ಅಹಮದಾಬಾದ್ , ಜ.9 ಗುಜರಾತ್‍ನ ಅಹಮದಾಬಾದ್ ಜಿಲ್ಲೆಯ ಧೋಲ್ಕಾ ಪಟ್ಟಣದ ಬಳಿ ಇಂದು ಮುಂಜಾನೆ ಮಿನಿವ್ಯಾನ್‍ಗೆ ಅಪರಿಚಿತ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಐವರು ಸಾವನ್ನಪ್ಪಿದ್ದಾರೆ ಮತ್ತು 10 ಮಂದಿ ಗಾಯಗೊಂಡಿದ್ದಾರೆ
ವಡೋದರಾದಿಂದ ವ್ಯಾನ್‍ನಲ್ಲಿ 15 ಪ್ರಯಾಣಿಕರು ಬೊಟಾಡ್ ಜಿಲ್ಲೆಯ ದೇವಸ್ಥಾನವೊಂದರಲ್ಲಿ ಪ್ರಾರ್ಥನೆ ಸಲ್ಲಿಸಲು ಹೋಗುತ್ತಿದ್ದಾಗ ರಾಜ್ಯ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದೆ ಎಂದು ಧೋಲ್ಕಾ ಪಟ್ಟಣ ಪೊಲೀಸ್ ಠಾಣೆಯ ಅಕಾರಿಯೊಬ್ಬರು ತಿಳಿಸಿದ್ದಾರೆ.
ವೇಗವಾಗಿ ಬರುತ್ತಿದ್ದ ಮಿನಿವ್ಯಾನ್ ಮುಂದೆ ಸಾಗುತ್ತಿದ್ದ ವಾಹನ ಏಕಾಏಕಿ ನಿಂತ ಕಾರಣ ಡಿಕ್ಕಿ ಹೊಡೆದು ಭೀಕರ ಅಪಘತಾ ಸಂಭವಿಸಿದೆ.ವ್ಯಾಣ್ ಚಾಲಕ ಸೇರಿ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.ಸುದ್ದಿ ತಿಳಿದ ಪೊಲಿಸರು ಸ್ಥಳಕ್ಕೆ ದಾವಿಸಿ ಗಾಯಾಳುಗಳನ್ನುಆಸ್ಪತ್ರೆಗೆ ದಾಖಲಿಸಿದ್ದು ತುರ್ತು ಚಿಕಿತ್ಸೆ ನೀಡಲಾಗುತ್ತಿದೆ.
ಮೃತರಲ್ಲಿ ಮೂವರು ಮಹಿಳೆಯರು ಹಾಗೂ ಇಬ್ಬರು ಪುರುಷರು ಸೇರಿದ್ದಾರೆ. ಅಪಘಾತಕ್ಕೆ ಕಾರಣವಾದ ವಾಹನ ಪತ್ತೆಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ
