ಐವರು ಐಪಿಎಸ್ ಅಧಿಕಾರಿಗಳ ವರ್ಗಾವಣೆ

Social Share

ಬೆಂಗಳೂರು, ನ.17- ರಾಜ್ಯ ಸರ್ಕಾರ ಐವರು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.ಅಪರಾಧ ತನಿಖಾ ವಿಭಾಗದ ಎಸ್ಪಿ ಹುದ್ದೆಗೆ ಎಸ್.ಸವಿತಾ, ಕಲಬುರಗಿಯ ಪೊಲೀಸ್ ತರಬೇತಿ ಶಾಲೆಯ ಉಪ ಪ್ರಾಂಶುಪಾಲ ಹುದ್ದೆಗೆ ಡಾ.ಕೆ.ಅರುಣ್ ಅವರನ್ನು ವರ್ಗಾವಣೆ ಮಾಡಲಾಗಿದೆ.

ರೈಲ್ವೆ ಪೊಲೀಸ್ ಎಸ್ಪಿ ಹುದ್ದೆಗೆ ಡಾ.ಎಸ್.ಕೆ.ಸೌಮ್ಯಲತಾ ಅವರನ್ನು ವರ್ಗಾವಣೆ ಮಾಡಲಾಗಿದೆ.ರೈಲ್ವೆ ಎಸ್ಪಿ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಡಿ.ಆರ್.ಸಿರಿಗೌರಿ ಅವರನ್ನು ವರ್ಗಾವಣೆ ಮಾಡಲಾಗಿದೆ.

ವರ್ಷಕ್ಕೊಮ್ಮೆ ನೀರಿನ ದರ ಏರಿಸಲು ಜಲಮಂಡಳಿ ಪ್ರಸ್ತಾಪ

ಬೆಂಗಳೂರು ನಗರದ ಸಂಚಾರ ಉತ್ತರ ವಿಭಾಗದ ಉಪ ಪೊಲೀಸ್ ಆಯುಕ್ತರ ಹುದ್ದೆಗೆ ಸಚ್ಚಿನ್ ಘೋರ್ಪಡೆ ಅವರನ್ನು ವರ್ಗಾವಣೆ ಮಾಡಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಆದೇಶ ಹೊರಡಿಸಿದೆ.

#IPS, #IPSOffiers, #Transfer, #Govt, ##IPSOffiersTransfer, #ವರ್ಗಾವಣೆ,

Articles You Might Like

Share This Article