Saturday, September 23, 2023
Homeಇದೀಗ ಬಂದ ಸುದ್ದಿಧಗಧಗಿಸಿದ ಗೋದಾಮು, 5 ಕೋಟಿ ಮೌಲ್ಯದ ಶೂ-ಚಪ್ಪಲಿ ಭಸ್ಮ

ಧಗಧಗಿಸಿದ ಗೋದಾಮು, 5 ಕೋಟಿ ಮೌಲ್ಯದ ಶೂ-ಚಪ್ಪಲಿ ಭಸ್ಮ

- Advertisement -

ಬೆಂಗಳೂರು,ಸೆ.15-ಅತಿ ವೇಗವಾಗಿ ಬಂದ ಕ್ಯಾಂಟರ್ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಅಪ್ಪಳಿಸಿದ ಪರಿಣಾಮ ಕಂಬ ಮುರಿದು ಬಿದ್ದು, ಶಾರ್ಟ್ ಸಕ್ರ್ಯೂಟ್ ಉಂಟಾಗಿ ಪಕ್ಕದಲ್ಲೇ ಇದ್ದ ಚಪ್ಪಲಿ- ಶೂ ಗೋದಾಮಿಗೆ ಬೆಂಕಿ ಹೊತ್ತಿಕೊಂಡು ಸುಮಾರು 5 ಕೋಟಿ ರೂ. ಮೌಲ್ಯದ ನಷ್ಟ ಉಂಟಾಗಿದೆ.

ಕೆಂಗೇರಿ ಪೊಲಿಸ್ ಠಾಣಾ ವ್ಯಾಪ್ತಿಯ ದೊಡ್ಡಬೆಲೆ ಸಮೀಪ ಬಿಎಂಟಿಸಿ ಡಿಪೋ ಪಕ್ಕ ಚಪ್ಪಲಿ-ಶೂ ಗೋದಾಮು ಇದೆ. ರಾತ್ರಿ 11 ಗಂಟೆ ಸುಮಾರಿನಲ್ಲಿ ಇದೇ ಮಾರ್ಗವಾಗಿ ಬಂದ ಕ್ಯಾಂಟರ್ ವಾಹನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ವಿದ್ಯುತ್ ಕಂಬ ಮುರಿದು ಬಿದ್ದಿದೆ. ಈ ವೇಳೆ ಶಾರ್ಟ್ ಸಕ್ರ್ಯೂಟ್ ಉಂಟಾಗಿ ಪಕ್ಕದಲ್ಲೇ ಇದ್ದ ಚಪ್ಪಲಿ- ಶೂ ಗೋದಾಮಿಗೆ ಬೆಂಕಿ ಹೊತ್ತಿಕೊಂಡಿದೆ.

- Advertisement -

ತಮಿಳುನಾಡಿಗೆ ಪ್ರತಿದಿನ 5000 ಕ್ಯೂಸೆಕ್ಸ್ ನೀರು ಹರಿಸಲು CWRC ಸೂಚನೆ, 18ರಂದು ಮಹತ್ವದ ಸಭೆ

ನೋಡನೋಡುತ್ತಿದ್ದಂತೆ ಗೋದಾಮಿನಲ್ಲಿ ಬೆಂಕಿಯ ತೀವ್ರತೆ ಹೆಚ್ಚಾಗಿದ್ದರಿಂದ ಗೋದಾಮಿನಲ್ಲಿ ಸಂಗ್ರಹಿಸಿ ಇಡಲಾಗಿದ್ದ ಕೊಟ್ಯಾಂತರ ರೂ. ಮೌಲ್ಯದ ಶೂ-ಚಪ್ಪಲಿಗಳು ಹೊತ್ತಿ ಉರಿದು ಬೆಂಕಿಯ ಕೆನ್ನಾಲಿಗೆ ಗೋದಾಮು ಪೂರ್ತಿ ಆವರಿಸಿಕೊಂಡಿದೆ.

ಸುದ್ದಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ಸಿಬ್ಬಂದಿ 10 ವಾಹನಗಳೊಂದಿಗೆ ಸ್ಥಳಕ್ಕಾಗಮಿಸಿ ಬೆಂಕಿಯನ್ನು ನಂದಿಸಲು ಹರಸಾಹಸ ಪಟ್ಟು ತಹಬದಿಗೆ ತಂದರು. ಅಗ್ನಿ ಅವಘಡದಿಂದಾಗಿ ಸುಮಾರು 5 ಕೋಟಿ ರೂ. ಮೌಲ್ಯದ ನಷ್ಟವುಂಟಾಗಿದೆ ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಕೆಂಗೇರಿ ಪೊೀಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊೀಲಿಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

#5croreworth, #shoeslippers, #burnt, #FireAccident, #Bengaluru,

- Advertisement -
RELATED ARTICLES
- Advertisment -

Most Popular