ಲಖ್ನೋ,ಜು.23- ಕನ್ವರ್ ಯಾತ್ರೆಗೆ ತೆರಳುತ್ತಿದ್ದ ವೇಗವಾಗಿ ಟ್ರಕ್ ಬಂದ ಟ್ರಕ್ ಹರಿದ ಪರಿಣಾಮ ಐವರು ಸ್ಥಳದಲ್ಲೇ ಮೃತಪಟ್ಟರೆ, ಒಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿರುವ ಘಟನೆ ಇಂದು ಬೆಳಗಿನಜಾವ 2.15ರಲ್ಲಿ ನಡೆದಿದೆ.
ಗ್ವಾಲಿಯರ್‍ನಿಂದ ಬಂದ ಕನ್ವರಿಯಾಗಳು(ಭಕ್ತರು) ಹರಿದ್ವಾರದಿಂದ ಹಿಂತಿರುಗುತ್ತಿದ್ದಾಗ ಬೆಳಗಿನ ಜಾವ 2.15ರ ಸುಮಾರಿಗೆ ಟ್ರಕ್ ಇವರ ಮೇಲೆ ಹರಿದು ಈ ದುರ್ಘಟನೆ ಸಂಭವಿಸಿದೆ.
ಘಟನೆಯ ಕುರಿತು ತನಿಖೆ ನಡೆಯುತ್ತಿದ್ದು, ಟ್ರಕ್ ಚಾಲಕನ ಬಗ್ಗೆ ಮಾಹಿತಿ ಸಿಕ್ಕಿದೆ ಶೀಘ್ರವೇ ಆರೋಪಿಯನ್ನು ಬಂಧಿಸಲಾಗುವುದು ಎಂದು ಆಗ್ರಾ ವಲಯದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ರಾಜೀವ್ ಕೃಷ್ಣ ತಿಳಿಸಿದ್ದಾರೆ.
ಈ ವಾರದ ಆರಂಭದಲ್ಲಿ ಹರಿದ್ವಾರದಲ್ಲಿ ಸ್ನಾನ ಮಾಡುವಾಗ ಗಂಗಾ ನದಿಯ ಪ್ರವಾಹಕ್ಕೆ ಏಳು ಕನ್ವಾರಿಯಾಗಳು ಕೊಚ್ಚಿಹೋಗಿದ್ದರು. ಸೇನೆ ಮತ್ತು ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಅವರನ್ನು ರಕ್ಷಿಸಲಾಗಿತ್ತು.
ಗಂಗಾಘಾಟ್‍ಗಳಲ್ಲಿರುವ ಭಕ್ತರು ನದಿಯ ಬಲವಾದ ಪ್ರವಾಹದಿಂದ ದೂರವಿರುವಂತೆ ಅವರು ಒತ್ತಾಯಿಸಿದರು. ನಿನ್ನೆಯೂ ಕೂಡ ಮಹಿಳೆಯೊಬ್ಬರು ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿದ್ದರು. ಅವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸಂಪೂರ್ಣ ಸುರಕ್ಷಿತವಾಗಿದ್ದಾರೆ ಎಂದು ವಲಯ ಮ್ಯಾಜಿಸ್ಟ್ರೇಟ್ ನರೇಶ್ ಚೌಧರಿ ತಿಳಿಸಿದ್ದಾರೆ.
ಈ ಬೆನ್ನಲ್ಲಿ ಈ ಅಪಘಾತ ಸಂಭವಿಸಿ ಆರು ಮಂದಿ ಭಕ್ತರು ಸಾವನ್ನಪ್ಪಿದ್ದಾರೆ. ಭಗವಾನ್ ಶಿವನ ಭಕ್ತರು ಉತ್ತರಾಖಂಡದ ಹರಿದ್ವಾರ, ಋಷಿಕೇಶ, ಗೌಮುಖ ಮತ್ತು ಇತರ ಸ್ಥಳಗಳಿಗೆ ಕಾಲ್ನಡಿಗೆಯಲ್ಲಿ ನಡೆದು ಗಂಗಾ ನದಿಯ ನೀರನ್ನು ಶ್ರಾವಣದಲ್ಲಿ ತಂದು ದೇವರಿಗೆ ಅರ್ಪಿಸುತ್ತಾರೆ. ಕಾಲ್ನಡಿಗೆ ವೇಳೆ ಟ್ರಕ್ ಅಪಘಾತದ ದುರಂತ ಸಂಭವಿಸಿದೆ.