಖೆಯ ಅಕಾರಿಗಳ ಸಭೆ ನಡೆಸಿದರು.

ರಾಜ್ಯದಾದ್ಯಂತ ಜಾನುವಾರುಗಳಿಗೆ ಚರ್ಮಗಂಟು ರೋಗ ತೀವ್ರವಾಗಿ ಬಾಸುತ್ತಿದೆ. ಎಲ್ಲೆಲ್ಲಿ ರೋಗ ಹೆಚ್ಚು ಕಾಣಿಸಿಕೊಂಡಿದೆ ಅಂತಹ ಕಡೆಗಳಲ್ಲಿ ಜಾನುವಾರುಗಳಿಗೆ ಲಸಿಕೆ ಹಾಕಿಸಲು ಸೂಚನೆ ನೀಡಿದರು.
ತಕ್ಷಣ 15 ಲಕ್ಷ ಲಸಿಕೆಗಳ ಖರೀದಿಗೆ ಸೂಚನೆ ನೀಡಿದ ಅವರು 5 ಕೋಟಿ ರೂ. ಹಾಗೂ ಇದರ ಜತೆಗೆ ಇತರೆ ಔಷದಿ ಖರೀದಿಗೆ 8 ಕೋಟಿ ರೂ. ಬಿಡುಗಡೆಗೆ ಹಣಕಾಸು ಇಲಾಖೆಗೆ ಸೂಚಿಸಿದ ಅವರು, ಸೋಮವಾರದೊಳಗೆ ಎಲ್ಲ ಜಿಲ್ಲೆಗಳಿಗೂ ಲಸಿಕೆ ತಲುಪಿಸುವಂತೆ ಪಶು ಸಂಗೋಪನಾ ಇಲಾಖೆ ಅಕಾರಿಗಳಿಗೆ ತಿಳಿಸಿದರು.

ಅತಿ ಹೆಚ್ಚು ರೋಗಕ್ಕೆ ತುತ್ತಾಗಿರುವ ಹಾವೇರಿ, ಗದಗ, ಬಳ್ಳಾರಿ, ವಿಜಯನಗರ ಬೆಳಗಾವಿ ಜಿಲ್ಲೆಗಳ ಜಾನುವಾರುಗಳು ಸೇರಿದಂತೆ ಎಲ್ಲ ಜಿಲ್ಲೆಗಳಲ್ಲಿ ಯುದ್ಧೋಪಾದಿಯಲ್ಲಿ ಲಸಿಕೆ ಕಾರ್ಯ ಕೈಗೊಳ್ಳಲು ಆದೇಶಿಸಿದರು.

ಅಲ್ಲದೆ, ಈ ಕಾರ್ಯಕ್ಕೆ ಎದುರಾಗುವ ಸಿಬ್ಬಂದಿ ಕೊರತೆ ನೀಗಿಸಲು ಡಿಪ್ಲೋಮ ವಿದ್ಯಾರ್ಥಿಗಳನ್ನು ಬಳಸಿಕೊಳ್ಳಲು ಸಿಎಂ ಸೂಚನೆ ನೀಡಿದರು. ಮೃತಪಟ್ಟ ಜನಾವಾರುಗಳಿಗೆ ತಕ್ಷಣ ಡಿಬಿಟಿ ಮೂಲಕ ರೈತರ ಖಾತೆಗಳಿಗೆ ಹಣ ವರ್ಗಾವಣೆ ಮಾಡಲು ಸೂಚಿಸಿದರು.

ರಾಜ್ಯದ 28 ಜಿಲ್ಲೆಗಳ 160 ತಾಲೂಕುಗಳ 4380 ಗ್ರಾಮಗಳಲ್ಲಿ ಈ ರೋಗ ಕಾಣಿಸಿಕೊಂಡಿವೆ. 45,645 ಜಾನುವಾರುಗಳು ರೋಗಕ್ಕೆ ತುತ್ತಾಗಿದ್ದು, 2070 ಜಾನುವಾರುಗಳು ಮರಣ ಹೊಂದಿವೆ. 6.57ಲಕ್ಷ ಜಾನುವಾರುಗಳಿಗೆ ಲಸಿಕೆ ಹಾಕಲಾಗಿದೆ. 50 ಲಕ್ಷ ಜಾನುವಾರುಗಳಿಗೆ ಲಸಿಕೆ ಹಾಕಬೇಕಾಗಿದೆ. ಭಾರತ ಸರ್ಕಾರದ ಮಾರ್ಗಸೂಚಿಯಂತೆ ರೋಗ ಕಾಣಿಸಿಕೊಂಡ 5ಕಿ.ಮೀ. ಸುತ್ತಳತೆಯಲ್ಲಿ ಆರೋಗ್ಯವಂತ ಜಾನುವಾರುಗಳಿಗೆ ಲಸಿಕೆ ಹಾಕಬೇಕು.

ರೋಗಪೀಡಿತ ಜಾನುವಾರುಗಳನ್ನು ಪ್ರತ್ಯೇಕಿಸಲು ಪ್ರತಿ ಗ್ರಾಮದಲ್ಲಿ ವ್ಯವಸ್ಥೆ ಮಾಡಲು ಸೂಚಿಸಿದ್ದು, ಮರಣ ಹೊಂದಿದ ಜಾನುವಾರುಗಳಿಗೆ 7 ಜಿಲ್ಲೆಗಳಿಗೆ 2 ಕೋಟಿ ರೂ. ನೀಡಲಾಗಿದೆ. 46.15ಲಕ್ಷ ರೂ. ಪರಿಹಾರ ವಿತರಿಸಲಾಗಿದೆ. ಬಾಕಿ ಪರಿಹಾರ ತ್ವರಿತವಾಗಿ ವಿತರಿಸಲು ಹಾಗೂ ಹೆಚ್ಚುವರಿಯಾಗಿ 5ಕೋಟಿ ಬಿಡುಗಡೆ ಗೆ ಸೂಚಿಸಿದರು.

ಲಸಿಕೆ ಪೂರೈಕೆ ಕುರಿತು ಭಾರತ ಸರ್ಕಾರ ಅನುಮೋದಿಸಿದ ಕಂಪೆನಿಗಳೊಂದಿಗೆ ಮಾತುಕತೆ ನಡೆಸಿ, ಲಸಿಕೆ ಒದಗಿಸಲು ಕ್ರಮ ಕೈಗೊಳ್ಳುವಂತೆ ಪಶುಸಂಗೋಪನೆ ಇಲಾಖೆ ಕಾರ್ಯದರ್ಶಿಗಳಿಗೆ ಸೂಚಿಸಿದರು.

ಚರ್ಮಗಂಟು ರೋಗ ತೀವ್ರವಾಗಿರುವ ಹಾವೇರಿ ಮತ್ತು ಕೋಲಾರ ಜಿಲ್ಲೆಗಳಲ್ಲಿ ರೋಗನಿಯಂತ್ರಣಕ್ಕೆ ಶೀಘ್ರಕ್ರಮ ಕೈಗೊಳ್ಳಬೇಕು. ಇತರ ಜಿಲ್ಲೆಗಳಿಗೆ ಹರಡದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಸೂಚಿಸಲಾಗಿದೆ.ಈ ಸಂದರ್ಭದಲ್ಲಿ ಪಶು ಸಂಗೋಪನಾ ಸಚಿವ ಪ್ರಭು ಚೌಹ್ವಾಣï, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ ಪ್ರಸಾದ್ ಮತ್ತಿತರ ಅಕಾರಿಗಳು ಹಾಜರಿದ್ದರು.

Articles You Might Like

Share This Article