ಯೂಟ್ಯೂಬ್‌ ನೋಡಿ ತಯಾರಿಸಿದ್ದ ಬಾಂಬ್‌ ಸ್ಫೋಟ, ಬಾಲಕರಿಗೆ ಗಾಯ

ಪಾಟ್ನಾ,ಆ.9- ಯೂಟ್ಯೂಬ್‌ ನೋಡಿ ಮಕ್ಕಳು ತಯಾರಿಸಿದ್ದ ಬಾಂಬ್‌ ಸ್ಫೋಟಿಸಿ ಓರ್ವ ಬಾಲಕ ಗಂಭೀರವಾಗಿ ಗಾಯಗೊಂಡಿರುವ ಘಟನೆ ಬಿಹಾರದ ಮುಜಾಫರ್‌ ಜಿಲ್ಲೆಯಲ್ಲಿ ನಡೆದಿದೆ. ಮುಜಾಫರ್‌ಪುರ ಜಿಲ್ಲೆಯಲ್ಲಿ ಐವರು ಮಕ್ಕಳು ಯೂಟ್ಯೂಬ್‌ ನೋಡಿ ಬಾಂಬ್‌ ತಯಾರಿಸಲು ಮುಂದಾಗಿದ್ದರು. ಬೆಂಕಿಕಡ್ಡಿಗಳಿಂದ ಹಿಡಿದು ಗನ್‌ಪೌಡರ್‌ನವರೆಗೆ ಎಲ್ಲವನ್ನೂ ಸಂಗ್ರಹಿಸಿ ಟಾರ್ಚ್‌ಲೈಟ್‌ಗೆ ಸುರಿದು ಬಾಂಬ್‌ ಒಂದನ್ನು ತಯಾರಿಸಿದ್ದರು ಅದು ಏಕಾಏಕಿ ಸ್ಫೋಟಗೊಂಡ ಪರಿಣಾಮ ಒಂದು ಮಗು ಗಂಭೀರವಾಗಿ ಗಾಯಗೊಂಡಿದ್ದು,ಉಳಿದ ನಾಲ್ಕು ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ಗೈಘಾಟ್‌ ಪೊಲೀಸ್‌‍ ಠಾಣೆ ವ್ಯಾಪ್ತಿಯ ಮುನ್ನಿ ಬಂಗ್ರಾ … Continue reading ಯೂಟ್ಯೂಬ್‌ ನೋಡಿ ತಯಾರಿಸಿದ್ದ ಬಾಂಬ್‌ ಸ್ಫೋಟ, ಬಾಲಕರಿಗೆ ಗಾಯ