ಅಮೆರಿಕದಲ್ಲಿ ಗುಂಡಿನ ದಾಳಿಗೆ ಪೊಲೀಸ್ ಅಧಿಕಾರಿ ಸೇರಿ ಐವರ ಸಾವು

Social Share

ವಾಷಿಂಗ್ಟನ್.ಅ.14-ಅಮೆರಿಕದ ಉತ್ತರ ಕೆರೊಲಿನಾದ ರಾಜಧಾನಿ ರೇಲಿಯಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಕರ್ತವ್ಯ ನಿರತ ಪೊಲೀಸ್ ಅಧಿಕಾರಿ ಸೇರಿದಂತೆ ಐದು ಜನರು ಸಾವನ್ನಪ್ಪಿದ್ದಾರೆ. ಮೇರಿ-ಆನ್ ಬಾಲ್ಡ್ವಿನ್ ಪ್ರದೇಶದ ಜನಪ್ರಿಯ ಜಾಡು ನ್ಯೂಸ್ ನದಿಯ ಗ್ರೀನ್ವೇ ಬಳಿ ಗುಂಡಿನ ದಾಳಿ ನಡೆದಿದೆ ಪೊಲೀಸರು ತಿಳಿಸಿದ್ದಾರೆ.

ಜನರ ಗುಂಪು ಸಂತಸದಲ್ಲಿ ಒಡಾಡುವಾಗ ಏಕಾಏಕಿ ವ್ಯಕ್ತಿಯೊಬ್ಬ ಬಂದೂಕಿನಿಂದ ಗುಂಡು ಹಾರಿಸಿದ್ದಾನೆ ಅಲ್ಲೇ ಇದ್ದ ಪೊಲೀಸ್ ಅಧಿಕಾರಿಯೊಬ್ಬರು ಜನರ ರಕ್ಷಣೆಗೆ ಮುಂದಾಗಿದ್ದು ಈ ವೇಳೆ ಅವರಿಗೂ ಗುಂಡು ತಾಗಿದೆ,ಇದರ ಜೊತೆಗೆ ಹಲವರು ಗಾಯಗೊಂಡು.

ರೇಲಿ ಪೊಲೀಸ್ ಪಡೆ ಸ್ಥಳಕ್ಕೆ ದಾವಿಸಿದಾಗ ನಾಲ್ವರು ಕೊನೆಯುಸಿರೆಳೆದಿದ್ದರು,ಉಸಿರಾಡುತ್ತಿದ್ದ ಪೊಲೀಸ್ ಅಕಾರಿಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು ಆದರೆ ಮಾರ್ಗ ಮಧ್ಯನಮ್ಮನ್ನು ಅಗಲಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದು ರೇಲಿ ನಗರಕ್ಕೆ ದುಃಖ ಮತ್ತು ದುರಂತದ ದಿನವಾಗಿದೆ,ಆರೋಪಿಯನ್ನು ಪೊಲೀಸರು ಸೆರೆಹಿಡಿದಿದ್ದಾರೆ ಎಂದು ಹೇಳಿದರು.ಅಮೆರಿಕದಲ್ಲಿ ಹಿಂಸಾಚಾರವು ಒಂದು ಪ್ರಮುಖ ಸಮಸ್ಯೆಯಾಗಿದೆ ಕಳೆದ 2022 ರಲ್ಲಿ ಇಲ್ಲಿಯವರೆಗೆ ಸಾವಿರಾರು ಜನರು ಗುಂಡಿನ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ, ಅದರಲ್ಲಿ ಅರ್ಧಕ್ಕಿಂತ ಹೆಚ್ಚು ಜನರು ಆತ್ಮಹತ್ಯೆಯಿಂದ ಸಾವನ್ನಪ್ಪಿದ್ದಾರೆ.ಶಸ್ತ್ರಗಳನ್ನು ಮುಕ್ತವಾಗಿ ಮಾರಾಟ ಮಾಡುವುದನ್ನು ನಿಷೇಸಬೇಕು ಎಂಬ ಕೂಗು ಆರಂಭವಾಗಿದೆ.

Articles You Might Like

Share This Article